ಐಸಿಸಿ ಅಧ್ಯಕ್ಷರಾಗಿ ನ್ಯೂಜಿಲೆಂಡ್‌ನ ಗ್ರೆಗ್ ಬಾರ್ಕ್ಲಿ ಅವರನ್ನು ಎರಡನೇ ಅವಧಿಗೆ ಮತ್ತೊಮ್ಮೆ ಆಯ್ಕೆ ಮಾಡಲಾಗಿದೆ. ಹಾಗೆಯೇ ಬಿಸಿಸಿಐನ ಹಾಲಿ ಕಾರ್ಯದರ್ಶಿಯಾಗಿರುವ ಜಯ್ ಶಾ ಅವರಿಗೂ ಐಸಿಸಿಯಲ್ಲಿ ದೊಡ್ಡ ಜವಾಬ್ದಾರಿ ಸಿಕ್ಕಿದೆ. ಐಸಿಸಿಯ ಅತ್ಯಂತ ಶಕ್ತಿಶಾಲಿ ಸಮಿತಿಯ ಮುಖ್ಯಸ್ಥರಾಗಿ ಅವರನ್ನು ಆಯ್ಕೆ ಮಾಡಲಾಗಿದೆ.
1 / 5
ಎಎನ್‌ಐ ವರದಿ ಪ್ರಕಾರ, ಜಯ್ ಶಾ ಅವರನ್ನು ಐಸಿಸಿಸಿಯ ಹಣಕಾಸು ಮತ್ತು ವಾಣಿಜ್ಯ ವ್ಯವಹಾರಗಳ ಸಮಿತಿಯ ಮುಖ್ಯಸ್ಥರಾಗಿ ಆಯ್ಕೆ ಮಾಡಲಾಗಿದೆ.
2 / 5
ವಾಣಿಜ್ಯ ವ್ಯವಹಾರಗಳ ಸಮಿತಿಯ ಕೆಲಸವು ಎಲ್ಲಾ ಪ್ರಮುಖ ಹಣಕಾಸು ನೀತಿ ನಿರ್ಧಾರಗಳನ್ನು ತೆಗೆದುಕೊಳ್ಳುವುದಾಗಿದ್ದು, ಈ ಸಮಿತಿಯು ನಿರ್ಧಾರವನ್ನು ತೆಗೆದುಕೊಂಡ ನಂತರವೇ, ಐಸಿಸಿ ಅದನ್ನು ಅನುಮೋದಿಸುತ್ತದೆ.
3 / 5
ಮೂಲಗಳ ಪ್ರಕಾರ, ಎಲ್ಲಾ ಸದಸ್ಯರು ಜಯ್ ಶಾ ಅವರನ್ನು ಹಣಕಾಸು ಮತ್ತು ವಾಣಿಜ್ಯ ವ್ಯವಹಾರಗಳ ಸಮಿತಿಯ ಮುಖ್ಯಸ್ಥರನ್ನಾಗಿ ಆಯ್ಕೆ ಮಾಡಲು ಸಹಮತ ನೀಡಿದ್ದಾರೆ. ಈ ಸಮಿತಿಯ ಕೆಲಸವು ಸದಸ್ಯ ರಾಷ್ಟ್ರಗಳ ನಡುವೆ ಆದಾಯದ ಹಂಚಿಕೆಯನ್ನು ಸಹ ಒಳಗೊಂಡಿದೆ.
4 / 5
ಈ ಸಮಿತಿಯ ಮುಖ್ಯಸ್ಥರು ಐಸಿಸಿ ಮಂಡಳಿಯ ಸದಸ್ಯರು ಕೂಡ ಆಗಿರುತ್ತಾರೆ. ಈಗ ಜಯ್ ಶಾ ಅವರ ಆಯ್ಕೆಯೊಂದಿಗೆ, ಅವರು ಐಸಿಸಿ ಮಂಡಳಿಯಲ್ಲಿ ಬಿಸಿಸಿಐ ಅನ್ನು ಪ್ರತಿನಿಧಿಸುತ್ತಾರೆ ಎಂಬುದು ಕೂಡ ಸ್ಪಷ್ಟವಾಗಿದೆ.