- Kannada News Photo gallery Cricket photos Babar Azam's incredible wait for a Test century has hit 1030 days
ಶತಕವಿಲ್ಲದೆ ಸಾವಿರ ದಿನಗಳನ್ನು ಪೂರೈಸಿದ ಬಾಬರ್ ಆಝಂ
Pakistan vs South Africa, 2nd Test: ರಾವಲ್ಪಿಂಡಿಯಲ್ಲಿ ನಡೆಯುತ್ತಿರುವ ಸೌತ್ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡುತ್ತಿರುವ ಪಾಕಿಸ್ತಾನ್ ತಂಡವು ಮೊದಲ ದಿನದಾಟದ ಅಂತ್ಯಕ್ಕೆ 5 ವಿಕೆಟ್ ಕಳೆದುಕೊಂಡು 259 ರನ್ ಕಲೆಹಾಕಿದೆ.
Updated on:Oct 21, 2025 | 9:54 AM

ಪಾಕಿಸ್ತಾನ್ ತಂಡದ ಸ್ಟಾರ್ ಬ್ಯಾಟರ್ ಬಾಬರ್ ಆಝಂ ಟೆಸ್ಟ್ ಶತಕ ಬಾರಿಸದೇ ಮೂರು ವರ್ಷಗಳೇ ಕಳೆದಿವೆ. ಈ ಕಾಯುವಿಕೆ ಇದೀಗ ಸೌತ್ ಆಫ್ರಿಕಾ ವಿರುದ್ಧದ ಸರಣಿಯಲ್ಲೂ ಮುಂದುವರೆದಿದೆ. ಲಾಹೋರ್ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಬಾಬರ್ 23, 42 ರನ್ಗಳಿಸಿ ಔಟಾಗಿದ್ದರು.

ಇದೀಗ ರಾವಲ್ಪಿಂಡಿಯಲ್ಲಿ ನಡೆಯುತ್ತಿರುವ ಸೌತ್ ಆಫ್ರಿಕಾ ವಿರುದ್ಧದ 2ನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಕೇವಲ 16 ರನ್ಗಳಿಸಿ ವಿಕೆಟ್ ಒಪ್ಪಿಸಿದ್ದಾರೆ. ಅಂದರೆ 2022 ರಿಂದ 28 ಟೆಸ್ಟ್ ಇನಿಂಗ್ಸ್ ಆಡಿರುವ ಬಾಬರ್ ಒಂದೇ ಒಂದು ಸೆಂಚುರಿ ಬಾರಿಸಲು ಸಾಧ್ಯವಾಗಿಲ್ಲ.

ಇನ್ನು ಬಾಬರ್ ಆಝಂ ಕೊನೆಯ ಬಾರಿಗೆ ಟೆಸ್ಟ್ ಸೆಂಚುರಿ ಸಿಡಿಸಿದ್ದು 2022 ರಲ್ಲಿ. ಕರಾಚಿಯಲ್ಲಿ ನಡೆದ ನ್ಯೂಝಿಲೆಂಡ್ ವಿರುದ್ಧದ ಪಂದ್ಯದಲ್ಲಿ 161 ರನ್ ಬಾರಿಸಿದ್ದು ಕೊನೆ. ಇದಾದ ಬಳಿಕ ಅವರಿಗೆ ಮೂರಂಕಿ ಮೊತ್ತ ಗಳಿಸಲು ಸಾಧ್ಯವಾಗಿಲ್ಲ ಎಂಬುದೇ ಅಚ್ಚರಿ.

ಅಷ್ಟೇ ಅಲ್ಲದೆ ಕಳೆದ 28 ಟೆಸ್ಟ್ ಇನಿಂಗ್ಸ್ಗಳಲ್ಲಿ ಕಲೆಹಾಕಿದ್ದು ಕೇವಲ 651 ರನ್ಗಳು ಮಾತ್ರ. ಇದರ ನಡುವೆ ಬಾರಿಸಿರುವುದು ಕೇವಲ 3 ಅರ್ಧಶತಕಗಳನ್ನು ಮಾತ್ರ ಎಂದರೆ ನಂಬಲೇಬೇಕು. ಅಂದರೆ ಕೇವಲ 24 ರ ಸರಾಸರಿಯಲ್ಲಿ ರನ್ ಕಲೆಹಾಕಿರುವ ಬಾಬರ್ ಆಝಂ ಅವರನ್ನು ತಂಡದಿಂದ ಕೈ ಬಿಡಬೇಕೆಂಬ ಕೂಗುಗಳು ಕೇಳಿ ಬರಲಾರಂಭಿಸಿದೆ.

ಒಟ್ಟಿನಲ್ಲಿ 1030 ದಿನಗಳಿಂದ ಟೆಸ್ಟ್ ಶತಕದ ಬರ ಅನುಭವಿಸುತ್ತಿರುವ ಬಾಬರ್ ಆಝಂ ಇದೀಗ ಟೆಸ್ಟ್ ತಂಡದಿಂದಲೇ ಹೊರಬೀಳುವ ಭೀತಿಯಲ್ಲಿದ್ದಾರೆ. ಇದಾಗ್ಯೂ ಸೌತ್ ಆಫ್ರಿಕಾ ವಿರುದ್ಧದ 2ನೇ ಟೆಸ್ಟ್ ಪಂದ್ಯದ ದ್ವಿತೀಯ ಇನಿಂಗ್ಸ್ ಮೂಲಕ ಸಾವಿರ ದಿನಗಳ ಕಾಯುವಿಕೆಯನ್ನು ಅಂತ್ಯಗೊಳಿಸಲಿದ್ದಾರಾ ಕಾದು ನೋಡಬೇಕಿದೆ.
Published On - 9:53 am, Tue, 21 October 25




