- Kannada News Photo gallery Cricket photos Dewald brevis blistering fifty in sa20 league mi capetown won tne match vs paarl royals
Dewald Brevis: 9 ಎಸೆತ 46 ರನ್, ‘ಬೇಬಿ ಎಬಿ’ ಸುನಾಮಿ ಬ್ಯಾಟಿಂಗ್! ಶುಭಾರಂಭ ಮಾಡಿದ ಮುಂಬೈ
Dewald Brevis: ತನ್ನ 41 ಎಸೆತಗಳ ಇನ್ನಿಂಗ್ಸ್ನಲ್ಲಿ ಅಜೇಯ 70 ರನ್ ಚಚ್ಚಿದ ಬ್ರೆವಿಸ್, 170 ಕ್ಕಿಂತ ಹೆಚ್ಚು ಸ್ಟ್ರೈಕ್ ರೇಟ್‌ನೊಂದಿಗೆ ಒಂದರ ನಂತರ ಒಂದರಂತೆ 5 ಸಿಕ್ಸರ್‌ಗಳನ್ನು ಭಾರಿಸಿದ್ದಲ್ಲದೆ 4 ಬೌಂಡರಿಗಳನ್ನು ಬಾರಿಸಿದರು.
Updated on:Jan 11, 2023 | 11:24 AM

ದಕ್ಷಿಣ ಆಫ್ರಿಕಾದಲ್ಲಿ ಆರಂಭವಾಗಿರುವ SA20 ಲೀಗ್‌ನ ಮೊದಲ ಸೀಸನ್ನ ಮೊದಲ ಪಂದ್ಯದಲ್ಲಿಯೇ ಅಭಿಮಾನಿಗಳಿಗೆ ರಸದೌತಣ ಸಿಕ್ಕಿದೆ.

SA20 ಲೀಗ್‌ನ ಮೊದಲ ಸೀಸನ್ನ ಮೊದಲ ಪಂದ್ಯ ಪಾರ್ಲ್ ರಾಯಲ್ಸ್ ಮತ್ತು ಮುಂಬೈ ಇಂಡಿಯನ್ಸ್ ಕೇಪ್ ಟೌನ್ ನಡುವೆ ನಡೆದಿತ್ತು. ಈ ಎರಡೂ ತಂಡಗಳನ್ನು ಐಪಿಎಲ್ ಫ್ರಾಂಚೈಸಿಗಳಾದ ಮುಂಬೈ ಇಂಡಿಯನ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ಖರೀದಿಸಿವೆ.

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾರ್ಲ್ ರಾಯಲ್ಸ್ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 142 ರನ್ ಗಳಿಸಿತು. ಇದರಲ್ಲಿ ಜೋಸ್ ಬಟ್ಲರ್ 42 ಎಸೆತಗಳಲ್ಲಿ 51 ರನ್ ಗಳಿಸಿದ್ದು ದೊಡ್ಡ ಕೊಡುಗೆಯಾಗಿತ್ತು.

ಈ ಗುರಿ ಬೆನ್ನಟ್ಟಿದMI ಕೇಪ್ ಟೌನ್ ಪರ ಆರಂಭಿಕರಾಗಿ ಕಣಕ್ಕಿಳಿದ ಡೆವಾಲ್ಡ್ ಬ್ರೆವಿಸ್ ಬೌಂಡರಿ ಹಾಗೂ ಸಿಕ್ಸರ್ಗಳ ಮಳೆಗರೆದರು.

ತನ್ನ 41 ಎಸೆತಗಳ ಇನ್ನಿಂಗ್ಸ್ನಲ್ಲಿ ಅಜೇಯ 70 ರನ್ ಚಚ್ಚಿದ ಬ್ರೆವಿಸ್, 170 ಕ್ಕಿಂತ ಹೆಚ್ಚು ಸ್ಟ್ರೈಕ್ ರೇಟ್‌ನೊಂದಿಗೆ ಒಂದರ ನಂತರ ಒಂದರಂತೆ 5 ಸಿಕ್ಸರ್‌ಗಳನ್ನು ಭಾರಿಸಿದ್ದಲ್ಲದೆ 4 ಬೌಂಡರಿಗಳನ್ನು ಬಾರಿಸಿದರು.

ಏಕಾಂಗಿಯಾಗಿ ನಿಂತು ತಂಡಕ್ಕೆ ಜಯತಂದುಕೊಟ್ಟ ಡೆವಾಲ್ಡ್ ಬ್ರೆವಿಸ್ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನೂ ಬಾಚಿಕೊಂಡರು.
Published On - 11:24 am, Wed, 11 January 23




