Updated on:Sep 19, 2021 | 4:47 PM
ಏಕೆಂದರೆ ಗೇಲ್ ಇತ್ತೀಚೆಗೆ ಮುಕ್ತಾಯವಾದ ಟಿ20 ವಿಶ್ವಕಪ್ನಲ್ಲಿ ನಿವೃತ್ತಿ ನೀಡುವ ಸುಳಿವು ನೀಡಿದ್ದರು. ಹೀಗಾಗಿ 42 ವರ್ಷದ ಕ್ರಿಸ್ ಗೇಲ್ ಮುಂದಿನ ಸೀಸನ್ ಐಪಿಎಲ್ ಆಡಲಿದ್ದಾರಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿತು. ಇದೀಗ ಎಬಿಡಿ ನಿವೃತ್ತಿ ಬೆನ್ನಲ್ಲೇ ಈ ಎಲ್ಲಾ ಪ್ರಶ್ನೆಗಳಿಗೆ ಕ್ರಿಸ್ ಗೇಲ್ ಉತ್ತರ ನೀಡಿದ್ದಾರೆ. ಅದು ಕೂಡ ಒಂದೇ ಒಂದು ವಾಕ್ಯದ ಮೂಲಕ ಎಂಬುದು ವಿಶೇಷ.
ಇನ್ನು ಮುಂದಿನ ಸೀಸನ್ ಐಪಿಎಲ್ನಲ್ಲಿ ಒಟ್ಟು 10 ತಂಡಗಳಿರಲಿದ್ದು, ಹೀಗಾಗಿ 42 ವರ್ಷದ ಕ್ರಿಸ್ ಗೇಲ್ ಯಾವುದಾದರೂ ತಂಡ ತಮ್ಮನ್ನು ಖರೀದಿಸುವ ವಿಶ್ವಾಸದಲ್ಲಿದೆ. ಹಾಗೆಯೇ ಪಂಜಾಬ್ ಕಿಂಗ್ಸ್ ತಂಡವು ಗೇಲ್ ಅವರನ್ನು ಬಿಡುಗಡೆ ಮಾಡುವುದು ಬಹುತೇಕ ಖಚಿತ.
ಈ ಅಭಿಯಾನಕ್ಕೆ ಪಾಕಿಸ್ತಾನ್ ಸೂಪರ್ ಲೀಗ್ ಆಡುವ ಕೆಲ ವಿದೇಶಿ ಆಟಗಾರರು ಕೈ ಜೋಡಿಸಿದ್ದಾರೆ. ಇತ್ತ ಯುನಿವರ್ಸ್ ಬಾಸ್ ಕ್ರಿಸ್ ಗೇಲ್ ಸಹ ನಾನು ನಾಳೆ ಪಾಕಿಸ್ತಾನಕ್ಕೆ ತೆರಳುವುದಾಗಿ ಟ್ವೀಟ್ ಮಾಡಿ ಬೆಂಬಲ ವ್ಯಕ್ತಪಡಿಸಿದ್ದಾರೆ. ಈ ಮೂಲಕ ನ್ಯೂಜಿಲೆಂಡ್ ತಂಡದ ನಡೆಯನ್ನು ಗೇಲ್ ಪರೋಕ್ಷವಾಗಿ ಹೀಗೆಳೆದಿದ್ದಾರೆ.
ಇತ್ತ ಕ್ರಿಸ್ ಗೇಲ್ ನಾಳೆ ಪಾಕಿಸ್ತಾನಕ್ಕೆ ಹೋಗುತ್ತಿದ್ದೇನೆ. ನನ್ನೊಂದಿಗೆ ಯಾರೆಲ್ಲಾ ಬರ್ತೀರಿ? ಎಂಬ ಕ್ರಿಸ್ ಗೇಲ್ ಟ್ವೀಟ್ ಬೆನ್ನಲ್ಲೇ ಪಂಜಾಬ್ ಕಿಂಗ್ಸ್ ಅಭಿಮಾನಿಗಳು ಪ್ರಶ್ನೆಗಳು ಸುರಿಮಳೆಗೈದಿದ್ದಾರೆ. ಏಕೆಂದರೆ ಪಂಜಾಬ್ ಕಿಂಗ್ಸ್ ಮಂಗಳವಾರ ಐಪಿಎಲ್ ದ್ವಿತಿಯಾರ್ಧ ಆರಂಭಿಸಲಿದೆ. ಗೇಲ್ ತಾನು ಪಾಕಿಸ್ತಾನಕ್ಕೆ ತೆರಳುವುದಾಗಿ ತಿಳಿಸಿದ್ದರಿಂದ ಅವರು ಐಪಿಎಲ್ಗೆ ಅಲಭ್ಯರಾಗಲಿದ್ದಾರೆ ಎಂಬ ಸುದ್ದಿಗಳು ಹರಿದಾಡಲಾರಂಭಿಸಿದೆ.
ಆದರೆ ಕ್ರಿಸ್ ಗೇಲ್ ಪಾಕ್ ಪರ ಬೆಂಬಲ ವ್ಯಕ್ತಪಡಿಸುವ ಸಲುವಾಗಿ ನಾನು ಕೂಡ ಪಾಕಿಸ್ತಾನಕ್ಕೆ ತೆರಳುವುದಾಗಿ ತಿಳಿಸಿದ್ದಾರೆ. ಆ ಮೂಲಕ ಪರೋಕ್ಷವಾಗಿ ನನಗೆ ಪಾಕ್ ಸುರಕ್ಷಿತ ಎಂಬ ಸಂದೇಶ ಸಾರಿದ್ದಾರೆ ಕ್ರಿಸ್ ಗೇಲ್. ಇದರ ಹೊರತಾಗಿ ಯುನಿರ್ವಸ್ ಬಾಸ್ ಐಪಿಎಲ್ನ ದ್ವಿತಿಯಾರ್ಧದಿಂದ ಹಿಂದೆ ಸರಿಯುತ್ತಿಲ್ಲ. ಇದಾಗ್ಯೂ, ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಗೇಲ್ ಅವರ ಟ್ವೀಟ್ ಅನ್ನು ತಮ್ಮ ಅಧಿಕೃತ ಹ್ಯಾಂಡಲ್ ನಿಂದ ರೀಟ್ವೀಟ್ ಮಾಡಿದೆ.
Published On - 4:39 pm, Sun, 19 September 21