- Kannada News Photo gallery Cricket photos Virat Kohli shares adorable birthday wish for wife Anushka Sharma
Happy Birthday Anushka Sharma: ‘ನೀನೇ ನನ್ನ ಸರ್ವಸ್ವ’; ಮಡದಿಯ ಹುಟ್ಟು ಹಬ್ಬಕ್ಕೆ ಕಿಂಗ್ ಕೊಹ್ಲಿಯ ವಿಶೇಷ ಸಂದೇಶ
Happy Birthday Anushka Sharma: ಅನುಷ್ಕಾ ಹುಟ್ಟುಹಬ್ಬದಂದು ಅವರ ಒಟ್ಟು 7 ಫೋಟೋಗಳನ್ನು ಇನ್ಸ್ಗ್ರಾಂನಲ್ಲಿ ಹಂಚಿಕೊಂಡಿರುವ ವಿರಾಟ್, ನಿನ್ನೆಲ್ಲ ಹುಚ್ಚುತನವನ್ನು ಪ್ರೀತಿಸುತ್ತೇನೆ. ನೀನು ನನ್ನ ಸರ್ವಸ್ವ. ಹುಟ್ಟುಹಬ್ಬ ಶುಭಾಶಯಗಳು ಎಂದು ಬರೆದುಕೊಂಡಿದ್ದಾರೆ.
Updated on:May 01, 2023 | 5:31 PM

ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಇಂದು 35 ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ನಟಿಯ ಜನುಮ ದಿನಕ್ಕೆ ಬಾಲಿವುಡ್ ಸೆಲೆಬ್ರೆಟಿಗಳು ಸೇರಿದಂತೆ ಹಲವರು ಭಿನ್ನವಾಗಿ ಜನ್ಮದಿನದ ಶುಭಾಶಯ ಕೋರಿದ್ದಾರೆ. ಇವರ ಸಾಲಿಗೆ ಪತಿ ಕೊಹ್ಲಿಯೂ ಸೇರಿದ್ದು, ವಿಶೇಷ ಸಂದೇಶ ಬರೆಯುವುದರೊಂದಿಗೆ ಕೊಹ್ಲಿ, ಪತ್ನಿಯ ಜನ್ಮ ದಿನವನ್ನು ವಿಶೇಷವನ್ನಾಗಿಸಿದ್ದಾರೆ.

ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಪ್ರತಿ ವರ್ಷ ತಮ್ಮ ಪತ್ನಿ ಅನುಷ್ಕಾ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸುತ್ತಾ ಬಂದಿದ್ದಾರೆ. ಸದ್ಯ ಐಪಿಎಲ್‌ನಲ್ಲಿ ಬ್ಯುಸಿಯಾಗಿರುವ ಕೊಹ್ಲಿ, ಮಡದಿ ಅನುಷ್ಕಾಗೆ ಸೋಶಿಯಲ್ ಮೀಡಿಯಾದಲ್ಲಿ ವಿಭಿನ್ನವಾಗಿ ಶುಭಾಶಯ ಕೋರಿದ್ದಾರೆ.

ಕೊಹ್ಲಿ ತಮ್ಮ ಪತ್ನಿ ಅನುಷ್ಕಾ ಅವರ ಅಪರೂಪದ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದು, ವಿಶೇಷ ಸಂದೇಶದ ಮೂಲಕ ಜನ್ಮ ದಿನದ ಶುಭಾಶಯ ಕೋರಿದ್ದಾರೆ.

ಅನುಷ್ಕಾ ಹುಟ್ಟುಹಬ್ಬದಂದು ಅವರ ಒಟ್ಟು 7 ಫೋಟೋಗಳನ್ನು ಇನ್ಸ್ಗ್ರಾಂನಲ್ಲಿ ಹಂಚಿಕೊಂಡಿರುವ ವಿರಾಟ್, ನಿನ್ನೆಲ್ಲ ಹುಚ್ಚುತನವನ್ನು ಪ್ರೀತಿಸುತ್ತೇನೆ. ನೀನು ನನ್ನ ಸರ್ವಸ್ವ. ಹುಟ್ಟುಹಬ್ಬ ಶುಭಾಶಯಗಳು ಎಂದು ಬರೆದುಕೊಂಡಿದ್ದಾರೆ.

ವಿರಾಟ್ ಮತ್ತು ಅನುಷ್ಕಾ ಡಿಸೆಂಬರ್ 11, 2017 ರಂದು ಇಟಲಿಯಲ್ಲಿ ವಿವಾಹವಾದರು. 2021 ರಲ್ಲಿ ಈ ದಂಪತಿಗೆ ಹೆಣ್ಣು ಮಗು ಜನಿಸಿದ್ದು, ಅವರಿಗೆ ವಮಿಕಾ ಎಂದು ಹೆಸರಿಟ್ಟಿದ್ದಾರೆ.

ಸದ್ಯ ವಿರಾಟ್ ಕೊಹ್ಲಿ 16ನೇ ಐಪಿಎಲ್‌ನಲ್ಲಿ ಬ್ಯುಸಿಯಾಗಿದ್ದಾರೆ. ಇಂದು ಎಕಾನಾ ಸ್ಟೇಡಿಯಂನಲ್ಲಿ ಆರ್ಸಿಬಿ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಎದುರಿಸಲಿದೆ. ಪ್ರಸಕ್ತ ಐಪಿಎಲ್‌ನಲ್ಲಿ ಆರ್‌ಸಿಬಿಯ ಹಲವು ಪಂದ್ಯಗಳಲ್ಲಿ ಅನುಷ್ಕಾ ಗ್ಯಾಲರಿಯಲ್ಲಿ ಕಾಣಿಸಿಕೊಂಡಿದ್ದಾರೆ.
Published On - 5:31 pm, Mon, 1 May 23




