AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Virat Kohli: ಕಿಂಗ್ ಕೊಹ್ಲಿ 18ನೇ ನಂಬರ್ ಜೆರ್ಸಿ ತೊಡುವುದ್ಯಾಕೆ? ಇದರ ಹಿಂದಿದೆ ನೋವಿನ ಕಥೆ

Virat Kohli: 2008 ರಲ್ಲಿ ನಡೆದ ಅಂಡರ್-19 ವಿಶ್ವಕಪ್​ನಲ್ಲೂ ವಿರಾಟ್ ಕೊಹ್ಲಿ 18 ನೇ ನಂಬರ್ ಜರ್ಸಿ ತೊಟ್ಟು ಕಣಕ್ಕಿಳಿದಿದ್ದರು. ಅಲ್ಲದೆ ತಮ್ಮ ನಾಯಕತ್ವದಲ್ಲಿ ತಂಡವನ್ನು ಚಾಂಪಿಯನ್ ಕೂಡ ಮಾಡಿದ್ದರು.

ಪೃಥ್ವಿಶಂಕರ
|

Updated on:Mar 25, 2023 | 3:25 PM

ಜೆರ್ಸಿ ನಂಬರ್ 18 ಎಂದ ಕೂಡಲೇ ಕ್ರಿಕೆಟ್ ಜಗತ್ತಿನಲ್ಲಿ ನೆನಪಾಗುವ ಹೆಸರೆಂದರೆ ವಿರಾಟ್ ಕೊಹ್ಲಿ. ಟೀಂ ಇಂಡಿಯಾ ಹಾಗೂ ಐಪಿಎಲ್ ಫ್ರಾಂಚೈಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡುವಾಗ ವಿರಾಟ್ ಕೊಹ್ಲಿ ಯಾವಾಗಲೂ ನಂಬರ್ 18 ಜರ್ಸಿಯನ್ನು ಧರಿಸುತ್ತಾರೆ. ಇದಕ್ಕೆ ಕಾರಣವೂ ಇದ್ದು, ಕಿಂಗ್ ಕೊಹ್ಲಿ ಮೈದಾನಕ್ಕಿಳಿದಾಗಲೆಲ್ಲ 18ನೇ ನಂಬರ್ ಜೆರ್ಸಿ ಧರಿಸುವುದು ಏಕೆ ಎಂಬುದರ ಹಿಂದಿನ ಮರ್ಮ ಈಗ ಬಹಿರಂಗಗೊಂಡಿದೆ.

1 / 6
ವಾಸ್ತವವಾಗಿ ಕೊಹ್ಲಿ ಇದೇ ಸಂಖ್ಯೆಯ ಜೆರ್ಸಿ ತೊಡುವುದರ ಹಿಂದೆ ಒಂದು ಭಾವನಾತ್ಮಕ ಕಾರಣವಿದೆ. 2008 ರಲ್ಲಿ ನಡೆದ ಅಂಡರ್-19 ವಿಶ್ವಕಪ್​ನಲ್ಲೂ ವಿರಾಟ್ ಕೊಹ್ಲಿ 18 ನೇ ನಂಬರ್ ಜರ್ಸಿ ತೊಟ್ಟು ಕಣಕ್ಕಿಳಿದಿದ್ದರು. ಅಲ್ಲದೆ ತಮ್ಮ ನಾಯಕತ್ವದಲ್ಲಿ ತಂಡವನ್ನು ಚಾಂಪಿಯನ್ ಕೂಡ ಮಾಡಿದ್ದರು.

2 / 6
ಆ ಬಳಿಕ ಕೊಹ್ಲಿ ಟೀಂ ಇಂಡಿಯಾಕ್ಕೆ ಎಂಟ್ರಿಕೊಟ್ಟಾಗ ಉಳಿದ ಯಾವ ಆಟಗಾರನೂ 18ನೇ ನಂಬರ್ ಜೆರ್ಸಿಯನ್ನು ತೊಟ್ಟು ಕಣಕ್ಕಿಳಿಯುತ್ತಿರಲಿಲ್ಲ. ಹೀಗಾಗಿ ಕೊಹ್ಲಿಗೆ ಆ ಸಂಖ್ಯೆಯ ಜೆರ್ಸಿ ಪಡೆಯವುದು ಕಷ್ಟವಾಗಲಿಲ್ಲ.

3 / 6
ವಾಸ್ತವವಾಗಿ ವಿರಾಟ್ ಕೊಹ್ಲಿ 18ನೇ ನಂಬರ್ ಜೆರ್ಸಿ ತೊಡಲು ಇರುವ ಕಾರಣವೆಂದರೆ, ಆ ದಿನಾಂಕದಂದು ಅಂದರೆ, ಡಿಸೆಂಬರ್ 18, 2006 ರಂದು ಕೊಹ್ಲಿಯವರ ತಂದೆ ನಿಧನರಾದರು. ತಂದೆಯ ನೆನಪಿಗಾಗಿ ಕೊಹ್ಲಿ 18ನೇ ನಂಬರ್ ಜೆರ್ಸಿ ತೊಟ್ಟು ಕಣಕ್ಕಿಳಿಯುತ್ತಾರೆ.

4 / 6
ಆ ಸಮಯದಲ್ಲಿ 17ವರ್ಷದ ಹುಡುಗನಾಗಿದ್ದ ಕೊಹ್ಲಿ, ತಮ್ಮ ತಂದೆ ನಿಧನರಾದಾಗ ಕರ್ನಾಟಕದ ವಿರುದ್ಧ ದೆಹಲಿ ಪರ ರಣಜಿ ಆಡುತ್ತಿದ್ದರು. ತಂದೆ ನಿಧನ ಹೊರತಾಗಿಯೂ ವೃತ್ತಿಧರ್ಮ ತೋರಿದ ಕೊಹ್ಲಿ, ಮರುದಿನವೇ ರಣಜಿ ಪಂದ್ಯವನ್ನು ಆಡಲು ನಿರ್ಧರಿಸಿದರು. ತನ್ನ ತಾಯಿ ಮತ್ತು ಕೋಚ್ ಜೊತೆಗಿನ ಚರ್ಚೆಯ ನಂತರ ಪಂದ್ಯವನ್ನಾಡಲು ನಿರ್ಧರಿಸಿದ ಕೊಹ್ಲಿ, ಆ ಪಂದ್ಯದಲ್ಲಿ 90 ರನ್ ಬಾರಿಸಿದರು. ಇದು ಡೆಲ್ಲಿಗೆ ಫಾಲೋ-ಆನ್ ತಪ್ಪಿಸಲು ಸಹಾಯ ಮಾಡಿತು.

5 / 6
ಅಂದಿನ ಸನ್ನಿವೇಶದ ಬಗ್ಗೆ ಮಾತನಾಡಿರುವ ಕೊಹ್ಲಿ, ನನ್ನ ತಂದೆ ರಾತ್ರಿ ತೀರಿಕೊಂಡರು. ಆದರೆ ನನ್ನ ತಂದೆಯ ಮರಣದ ನಂತರ ದಿನ ರಣಜಿ ಆಡಲು ನನಗೆ ಸಹಜವಾಗಿಯೇ ಕರೆ ಬಂದಿತು. ನಾನು ಬೆಳಿಗ್ಗೆ ನನ್ನ (ದೆಹಲಿ) ಕೋಚ್‌ಗೆ ಕರೆ ಮಾಡಿ ಇಂದಿನ ಪಂದ್ಯದಲ್ಲಿ ಆಡುವುದಾಗಿ ಹೇಳಿದ್ದೆ. ಏಕೆಂದರೆ ನನ್ನ ಜೀವನದಲ್ಲಿ ಈ ಕ್ರೀಡೆಗೆ ಇರುವ ಪ್ರಾಮುಖ್ಯತೆ ತುಂಬಾ ಹೆಚ್ಚು ಎಂದಿದ್ದರು.

6 / 6

Published On - 3:21 pm, Sat, 25 March 23

Follow us
ಉಗ್ರರ ವಿರುದ್ಧ ಕ್ರಮಕೈಗೊಳ್ಳಿ, ಮೋದಿ ಜೊತೆ ನಾವಿದ್ದೇವೆ: ಮುಸ್ಲಿಂ ಮುಖಂಡರು

‘ಕಿತ್ಗೊಂಡು ತಿನ್ನುವವರಿಗೆ ಹೊಟ್ಟೆ ತುಂಬಲ್ಲ’; ಹಾಡು ಹೇಳಿದ ಸಾಧು ಕೋಕಿಲ

ಕಾರ್ಯಕ್ರಮದಲ್ಲಿ ಸಚಿವ ವೆಂಕಟೇಶ್​ರನ್ನು ವಿಶೇಷವಾಗಿ ಹೊಗಳಿದ ಸಿದ್ದರಾಮಯ್ಯ

ಅಮಿತ್ ಶಾ ಆದೇಶ ಕೇಳಿ ಪಾಕಿಸ್ತಾನಿ ಮಹಿಳೆಯ ಅತ್ತೆಗೆ ಹೃದಯಾಘಾತ

‘ಅವರು ಹೇಡಿಗಳು, ಗಂಡಸ್ತನ ಇದ್ರೆ ಸೈನಿಕರ ವಿರುದ್ಧ ಹೋರಾಡಲಿ’; ಚಂದನ್ ಶೆಟ್ಟ

ಬರವಣಿಗೆ ನನ್ನ ಶಕ್ತಿಯಾಗಿತ್ತು ಎನ್ನುತ್ತಾರೆ 425 ನೇ ರ‍್ಯಾಂಕ್ ಪಡೆದ ಮೇಘನಾ

ಇಂದಿನಿಂದ ಹುಬ್ಬಳ್ಳಿಯಲ್ಲಿ ಆರಂಭವಾಗಿರುವ 2-ದಿನದ ಎಜುಕೇಶನ್ ಎಕ್ಸ್​ಪೋ

ಯುದ್ಧದ ಬಗ್ಗೆ ಸಿಎಂ ಸಿದ್ದರಾಮಯ್ಯ ಏನು ಹೇಳಿದ್ದಾರೆ ಗೊತ್ತಿಲ್ಲ: ಲಕ್ಷ್ಮಿ

ಕೋಲಾರದಲ್ಲಿ ಜನಪದ ಗಾಯಕನಿಂದ ನಿರ್ಮಾಣವಾದ ಹೈಟೆಕ್ ​ಬಸ್ ನಿಲ್ದಾಣ

ಪಾಕಿಸ್ತಾನಕ್ಕೆ ಅದರದ್ದೇ ಭಾಷೆಯಲ್ಲಿ ಉತ್ತರ ಕೊಡಬೇಕು: ಧ್ರುವ ಸರ್ಜಾ