ಆಡುವ ಬಯಕೆ ಇದೆ, ಆದರೆ..?; ಟೀಂ ಇಂಡಿಯಾದಲ್ಲಿ ಆಡುವ ಬಗ್ಗೆ ಮನದಾಳ ತೆರೆದಿಟ್ಟ ಭುವನೇಶ್ವರ್

Updated on: Jun 10, 2026 | 7:19 PM

Bhuvneshwar Kumar comeback: ಇತ್ತೀಚಿನ ಐಪಿಎಲ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿ 28 ವಿಕೆಟ್‌ ಪಡೆದ ಭುವನೇಶ್ವರ್ ಕುಮಾರ್ ಟೀಂ ಇಂಡಿಯಾ ಕಮ್‌ಬ್ಯಾಕ್ ಬಗ್ಗೆ ಆಸಕ್ತಿ ಹೆಚ್ಚಿಸಿದ್ದಾರೆ. ಸ್ವಿಂಗ್ ಬೌಲರ್ ಭುವಿ, ಇತ್ತೀಚಿನ ಸರಣಿಗಳಿಗೆ ಆಯ್ಕೆಯಾಗದಿದ್ದರೂ, ಮೌನ ಮುರಿದು ನೀಲಿ ಜೆರ್ಸಿ ಧರಿಸುವ ಬಯಕೆ ವ್ಯಕ್ತಪಡಿಸಿದ್ದಾರೆ. ಆಯ್ಕೆದಾರರ ತೀರ್ಮಾನಕ್ಕೆ ಬಿಟ್ಟಿದ್ದೇನೆ ಎಂದಿದ್ದಾರೆ.

1 / 5
ಟೀಂ ಇಂಡಿಯಾದ ಪ್ರತಿಭಾವಂತ ಬೌಲರ್​ಗಳಲ್ಲಿ ಭುವನೇಶ್ವರ್ ಕುಮಾರ್ ಒಬ್ಬರು. ಬನಾನ ಸ್ವಿಂಗ್ ಬೌಲರ್ ಎಂದೇ ಖ್ಯಾತಿ ಪಡೆದಿದ್ದ ಭುವಿ, ಟೀಂ ಇಂಡಿಯಾದಲ್ಲಿ ಆಡಿ ವರ್ಷಗಳೇ ಕಳೆದಿವೆ. ಆದಾಗ್ಯೂ ದೇಶಿ ಕ್ರಿಕೆಟ್​ನಲ್ಲಿ ಆಡುತ್ತಿರುವ ಭುವಿ ಅವಕಾಶ ಸಿಕ್ಕಾಗಲೆಲ್ಲ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಇದಕ್ಕೆ ತಾಜಾ ಉದಾಹರಣೆಯಾಗಿ ಇತ್ತೀಚೆಗೆ ಮುಗಿದ 2026 ರ ಐಪಿಎಲ್‌ನಲ್ಲಿ ಅವರ ಪ್ರದರ್ಶನವನ್ನು ಗಮನಿಸಬಹುದಾಗಿದೆ (PC- PTI).

ಟೀಂ ಇಂಡಿಯಾದ ಪ್ರತಿಭಾವಂತ ಬೌಲರ್​ಗಳಲ್ಲಿ ಭುವನೇಶ್ವರ್ ಕುಮಾರ್ ಒಬ್ಬರು. ಬನಾನ ಸ್ವಿಂಗ್ ಬೌಲರ್ ಎಂದೇ ಖ್ಯಾತಿ ಪಡೆದಿದ್ದ ಭುವಿ, ಟೀಂ ಇಂಡಿಯಾದಲ್ಲಿ ಆಡಿ ವರ್ಷಗಳೇ ಕಳೆದಿವೆ. ಆದಾಗ್ಯೂ ದೇಶಿ ಕ್ರಿಕೆಟ್​ನಲ್ಲಿ ಆಡುತ್ತಿರುವ ಭುವಿ ಅವಕಾಶ ಸಿಕ್ಕಾಗಲೆಲ್ಲ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಇದಕ್ಕೆ ತಾಜಾ ಉದಾಹರಣೆಯಾಗಿ ಇತ್ತೀಚೆಗೆ ಮುಗಿದ 2026 ರ ಐಪಿಎಲ್‌ನಲ್ಲಿ ಅವರ ಪ್ರದರ್ಶನವನ್ನು ಗಮನಿಸಬಹುದಾಗಿದೆ (PC- PTI).

2 / 5

ಕಳೆದೆರಡು ಐಪಿಎಲ್ ಆವೃತ್ತಿಗಳಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡುತ್ತಿರುವ ಭುವನೇಶ್ವರ್ ಕುಮಾರ್, ತಂಡವನ್ನು ಎರಡು ಬಾರಿ ಚಾಂಪಿಯನ್‌ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಈ ಆವೃತ್ತಿಯಲ್ಲಿ ಆರ್​ಸಿಬಿ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದ ಭುವಿ ಇಡೀ ಆವೃತ್ತಿಯಲ್ಲಿ 28 ವಿಕೆಟ್‌ಗಳನ್ನು ಕಬಳಿಸುವ ಮೂಲಕ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್​ಗಳ ಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಪಡೆದುಕೊಂಡಿದ್ದರು (PC- PTI).

3 / 5

ಭುವನೇಶ್ವರ್ ಅವರ ಈ ಪ್ರದರ್ಶನವನ್ನು ನೋಡಿದ ಮಾಜಿ ಕ್ರಿಕೆಟಿಗರು ಹಾಗೂ ಅಭಿಮಾನಿಗಳು, ಭುವಿಗೆ ಟೀಂ ಇಂಡಿಯಾದಲ್ಲಿ ಮತ್ತೆ ಅವಕಾಶ ನೀಡಬೇಕು ಎಂಬ ಅಭಿಪ್ರಾಯ ಹಂಚಿಕೊಂಡಿದ್ದರು. ಆದರೆ ಐರ್ಲೆಂಡ್ ಹಾಗೂ ಇಂಗ್ಲೆಂಡ್‌ ಪ್ರವಾಸಕ್ಕೆ ಭುವಿಯನ್ನು ಕಡೆಗಣಿಸಲಾಗಿತ್ತು. ಇದೀಗ ಟೀಂ ಇಂಡಿಯಾಕ್ಕೆ ಮರಳುವ ಬಗ್ಗೆ ಮೌನ ಮುರಿದಿರುವ ಭುವಿ, ಮತ್ತೆ ತಂಡದಲ್ಲಿ ಆಡಬೇಕೆಂಬ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ (PC- Google).

4 / 5

ಈ ಬಗ್ಗೆ ಮಾತನಾಡಿರುವ ಭುವಿ, ‘ನಾನು ಟೀಂ ಇಂಡಿಯಾದಲ್ಲಿ ಆಡಲು ಬಯಸುತ್ತೇನೆ ಎಂದು ತೋರಿಸಿಕೊಳ್ಳದಿರುವುದು ನನ್ನ ಸ್ವಭಾವ. ಎಲ್ಲರೂ ಅವರ ಕೆಲಸ ಮಾಡುತ್ತಿದ್ದಾರೆ ಎಂದು ನಾನು ಭಾವಿಸುತ್ತೇನೆ. ಆಯ್ಕೆದಾರರು ಅವರ ಕೆಲಸ ಮಾಡುತ್ತಿದ್ದಾರೆ. ನಾನು ನನ್ನ ಕೆಲಸ ಮಾಡುತ್ತಿದ್ದೇನೆ. ಆಯ್ಕೆ ಮಾಡುವುದು ಅವರ ಜವಾಬ್ದಾರಿ. ತಂಡಕ್ಕೆ ನನ್ನ ಅವಶ್ಯಕತೆ ಇದೆ ಎಂದು ಅವರು ಭಾವಿಸಿದರೆ, ಅವರು ತಮ್ಮ ಕೆಲಸ ಮಾಡುತ್ತಾರೆ’ ಎಂದು ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ (PC- Google).

5 / 5

36 ವರ್ಷದ ಭುವನೇಶ್ವರ್ ಕುಮಾರ್ 2022 ರ ಜನವರಿಯಲ್ಲಿ ತಮ್ಮ ಕೊನೆಯ ಅಂತರರಾಷ್ಟ್ರೀಯ ಪಂದ್ಯವನ್ನು ಆಡಿದ್ದರು. ಇದುವರೆಗೆ ಭಾರತ ಪರ 21 ಟೆಸ್ಟ್‌ಗಳಲ್ಲಿ 63 ವಿಕೆಟ್‌ಗಳನ್ನು ಪಡೆದಿರುವ ಭುವಿ, 121 ಏಕದಿನ ಪಂದ್ಯಗಳಲ್ಲಿ 141 ವಿಕೆಟ್‌ಗಳು ಮತ್ತು 87 ಟಿ20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ 90 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಐರ್ಲೆಂಡ್ ಮತ್ತು ಇಂಗ್ಲೆಂಡ್ ಪ್ರವಾಸಗಳು ಮತ್ತು ಏಷ್ಯನ್ ಕ್ರೀಡಾಕೂಟಕ್ಕಾಗಿ ಭಾರತದ ಟಿ20 ತಂಡಗಳಲ್ಲಿ ಭುವನೇಶ್ವರ್ ಕುಮಾರ್ ಅವರನ್ನು ಆಯ್ಕೆ ಮಾಡಲಾಗಿಲ್ಲ ಎಂಬುದು ಗಮನಿಸಬೇಕಾದ ಸಂಗತಿ. ಭವಿಷ್ಯದಲ್ಲಿ ಅವರಿಗೆ ನೀಲಿ ಜೆರ್ಸಿ ಧರಿಸಲು ಅವಕಾಶ ಸಿಗುತ್ತದೆಯೇ ಎಂದು ನೋಡಲು ಆಸಕ್ತಿದಾಯಕವಾಗಿದೆ (PC- RCB X).

Loading...
Unable to load recommendations.
Follow Us