AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Australia: 1 ದೇಶ 21 ಐಸಿಸಿ ಟ್ರೋಫಿ: ಕ್ರಿಕೆಟ್​ ಅಂಗಳದಲ್ಲಿ ಆಸ್ಟ್ರೇಲಿಯಾ ತಂಡದ್ದೇ ದರ್ಬಾರ್..!

Australia Team: ಆಸ್ಟ್ರೇಲಿಯಾ ತಂಡವು ಕ್ರಿಕೆಟ್​ ಅಂಗಳದಲ್ಲಿ ಗೆಲ್ಲದ ಮಹತ್ವದ ಟೂರ್ನಿಗಳಿಲ್ಲ ಎಂಬುದೇ ಇಲ್ಲಿ ಮತ್ತೊಂದು ವಿಶೇಷ. ಅಂದರೆ ಏಕದಿನ ವಿಶ್ವಕಪ್, ಟಿ20 ವಿಶ್ವಕಪ್, ಚಾಂಪಿಯನ್ಸ್​ ಟ್ರೋಫಿ...ಎಲ್ಲವನ್ನೂ ಆಸ್ಟ್ರೇಲಿಯಾ ಪುರುಷ ಮತ್ತು ಮಹಿಳಾ ತಂಡಗಳು ಮುಡಿಗೇರಿಸಿಕೊಂಡಿದೆ.

TV9 Web
| Edited By: |

Updated on: Feb 27, 2023 | 7:22 PM

Share
ಆಸ್ಟ್ರೇಲಿಯಾ ಟೀಮ್...ಪ್ರಸ್ತುತ ಕ್ರಿಕೆಟ್​ ಅಂಗಳವನ್ನು ಆಳುತ್ತಿರುವ ತಂಡ ಎಂದರೆ ತಪ್ಪಾಗಲಾರದು. ಇದಕ್ಕೆ ಈ ಅಂಕಿ ಅಂಶಗಳೇ ಸಾಕ್ಷಿ. ಏಕೆಂದರೆ ಮಹಿಳಾ ಕ್ರಿಕೆಟ್ ಇರಲಿ, ಪುರುಷರ ಕ್ರಿಕೆಟ್ ಆಗಿರಲಿ...ಅತ್ಯಧಿಕ ಐಸಿಸಿ ಟ್ರೋಫಿ ಗೆದ್ದಿರುವ ತಂಡ ಆಸ್ಟ್ರೇಲಿಯಾ.

1 / 9
ಆಸ್ಟ್ರೇಲಿಯಾ ತಂಡವು ಕ್ರಿಕೆಟ್​ ಅಂಗಳದಲ್ಲಿ ಗೆಲ್ಲದ ಮಹತ್ವದ ಟೂರ್ನಿಗಳಿಲ್ಲ ಎಂಬುದೇ ಇಲ್ಲಿ ಮತ್ತೊಂದು ವಿಶೇಷ. ಅಂದರೆ ಏಕದಿನ ವಿಶ್ವಕಪ್, ಟಿ20 ವಿಶ್ವಕಪ್, ಚಾಂಪಿಯನ್ಸ್​ ಟ್ರೋಫಿ...ಎಲ್ಲವನ್ನೂ ಆಸ್ಟ್ರೇಲಿಯಾ ಪುರುಷ ಮತ್ತು ಮಹಿಳಾ ತಂಡಗಳು ಮುಡಿಗೇರಿಸಿಕೊಂಡಿದೆ.

2 / 9
1978 ರಿಂದ ಶುರುವಾದ ಆಸ್ಟ್ರೇಲಿಯಾ ತಂಡದ ವಿಶ್ವಕಪ್ ಬೇಟೆ ಇದೀಗ 2023 ಕ್ಕೆ ಬಂದು ನಿಂತಿದೆ. ಮಹಿಳಾ ಟಿ20 ವಿಶ್ವಕಪ್​ನಲ್ಲಿ ಸೌತ್ ಆಫ್ರಿಕಾ ತಂಡವನ್ನು ಸೋಲಿಸಿ ಆಸೀಸ್ ಮಹಿಳೆಯರು 6ನೇ ಬಾರಿಗೆ ಕಿರೀಟವನ್ನು ತನ್ನದಾಗಿಸಿಕೊಂಡಿದೆ.

3 / 9
ವಿಶೇಷ ಎಂದರೆ ಕಳೆದ 45 ವರ್ಷಗಳಲ್ಲಿ ನಡೆದ ವಿಶ್ವಕಪ್​ ಹಾಗೂ ಇತರೆ ಐಸಿಸಿ ಟೂರ್ನಿಗಳಲ್ಲಿ 21 ಬಾರಿ ಆಸ್ಟ್ರೇಲಿಯಾ ತಂಡವೇ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಇದರ ನಡುವೆ ಟೀಮ್ ಇಂಡಿಯಾ ಗೆದ್ದಿರುವುದು ಕೇವಲ 5 ಐಸಿಸಿ ಟ್ರೋಫಿಗಳನ್ನು ಮಾತ್ರ ಎಂಬುದು ಇಲ್ಲಿ ಉಲ್ಲೇಖಾರ್ಹ. ಭಾರತ ತಂಡವು ಇದುವರೆಗೆ 3 ವಿಶ್ವಕಪ್ ಹಾಗೂ 2 ಚಾಂಪಿಯನ್ಸ್ ಟ್ರೋಫಿ ಗೆಲ್ಲುವಲ್ಲಿ ಮಾತ್ರ ಯಶಸ್ವಿಯಾಗಿದೆ.

4 / 9
1978 ರಲ್ಲಿ ಆಸ್ಟ್ರೇಲಿಯಾ ಮಹಿಳಾ ತಂಡವು ಮೊದಲ ಬಾರಿಗೆ ಏಕದಿನ ವಿಶ್ವಕಪ್​ ಗೆದ್ದುಕೊಂಡಿತ್ತು. ಇದಾದ ಬಳಿಕ 1982, 1988, 1997, 2005, 2013 ರಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಇದರ ನಡುವೆ ಆಸೀಸ್ ಮಹಿಳಾ ತಂಡವು ವಿಶ್ವಕಪ್​ ಗೆಲ್ಲುವಲ್ಲಿ ಎಡವಿದರೂ,  2022 ರಲ್ಲಿ ಮೆಗ್ ಲ್ಯಾನಿಂಗ್ ನಾಯಕತ್ವದಲ್ಲಿ ಮತ್ತೆ ವಿಶ್ವ ಕಿರೀಟವನ್ನು ತನ್ನದಾಗಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು. ಅಂದರೆ ಆಸ್ಟ್ರೇಲಿಯಾ ಮಹಿಳಾ ತಂಡವು ಇದುವರೆಗೆ 7 ಏಕದಿನ ವಿಶ್ವಕಪ್​ಗಳನ್ನು​ ಗೆದ್ದುಕೊಂಡಿದೆ.

5 / 9
ಇದರ ನಡುವೆ ಆಸ್ಟ್ರೇಲಿಯಾ ಪುರುಷರ ತಂಡವು 1987 ರ ಏಕದಿನ ವಿಶ್ವಕಪ್ ಗೆಲ್ಲುವ ಮೂಲಕ ಹೊಸ ಅಭಿಯಾನ ಆರಂಭಿಸಿತ್ತು. ಇದಾದ ಬಳಿಕ 2ನೇ ವಿಶ್ವಕಪ್ ಗೆಲ್ಲಲು ಆಸೀಸ್ ಪಡೆ 12 ವರ್ಷಗಳನ್ನೇ ಕಾಯಬೇಕಾಯಿತು. 1999 ರ ವಿಶ್ವಕಪ್ ಗೆಲುವಿನ ಬಳಿಕ 2003, 2007 ರಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿ ಹ್ಯಾಟ್ರಿಕ್ ಸಾಧನೆ ಮಾಡಿತು. ಇನ್ನು ಆಸ್ಟ್ರೇಲಿಯಾ ಕೊನೆಯ ಬಾರಿಗೆ ಏಕದಿನ ವಿಶ್ವಕಪ್ ಗೆದ್ದಿರುವುದು 2015 ರಲ್ಲಿ. ಅದರಂತೆ ಆಸ್ಟ್ರೇಲಿಯಾ ಪುರುಷರ ತಂಡ ಒಟ್ಟು 5 ಏಕದಿನ ವಿಶ್ವಕಪ್​ಗಳನ್ನು ಗೆದ್ದುಕೊಂಡಿದೆ.

6 / 9
ಇನ್ನು ಮಹಿಳಾ ಟಿ20 ವಿಶ್ವಕಪ್​ನಲ್ಲಿ ಆಸ್ಟ್ರೇಲಿಯಾ ವನಿತೆಯರದ್ದೇ ಪಾರುಪತ್ಯ. 2010, 2012, 2014, 2018, 2020 ರಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದ ಆಸ್ಟ್ರೇಲಿಯಾ ತಂಡವು ಇದೀಗ 2023ರ ಟಿ20 ವಿಶ್ವಕಪ್ ಗೆದ್ದುಕೊಂಡಿದೆ. ಈ ಮೂಲಕ 6ನೇ ಬಾರಿ ಮಹಿಳಾ ಟಿ20 ವಿಶ್ವಕಪ್ ಕಿರೀಟವನ್ನು ಮುಡಿಗೇರಿಸಿಕೊಂಡಿದೆ.

7 / 9
ಮತ್ತೊಂದೆಡೆ ಟಿ20 ವಿಶ್ವಕಪ್​ನಲ್ಲಿ ಪುರುಷರ ತಂಡ ಹಿಂದೆ ಉಳಿದಿದೆ ಎಂದೇ ಹೇಳಬಹುದು. ಏಕೆಂದರೆ ಕಳೆದ 15 ವರ್ಷಗಳಲ್ಲಿ ನಡೆದ ಟಿ20 ವಿಶ್ವಕಪ್​ನಲ್ಲಿ ಆಸ್ಟ್ರೇಲಿಯಾ ತಂಡವು 2021 ರಲ್ಲಿ ಮಾತ್ರ ಚಾಂಪಿಯನ್ ಪಟ್ಟ ಅಲಂಕರಿಸಿದೆ.

8 / 9
ಇದರ ಹೊರತಾಗಿ ಆಸ್ಟ್ರೇಲಿಯಾ ತಂಡವು 2006 ಮತ್ತು 2009 ರಲ್ಲಿ ಚಾಂಪಿಯನ್ ಟ್ರೋಫಿಯನ್ನು ಕೂಡ ಗೆದ್ದುಕೊಂಡಿತ್ತು. ಅಂದರೆ ಕಳೆದ 45 ವರ್ಷಗಳಲ್ಲಿ ನಡೆದ ಐಸಿಸಿ ಟೂರ್ನಿಗಳಲ್ಲಿ ಆಸ್ಟ್ರೇಲಿಯಾ ತಂಡವೇ 21 ಬಾರಿ ಚಾಂಪಿಯನ್​ ಪಟ್ಟ ಅಲಂಕರಿಸಿರುವುದು ವಿಶೇಷ.

9 / 9
ನ್ಯೂಇಯರ್ ಸೆಲೆಬ್ರೇಷನ್​​​ ಮುನ್ನ ಮಳೆ ಎಂಟ್ರಿ: ಪಾರ್ಟಿ ಪ್ರಿಯರಿಗೆ ಶಾಕ್!​

ಅಭಿಮಾನಿಗಳ ಜೊತೆ ಸಿನಿಮಾ ನೋಡುತ್ತಿರುವ ಉದ್ದೇಶ ಏನು? ಸುದೀಪ್ ಉತ್ತರ

ಕಳೆದು ಹೋಗಿದ್ದ ಬಾಲಕಿಯನ್ನು ಮರಳಿ ತಾಯಿ ಮಡಿಲಿಗೆ ಸೇರಿಸಿದ ಪೊಲೀಸರು

ನನ್ನ ಮಗಳು ಸರಿಯಾಗಿಯೇ ಹೇಳಿದ್ದಾಳೆ: ಸುದೀಪ್
ನನ್ನ ಮಗಳು ಸರಿಯಾಗಿಯೇ ಹೇಳಿದ್ದಾಳೆ: ಸುದೀಪ್
ಸ್ಟ್ರೋಕ್ ಗೆ ಒಳಗಾದವರನ್ನು ಎಷ್ಟು ಸಮಯದೊಳಗೆ ಆಸ್ಪತ್ರೆಗೆ ದಾಖಲಿಸಬೇಕು?

ಇಂದೋರ್‌ನಲ್ಲಿ ಕಲುಷಿತ ನೀರು ಕುಡಿದು 7 ಜನ ಸಾವು; ಆಸ್ಪತ್ರೆಗೆ ಸಿಎಂ ಭೇಟಿ

ಬಸ್ಸಿನಲ್ಲಿ ನಿದ್ದೆಗೆ ಜಾರಿದ್ದ ವೇಳೆ ಯುವತಿಯ ಎದೆ ಮೇಲೆ ಕೈ ಇಟ್ಟ ಯುವಕ

ಪುರಿ ಜಗನ್ನಾಥ ದೇವಸ್ಥಾನದಲ್ಲಿ ಈ ವರ್ಷದ ಕೊನೆಯ ಸೂರ್ಯಾಸ್ತ ಕಂಡಿದ್ದು ಹೀಗೆ

ಬೆಂಗಳೂರಲ್ಲಿ ಪಬ್​​ಗಳತ್ತ ಮುಖ ಮಾಡಿದ ಜನ: ಸಿಲಿಕಾನ್​​ ಸಿಟಿ ಫುಲ್​​ ಝಗಮಗ

ವರ್ಷದ ಕೊನೆಯ ಸೂರ್ಯಾಸ್ತ: ನಯನ ಮನೋಹರ ದೃಶ್ಯ ಸೆರೆ