AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಾಂಪಿಯನ್ಸ್​ ಲೀಗ್ ಆಯೋಜನೆಗೆ ಭರ್ಜರಿ ಪ್ಲ್ಯಾನ್

Champions League T20: ಇಂಡಿಯನ್ ಪ್ರೀಮಿಯರ್ ಲೀಗ್​ನ ಚಾಂಪಿಯನ್ ತಂಡವನ್ನು ಒಳಗೊಂಡಂತೆ ವಿಶ್ವದ ಪ್ರಮುಖ ಲೀಗ್​ಗಳಲ್ಲಿನ ವಿಜೇತ ತಂಡಗಳ ನಡುವಣ ಚಾಂಪಿಯನ್ಸ್ ಲೀಗ್ ಟಿ20 ಟೂರ್ನಿಯನ್ನು ಆಯೋಜಿಸಲು ಇಸಿಬಿ ಪ್ಲ್ಯಾನ್ ರೂಪಿಸುತ್ತಿದೆ. ಈ ಯೋಜನೆ ಯಶಸ್ವಿಯಾದರೆ ಈ ವರ್ಷಾಂತ್ಯದಲ್ಲಿ ಅಥವಾ ಮುಂದಿನ ವರ್ಷ ವಿಶ್ವ ಕ್ಲಬ್ ಚಾಂಪಿಯನ್​ಶಿಪ್ ಟಿ20 ಟೂರ್ನಿ ನಡೆಯಲಿದೆ.

ಝಾಹಿರ್ ಯೂಸುಫ್
|

Updated on: Jun 09, 2025 | 9:25 AM

Share
ಚಾಂಪಿಯನ್ಸ್ ಲೀಗ್ ಟಿ20 (CLT20) ಟೂರ್ನಿಯನ್ನು ಮತ್ತೆ ಆಯೋಜಿಸಲು ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಭರ್ಜರಿ ಪ್ಲ್ಯಾನ್ ರೂಪಿಸುತ್ತಿದೆ. ಅದು ಕೂಡ ವಿಶ್ವ ಕ್ಲಬ್ ಚಾಂಪಿಯನ್​ಶಿಪ್ ಹೆಸರಿನಲ್ಲಿ ಎಂಬುದು ವಿಶೇಷ. ಇದಕ್ಕೂ ಮುನ್ನ 2009 ರಲ್ಲಿ  ಚಾಂಪಿಯನ್ಸ್ ಲೀಗ್ ಟಿ20 ಟೂರ್ನಿಗೆ ಬಿಸಿಸಿಐ ಚಾಲನೆ ನೀಡಿತ್ತು. ಆದರೆ 2014ರ ಬಳಿಕ ಈ ಟೂರ್ನಿಯನ್ನು ಸ್ಥಗಿತಗೊಳಿಸಲಾಯಿತು.

1 / 6
ಇದೀಗ 10 ವರ್ಷಗಳ ಬಳಿಕ ಮತ್ತೊಮ್ಮೆ ಚಾಂಪಿಯನ್ಸ್ ಲೀಗ್ ಟಿ20 ಟೂರ್ನಿ ಆಯೋಜಿಸಲು ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಮುಂದಾಗಿದೆ. ವಿಶ್ವ ಕ್ಲಬ್ ಚಾಂಪಿಯನ್​ಶಿಪ್ ಟಿ20 ಟೂರ್ನಿಯನ್ನು ಆಯೋಜಿಸಲು ನಾವು ಆಸಕ್ತಿ ಹೊಂದಿದ್ದೇವೆ. ಈ ಬಗ್ಗೆ ಮಾತುಕತೆ ಆರಂಭಿಕ ಹಂತದಲ್ಲಿದ್ದು, ಈ ಮಾತುಕತೆಯು ಯಶಸ್ವಿಯಾದರೆ ಚಾಂಪಿಯನ್ಸ್ ತಂಡಗಳ ಟೂರ್ನಿ ನಡೆಯಲಿದೆ ಎಂದು ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಿಚರ್ಡ್ ಗೌಲ್ಡ್ ತಿಳಿಸಿದ್ದಾರೆ.

2 / 6
ಚಾಂಪಿಯನ್ಸ್ ಲೀಗ್ ಟಿ20 ಟೂರ್ನಿಯಲ್ಲಿ ವಿಶ್ವದ ಪ್ರಮುಖ ಲೀಗ್​ನಲ್ಲಿನ ತಂಡಗಳು ಕಣಕ್ಕಿಳಿಯಲಿದೆ. ಈ ಹಿಂದಿನ ಆವೃತ್ತಿಗಳಲ್ಲಿ ಐಪಿಎಲ್​ನ ಮೂರು ತಂಡಗಳು, ಆಸ್ಟ್ರೇಲಿಯಾ ಮತ್ತು ಸೌತ್ ಆಫ್ರಿಕಾ ಲೀಗ್​ನಿಂದ ತಲಾ ಎರಡು ತಂಡಗಳು ಹಾಗೂ ಪಾಕಿಸ್ತಾನ್, ವೆಸ್ಟ್ ಇಂಡೀಸ್ ಮತ್ತು ನ್ಯೂಝಿಲೆಂಡ್​ನ ಟಿ20 ಲೀಗ್​ನಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದ ತಂಡಗಳು ಕಣಕ್ಕಿಳಿದಿದ್ದವು.

3 / 6
ಇದೀಗ ಮತ್ತೊಮ್ಮೆ ಫ್ರಾಂಚೈಸಿ ಲೀಗ್​ನ ಚಾಂಪಿಯನ್ಸ್​ ತಂಡಗಳನ್ನು ಒಂದುಗೂಡಿಸಿ ವಿಶ್ವ ಕ್ಲಬ್ ಚಾಂಪಿಯನ್ಸ್​ ಟಿ20 ಟೂರ್ನಿ ಆಯೋಜಿಸಲು ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಪ್ಲ್ಯಾನ್ ರೂಪಿಸುತ್ತಿದೆ. ಆದರೆ ಪ್ರಸ್ತುತ ಕ್ರಿಕೆಟ್ ಕ್ಯಾಲೆಂಡರ್ ಜ್ಯಾಮ್-ಪ್ಯಾಕ್ ಆಗಿರುವ ಕಾರಣ ಈ ಟೂರ್ನಿಗಾಗಿ ಸಮಯವಕಾಶವನ್ನು ಕಂಡುಕೊಳ್ಳಬೇಕಿರುವುದು ಇಸಿಬಿ ಮುಂದಿರುವ ದೊಡ್ಡ ಸವಾಲು.

4 / 6
ಹೀಗಾಗಿ ಬಿಸಿಸಿಐ, ಆಸ್ಟ್ರೇಲಿಯಾ ಕ್ರಿಕೆಟ್ ಬೋರ್ಡ್ ಜೊತೆ ಇಸಿಬಿ ಚರ್ಚೆ ನಡೆಸಲಿದ್ದು, ಈ ಎರಡು ಕ್ರಿಕೆಟ್ ಮಂಡಳಿ ತಮ್ಮ ರಾಷ್ಟ್ರೀಯ ಪಂದ್ಯಗಳ ವೇಳಾಪಟ್ಟಿಯನ್ನು ಬದಲಿಸಿದರೆ, ವಿಶ್ವ ಕ್ಲಬ್ ಚಾಂಪಿಯನ್ಸ್ ಟಿ20 ಲೀಗ್​ಗೆ ವಿಂಡೋ ತೆರೆದುಕೊಳ್ಳಲಿದೆ. ಹೀಗಾಗಿ ಮುಂಬರುವ ದಿನಗಳಲ್ಲಿ ಈ ಮಾತುಕತೆ ಯಶಸ್ವಿಯಾದರೆ, ನವೆಂಬರ್-ಡಿಸೆಂಬರ್ ವೇಳೆ ಚಾಂಪಿಯನ್ ತಂಡಗಳ ಚಾಂಪಿಯನ್ಸ್​ ಟಿ20 ಲೀಗ್ ಆಯೋಜನೆಗೊಳ್ಳುವ ಸಾಧ್ಯತೆಯಿದೆ.

5 / 6
2009-10 ರಿಂದ 2014-15 ರ ನಡುವೆ 6 ಬಾರಿ ಚಾಂಪಿಯನ್ಸ್ ಟಿ20 ಟೂರ್ನಿಯನ್ನು ಆಯೋಜಿಸಲಾಗಿದೆ. ನಾಲ್ಕು ಬಾರಿ ಭಾರತದಲ್ಲಿ ಟೂರ್ನಿ ನಡೆದರೆ, 2 ಬಾರಿ ಸೌತ್ ಆಫ್ರಿಕಾದಲ್ಲಿ ಟೂರ್ನಿಯನ್ನು ಆಡಲಾಗಿತ್ತು. ಈ ವೇಳೆ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ತಲಾ ಎರಡು ಬಾರಿ ಗೆದ್ದರೆ, ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್ ಮತ್ತು ಸಿಡ್ನಿ ಸಿಕ್ಸರ್ಸ್ ತಲಾ ಒಂದು ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿತ್ತು.

6 / 6