AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕ್ರಿಕೆಟ್ ಪ್ರಿಯರಿಗೆ ರಸದೌತಣ: 3 ತಿಂಗಳಲ್ಲಿ 4 ಟಿ20 ಲೀಗ್..!

T20 Leagues: ಡಿಸೆಂಬರ್-ಫೆಬ್ರವರಿ ನಡುವೆ ನಾಲ್ಕು ಟಿ20 ಲೀಗ್​​ಗಳು ಜರುಗಲಿದೆ. ಇದರ ಬೆನ್ನಲ್ಲೇ ಚಾಂಪಿಯನ್ಸ್ ಟ್ರೋಫಿ ಕೂಡ ಆರಂಭವಾಗಲಿದೆ. ಇನ್ನು ಚಾಂಪಿಯನ್ಸ್ ಟ್ರೋಫಿ ಮುಕ್ತಾಯದ ಬೆನ್ನಲ್ಲೇ ಇಂಡಿಯನ್ ಪ್ರೀಮಿಯರ್ ಲೀಗ್​ಗೆ ಚಾಲನೆ ದೊರೆಯಲಿದೆ. ಅಂದರೆ ಮುಂದಿನ ಕೆಲ ತಿಂಗಳುಗಳವರೆಗೆ ಕ್ರಿಕೆಟ್ ಪ್ರಿಯರಿಗೆ ಮನರಂಜನೆಯ ರಸದೌತಣ ಸಿಗುವುದು ಖಚಿತ.

ಝಾಹಿರ್ ಯೂಸುಫ್
|

Updated on: Dec 15, 2024 | 6:53 AM

Share
ಒಂದೆಡೆ ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಟೆಸ್ಟ್​ ಸರಣಿ, ಮತ್ತೊಂದೆಡೆ ಇಂಗ್ಲೆಂಡ್ ಮತ್ತು ನ್ಯೂಝಿಲೆಂಡ್ ನಡವೆ ಟೆಸ್ಟ್ ಪಂದ್ಯಾಟ... ಈ ಪಂದ್ಯಗಳ ನಡುವೆಯೇ ಟಿ20 ಲೀಗ್​ಗಳು ಕೂಡ ಶುರುವಾಗುತ್ತಿದೆ. ಅದು ಕೂಡ ಆಸ್ಟ್ರೇಲಿಯಾ, ಬಾಂಗ್ಲಾದೇಶ್, ಸೌತ್ ಆಫ್ರಿಕಾ ಮತ್ತು ಯುಎಇ ನಲ್ಲಿ ಎಂಬುದು ವಿಶೇಷ.

1 / 6
ಅಂದರೆ ಮುಂದಿನ ಮೂರು ತಿಂಗಳಲ್ಲಿ ನಾಲ್ಕು ಟಿ20 ಲೀಗ್​​ಗಳು ಆರಂಭವಾಗುತ್ತಿದೆ. ಅದರಲ್ಲೂ ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಟೆಸ್ಟ್ ಸರಣಿಯ ನಡುವೆಯೇ ಕಾಂಗರೂ ನಾಡಿನಲ್ಲಿ ಬಿಗ್ ಬ್ಯಾಷ್ ಲೀಗ್​ಗೆ ಚಾಲನೆ ನೀಡಲಾಗುತ್ತಿದೆ. ಹೀಗೆ ಮುಂದಿನ ಮೂರು ತಿಂಗಳಲ್ಲಿ ನಡೆಯಲಿರುವ ನಾಲ್ಕು ಟಿ20 ಲೀಗ್​​ಗಳ ಸಂಪೂರ್ಣ ಮಾಹಿತಿ ಇಲ್ಲಿದೆ...

2 / 6
ಬಿಗ್ ಬ್ಯಾಷ್ ಲೀಗ್: ಆಸ್ಟ್ರೇಲಿಯಾ ಕ್ರಿಕೆಟ್ ಬೋರ್ಡ್ ಆಯೋಜಿಸುವ ಬಿಗ್ ಬ್ಯಾಷ್ ಲೀಗ್ ಟಿ20 ಟೂರ್ನಿಯು ಡಿಸೆಂಬರ್ 15 ರಿಂದ ಜನವರಿ 27, 2025 ರವರೆಗೆ ನಡೆಯಲಿದೆ. ಈ ಪಂದ್ಯಾವಳಿಯಲ್ಲಿ ಒಟ್ಟು 8 ತಂಡಗಳು ಮುಖಾಮುಖಿಯಾಗಲಿದ್ದು, ಗ್ಲೆನ್ ಮ್ಯಾಕ್ಸ್​ವೆಲ್, ಡೇವಿಡ್ ವಾರ್ನರ್, ಟಿಮ್ ಡೇವಿಡ್, ಮಾರ್ಕಸ್ ಸ್ಟೊಯಿನಿಸ್ ಸೇರಿದಂತೆ ಪ್ರಮುಖ ಆಟಗಾರರು ಈ ಟೂರ್ನಿಯಲ್ಲಿ ಕಣಕ್ಕಿಳಿಯಲಿದ್ದಾರೆ.

3 / 6
ಬಾಂಗ್ಲಾದೇಶ್ ಪ್ರೀಮಿಯರ್ ಲೀಗ್: ಬಾಂಗ್ಲಾದೇಶ್ ಕ್ರಿಕೆಟ್ ಬೋರ್ಡ್ ಆಯೋಜಿಸುವ ಈ ಟೂರ್ನಿ ಶುರುವಾಗುವುದು ಡಿಸೆಂಬರ್ 30 ರಿಂದ. ಫೆಬ್ರವರಿ 7ರವರೆಗೆ ನಡೆಯಲಿರುವ ಈ ಟೂರ್ನಿಯಲ್ಲಿ ಒಟ್ಟು 7 ತಂಡಗಳು ಕಣಕ್ಕಿಳಿಯಲಿವೆ. ಈ ಪಂದ್ಯಾವಳಿಯಲ್ಲಿ ಬಾಂಗ್ಲಾದೇಶ್, ಪಾಕಿಸ್ತಾನ್, ಇಂಗ್ಲೆಂಡ್, ನ್ಯೂಝಿಲೆಂಡ್​, ಅಫ್ಘಾನಿಸ್ತಾನ್, ಶ್ರೀಲಂಕಾ ತಂಡಗಳ ಆಟಗಾರರು ಕಾಣಿಸಿಕೊಳ್ಳಲಿದ್ದಾರೆ.

4 / 6
ಸೌತ್ ಆಫ್ರಿಕಾ ಟಿ20 ಲೀಗ್: ಸೌತ್ ಆಫ್ರಿಕಾ ಕ್ರಿಕೆಟ್ ಬೋರ್ಡ್ ಆಯೋಜಿಸುವ ಎಸ್​ಎಟಿ20 ಲೀಗ್​ಗೆ ಜನವರಿ 9 ರಿಂದ ಚಾಲನೆ ದೊರೆಯಲಿದೆ. 6 ತಂಡಗಳ ನಡುವಣ ಈ ಕದನದ ಫೈನಲ್​ ಪಂದ್ಯವು ಫೆಬ್ರವರಿ 8 ರಂದು ನಡೆಯಲಿದೆ. ಈ ಟೂರ್ನಿಯಲ್ಲಿ ಮುಖ್ಯವಾಗಿ ಸೌತ್ ಆಫ್ರಿಕಾ, ಇಂಗ್ಲೆಂಡ್, ಆಸ್ಟ್ರೇಲಿಯಾ, ಅಫ್ಘಾನಿಸ್ತಾನ್, ನ್ಯೂಝಿಲೆಂಡ್, ವೆಸ್ಟ್ ಇಂಡೀಸ್ ತಂಡಗಳ ಆಟಗಾರರು ಕಣಕ್ಕಿಳಿಯಲಿದ್ದಾರೆ.

5 / 6
ಇಂಟರ್​ನ್ಯಾಷನಲ್ ಲೀಗ್ ಟಿ20: ಯುಎಇ ಕ್ರಿಕೆಟ್ ಬೋರ್ಡ್​ ಆಯೋಜಿಸಲಿರುವ ಐಎಲ್​​ಟಿ20 ಲೀಗ್​ ಜನವರಿ 11 ರಿಂದ ಶುರುವಾಗಲಿದ್ದು, ಫೈನಲ್ ಪಂದ್ಯವು ಫೆಬ್ರವರಿ 9 ರಂದು ನಡೆಯಲಿದೆ. ದುಬೈ, ಶಾರ್ಜಾ ಹಾಗೂ ಅಬುಧಾಬಿಯಲ್ಲಿ ಜರುಗಲಿರುವ ಈ ಟೂರ್ನಿಯಲ್ಲಿ ಯುಎಇ, ವೆಸ್ಟ್ ಇಂಡೀಸ್, ಇಂಗ್ಲೆಂಡ್, ಆಸ್ಟ್ರೇಲಿಯಾ, ಅಫ್ಘಾನಿಸ್ತಾನ್, ನ್ಯೂಝಿಲೆಂಡ್ ತಂಡಗಳ ಆಟಗಾರರು ಕಾಣಿಸಿಕೊಳ್ಳಲಿದ್ದಾರೆ.

6 / 6
ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಯಾವತ್ತೋ ಸಿಎಂ ಆಗಬೇಕಿತ್ತು: ಹೆಚ್​ಡಿಕೆ

ಮಗನಿಗೆ ದುಬಾರಿ ಬೆಲೆಯ ಕಾರನ್ನು ಉಡುಗೊರೆಯಾಗಿ ನೀಡಿದ ಹಾರ್ದಿಕ್ ಪಾಂಡ್ಯ

ಹನುಮನ ಆಶೀರ್ವಾದದಿಂದಲೇ ರಿಷಬ್​​ಗೆ ಪಾತ್ರ ಸಿಕ್ಕಿದೆ ಎಂದ ಪತ್ನಿ: ವಿಡಿಯೋ

40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ

ಮೋದಿ ಪ್ರಸ್ತಾಪಿಸಿದ ಅಂಗಾಂಗ ದಾನದ ಬಗ್ಗೆ ಡಾಕ್ಟರ್ ಹೇಳಿದ್ದಿಷ್ಟು

ಗುಡ್ ನ್ಯೂಸ್: ಶೀಘ್ರದಲ್ಲೇ ನೈಸ್‌ ರೋಡ್‌ ಸಂಪರ್ಕಿಸುವ ರಸ್ತೆ ಆರಂಭ

ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ

ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್

ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!

ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್