IPL 2026: 34 ಸಿಕ್ಸ್, 530 ರನ್; ಸಿಎಸ್​ಕೆ ವೇಗಿಯ ಅಪರೂಪದ ದಾಖಲೆ

Updated on: May 22, 2026 | 6:10 PM

Anshul Kamboj Bowling Record: ಐದು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್ 2026 ಪ್ಲೇಆಫ್​ನಿಂದ ಹೊರಬಿದ್ದಿದೆ. ಸತತ ಮೂರನೇ ಸೀಸನ್‌ನಲ್ಲಿ ಸಿಎಸ್‌ಕೆ ಅರ್ಹತೆ ಪಡೆಯಲು ವಿಫಲವಾಗಿದೆ. ತಂಡದ ಬೌಲಿಂಗ್ ವಿಭಾಗದ ವೈಫಲ್ಯ ಪ್ರಮುಖ ಕಾರಣ. ಅದರಲ್ಲೂ ಅನ್ಶುಲ್ ಕಾಂಬೋಜ್ 530 ರನ್ ಹಾಗೂ 34 ಸಿಕ್ಸರ್‌ಗಳನ್ನು ನೀಡಿ, ಈ ಸೀಸನ್‌ನಲ್ಲಿ ಅತಿ ಹೆಚ್ಚು ರನ್ ಮತ್ತು ಸಿಕ್ಸರ್ ಬಿಟ್ಟುಕೊಟ್ಟ ಅನಗತ್ಯ ದಾಖಲೆ ನಿರ್ಮಿಸಿದ್ದಾರೆ.

1 / 5
ಐದು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಐಪಿಎಲ್ 2026 ರಿಂದ ಹೊರಬಿದ್ದಿದೆ. ಇದು ಸತತ ಮೂರನೇ ಸೀಸನ್‌ನಲ್ಲಿ ಸಿಎಸ್‌ಕೆ ಪ್ಲೇಆಫ್‌ಗೆ ಅರ್ಹತೆ ಪಡೆಯಲು ವಿಫಲವಾಗಿದೆ. ತಂಡದಲ್ಲಿ ಅನುಭವಿಗಳ ಕೊರತೆಯೇ ಈ ಕಳಪೆ ಪ್ರದರ್ಶನಕ್ಕೆ ಕಾರಣ ಎನ್ನಬಹುದು. ಅದರಲ್ಲೂ ಸಿಎಸ್​ಕೆ ಬೌಲಿಂಗ್ ಘಟಕ ಎಷ್ಟು ದುರ್ಬಲವಾಗಿತ್ತೆಂದರೆ ಯಾವೊಬ್ಬ ಬೌಲರ್​ಗೂ ಪಂದ್ಯ ಗೆಲ್ಲುವ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ.

ಐದು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಐಪಿಎಲ್ 2026 ರಿಂದ ಹೊರಬಿದ್ದಿದೆ. ಇದು ಸತತ ಮೂರನೇ ಸೀಸನ್‌ನಲ್ಲಿ ಸಿಎಸ್‌ಕೆ ಪ್ಲೇಆಫ್‌ಗೆ ಅರ್ಹತೆ ಪಡೆಯಲು ವಿಫಲವಾಗಿದೆ. ತಂಡದಲ್ಲಿ ಅನುಭವಿಗಳ ಕೊರತೆಯೇ ಈ ಕಳಪೆ ಪ್ರದರ್ಶನಕ್ಕೆ ಕಾರಣ ಎನ್ನಬಹುದು. ಅದರಲ್ಲೂ ಸಿಎಸ್​ಕೆ ಬೌಲಿಂಗ್ ಘಟಕ ಎಷ್ಟು ದುರ್ಬಲವಾಗಿತ್ತೆಂದರೆ ಯಾವೊಬ್ಬ ಬೌಲರ್​ಗೂ ಪಂದ್ಯ ಗೆಲ್ಲುವ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ.

2 / 5

ಅದರಲ್ಲೂ ಸಿಎಸ್​ಕೆ ಪರ ಅತ್ಯಂತ ಯಶಸ್ವಿ ಬೌಲರ್ ಎನಿಸಿಕೊಂಡ ಅನ್ಶುಲ್ ಕಾಂಬೋಜ್ 21 ವಿಕೆಟ್‌ ಉರುಳಿಸಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್​ಗಳ ಪಟ್ಟಿಯಲ್ಲಿ ಸ್ಥಾನ ಪಡೆದರಾದರೂ ರನ್​ಗಳಿಗೆ ಕಡಿವಾಣ ಹಾಕುವಲ್ಲಿ ವಿಫಲರಾದರು. ಈ ಸೀಸನ್​ನಲ್ಲಿ ಅತಿ ಹೆಚ್ಚು ರನ್ ಬಿಟ್ಟುಕೊಡುವ ಮೂಲಕ ಅನಗತ್ಯ ದಾಖಲೆಯನ್ನು ತಮ್ಮ ಖಾತೆಗೆ ಹಾಕಿಕೊಂಡರು.

3 / 5

ಐಪಿಎಲ್ 2026 ರಲ್ಲಿ ಸಿಎಸ್‌ಕೆ ಪರ ಅತಿ ಹೆಚ್ಚು ವಿಕೆಟ್ ಪಡೆದ ಅನ್ಶುಲ್ ಕಾಂಬೋಜ್ ಒಬ್ಬರೇ 530 ರನ್ ಬಿಟ್ಟುಕೊಟ್ಟರು. ಈ ಮೂಲಕ ಈ ಬಾರಿಯ ಐಪಿಎಲ್​ನಲ್ಲಿ 500 ಕ್ಕೂ ಹೆಚ್ಚು ರನ್ ಬಿಟ್ಟುಕೊಟ್ಟ ಬೌಲರ್ ಎನಿಸಿಕೊಂಡಿದ್ದಾರೆ. ಕಾಂಬೋಜ್ ಮಾತ್ರವಲ್ಲದೆ, ಎಲ್ಲಾ 14 ಪಂದ್ಯಗಳನ್ನು ಆಡಿ 13 ವಿಕೆಟ್‌ಗಳನ್ನು ಪಡೆದ ನೂರ್ ಅಹ್ಮದ್ ಕೂಡ 428 ರನ್‌ಗಳನ್ನು ಬಿಟ್ಟುಕೊಟ್ಟರು.

4 / 5

ಕಳೆದ 5 ಪಂದ್ಯಗಳಲ್ಲಿ ಅನ್ಶುಲ್ ಕಾಂಬೋಜ್ 40 ಕ್ಕೂ ಹೆಚ್ಚು ರನ್‌ಗಳನ್ನು ಬಿಟ್ಟುಕೊಟ್ಟಿದ್ದಾರೆ. ಇದರಲ್ಲಿ ಒಂದು ಬಾರಿ 50 ಕ್ಕೂ ಹೆಚ್ಚು ರನ್‌ಗಳು ಮತ್ತು ಒಂದು ಬಾರಿ 60 ಕ್ಕೂ ಹೆಚ್ಚು ರನ್‌ಗಳನ್ನು ಬಿಟ್ಟುಕೊಟ್ಟಿದ್ದಾರೆ. ರನ್ ಬಿಟ್ಟುಕೊಡುವುದರ ಜೊತೆಗೆ ಅತಿ ಹೆಚ್ಚು ಸಿಕ್ಸರ್‌ಗಳನ್ನು ಹೊಡಿಸಿಕೊಂಡ ಬೇಡದ ದಾಖಲೆಯೂ ಕಾಂಬೋಜ್ ಪಾಲಾಗಿದೆ.

5 / 5

ಈ ಸೀಸನ್‌ನಲ್ಲಿ ಬರೋಬ್ಬರಿ 34 ಸಿಕ್ಸರ್‌ಗಳನ್ನು ಹೊಡಿಸಿಕೊಂಡಿರುವ ಅನ್ಶುಲ್ ಕಾಂಬೋಜ್ ಒಂದು ಸೀಸನ್​ನಲ್ಲಿ ಅತಿ ಹೆಚ್ಚು ಸಿಕ್ಸರ್ ಹೊಡಿಸಿಕೊಂಡ ವೇಗಿ ಎನಿಸಿಕೊಂಡಿದ್ದಾರೆ. ಕಾಂಬೋಜ್​ಗೂ ಮೊದಲು ಕಳೆದ ಆವೃತ್ತಿಯಲ್ಲಿ ರಶೀದ್ ಖಾನ್ 33 ಸಿಕ್ಸರ್‌ಗಳನ್ನು ಹೊಡಿಸಿಕೊಂಡು ಈ ದಾಖಲೆಯನ್ನು ತಮ್ಮ ಖಾತೆಗೆ ಹಾಕಿಕೊಂಡಿದ್ದರು.

ಪೃಥ್ವಿಶಂಕರ

ಪೃಥ್ವಿಶಂಕರ ಅವರ ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ. ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ಕೆಲಸ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ಇವರು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ಇವರ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
Loading...
Unable to load recommendations.
Follow Us