AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಚಿನ್​ರ ಸಾರ್ವಕಾಲಿಕ ದಾಖಲೆ ಮುರಿಯಲು ವಿರಾಟ್ ಕೊಹ್ಲಿ ಇನ್ನೆಷ್ಟು ರನ್​​ಗಳಿಸಬೇಕು?

Virat kohli Record: ನ್ಯೂಝಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ವಿರಾಟ್ ಕೊಹ್ಲಿ 91 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 8 ಫೋರ್​​ಗಳೊಂದಿಗೆ 93 ರನ್​​ ಗಳಿಸಿದ್ದಾರೆ. ಈ ಅರ್ಧಶತಕದೊಂದಿಗೆ ಕಿಂಗ್ ಕೊಹ್ಲಿ ವಿಶೇಷ ದಾಖಲೆಯನ್ನು ನಿರ್ಮಿಸಿದ್ದಾರೆ. ಈ ದಾಖಲೆಯೊಂದಿಗೆ ಸಚಿನ್ ತೆಂಡೂಲ್ಕರ್ ಅವರ ವಿಶ್ವ ದಾಖಲೆಯತ್ತ ದಾಪುಗಾಲಿಟ್ಟಿದ್ದಾರೆ.

ಝಾಹಿರ್ ಯೂಸುಫ್
|

Updated on: Jan 14, 2026 | 8:10 AM

Share
ದಾಖಲೆಗಳ ಸರದಾರ ವಿರಾಟ್ ಕೊಹ್ಲಿ (Virat Kohli) ಹೆಸರಿಗೆ ಮತ್ತೊಂದು ದಾಖಲೆ ಸೇರ್ಪಡೆಯಾಗಿದೆ. ಈ ದಾಖಲೆಯೊಂದಿಗೆ ಕಿಂಗ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​​ನ ರನ್ ಸರದಾರರ ಪಟ್ಟಿಯಲ್ಲಿ ದ್ವಿತೀಯ ಸ್ಥಾನಕ್ಕೇರಿದ್ದಾರೆ. ಅದು ಕೂಡ ಶ್ರೀಲಂಕಾದ ಕುಮಾರ ಸಂಗಾಕ್ಕರ ಅವರನ್ನು ಹಿಂದಿಕ್ಕುವ ಮೂಲಕ.

1 / 5
2000 ರಿಂದ 2015 ರವರೆಗೆ ಶ್ರೀಲಂಕಾ ಪರ ಕಣಕ್ಕಿಳಿದಿದ್ದ ಕುಮಾರ ಸಂಗಕ್ಕಾರ ಒಟ್ಟು 594 ಪಂದ್ಯಗಳನ್ನಾಡಿದ್ದಾರೆ. ಈ ವೇಳೆ 666 ಇನಿಂಗ್ಸ್ ಆಡಿರುವ ಅವರು 63 ಶತಕ ಹಾಗೂ 153 ಅರ್ಧಶತಕಗಳೊಂದಿಗೆ ಒಟ್ಟು 28016 ರನ್ ಕಲೆಹಾಕಿದ್ದಾರೆ. ಈ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್​​ನಲ್ಲಿ ಅತ್ಯಧಿಕ ರನ್​​ಗಳಿಸಿದ 2ನೇ ಬ್ಯಾಟರ್ ಎನಿಸಿಕೊಂಡಿದ್ದರು. ಇದೀಗ ಈ ದಾಖಲೆಯನ್ನು ವಿರಾಟ್ ಕೊಹ್ಲಿ ಮುರಿದಿದ್ದಾರೆ.

2 / 5
2008 ರಿಂದ ಅಂತಾರಾಷ್ಟ್ರೀಯ ಕ್ರಿಕೆಟ್ ಆಡುತ್ತಿರುವ ವಿರಾಟ್ ಕೊಹ್ಲಿ ಈವರೆಗೆ 557 ಪಂದ್ಯಗಳನ್ನಾಡಿದ್ದಾರೆ. ಈ ವೇಳೆ 624 ಇನಿಂಗ್ಸ್ ಆಡಿರುವ ಕಿಂಗ್ ಕೊಹ್ಲಿ 84 ಶತಕ ಹಾಗೂ 146 ಅರ್ಧಶತಕಗಳೊಂದಿಗೆ 28068 ರನ್​​ ಕಲೆಹಾಕಿದ್ದಾರೆ. ಈ ಮೂಲಕ ಇಂಟರ್​​ನ್ಯಾಷನಲ್ ಕ್ರಿಕೆಟ್​​ನಲ್ಲಿ ಅತೀ ಹೆಚ್ಚು ರನ್​ಗಳಿಸಿದ ವಿಶ್ವದ 2ನೇ ಬ್ಯಾಟರ್ ಎನಿಸಿಕೊಂಡಿದ್ದಾರೆ. ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವುದು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್.

3 / 5
1989 ರಿಂದ 2013 ರವರೆಗೆ ಸಚಿನ್ ತೆಂಡೂಲ್ಕರ್ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 664 ಪಂದ್ಯಗಳನ್ನಾಡಿದ್ದಾರೆ. ಈ ವೇಳೆ 782 ಇನಿಂಗ್ಸ್​​ಗಳಲ್ಲಿ ಬ್ಯಾಟ್ ಬೀಸಿದ್ದ ಅವರು 100 ಶತಕ ಹಾಗೂ 164 ಅರ್ಧಶತಕಗಳೊಂದಿಗೆ ಒಟ್ಟು 34357 ರನ್​​ಗಳಿಸಿದ್ದಾರೆ. ಈ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲೇ ಅತ್ಯಧಿಕ ರನ್​ಗಳಿಸಿದ ಬ್ಯಾಟರ್ ಎನಿಸಿಕೊಂಡಿದ್ದಾರೆ.

4 / 5
ಇದೀಗ ರನ್​ ಸರದಾರರ ಪಟ್ಟಿಯಲ್ಲಿ ದ್ವಿತೀಯ ಸ್ಥಾನಕ್ಕೇರಿರುವ ವಿರಾಟ್ ಕೊಹ್ಲಿಯ ಮುಂದಿರುವುದು ಸಚಿನ್ ತೆಂಡೂಲ್ಕರ್ ಅವರ ಸಾರ್ವಕಾಲಿಕ ದಾಖಲೆ. ಈ ದಾಖಲೆ ಮುರಿಯಲು ಕೊಹ್ಲಿಗೆ ಇನ್ನೂ 6289 ರನ್​​ಗಳು ಬೇಕಿದೆ. ಈಗಾಗಲೇ ಟೆಸ್ಟ್ ಹಾಗೂ ಟಿ20 ಕ್ರಿಕೆಟ್​​ಗೆ ಗುಡ್ ಬೈ ಹೇಳಿರುವ ಕೊಹ್ಲಿ ಮುಂಬರುವ ದಿನಗಳಲ್ಲಿ ಏಕದಿನ ಪಂದ್ಯಗಳ ಮೂಲಕ 6 ಸಾವಿರಕ್ಕೂ ಅಧಿಕ ರನ್​​ಗಳಿಸುವುದು ಕಷ್ಟಸಾಧ್ಯ. ಹೀಗಾಗಿ ಸಚಿನ್ ತೆಂಡೂಲ್ಕರ್ ಅವರ ಸಾರ್ವಕಾಲಿಕ ದಾಖಲೆ ಸಾರ್ವಕಾಲಿಕವಾಗಿಯೇ ಉಳಿಯಲಿದೆ.

5 / 5
ಸಂಕ್ರಾಂತಿ: ಕೆಆರ್​ ಮಾರ್ಕೆಟ್ ಸುತ್ತಮುತ್ತ ಮುಂಜಾನೆಯೇ ಭಾರಿ ಟ್ರಾಫಿಕ್ ಜಾಂ

ಶನಿಗ್ರಹ ಇತರ ಗ್ರಹದೊಂದಿಗೆ ಇದ್ರೆ ಯಾವ ಖಾಯಿಲೆ ಬರುತ್ತೆ ಗೊತ್ತಾ?

ಇಂದು ಈ ರಾಶಿಯವರ ಖರ್ಚುಗಳಲ್ಲಿ ಇಳಿಕೆ
ಇಂದು ಈ ರಾಶಿಯವರ ಖರ್ಚುಗಳಲ್ಲಿ ಇಳಿಕೆ
ಮಕರ ಸಂಕ್ರಾಂತಿ: ಗವಿಗಂಗಾಧರೇಶ್ವರನಿಗೆ ಸೂರ್ಯರಶ್ಮಿ ಸ್ಪರ್ಷ ಎಷ್ಟು ಗಂಟೆಗೆ?

ಪ್ರಯಾಗರಾಜ್ ಮಾಘ ಮೇಳದ ಶಿಬಿರದಲ್ಲಿ ಬೆಂಕಿ ಅವಘಡ; 15 ಡೇರೆಗಳು ಸುಟ್ಟು ಭಸ್ಮ

ಪುದುಚೆರಿಯ ಕಾಲೇಜುಗಳಲ್ಲಿ ಇಂದೇ ಸಂಕ್ರಾಂತಿ ಸಂಭ್ರಮ

ಯಶ್ ಹುಟ್ಟುಹಬ್ಬಕ್ಕೆ ಮನೆ ಮುಂದೆ ಬ್ಯಾನರ್ ಹಾಕಿದ್ದಕ್ಕೆ ಎಫ್​ಐಆರ್ ದಾಖಲು

ಬಿಗ್​​ಬಾಸ್ ಕನ್ನಡ: ಗಿಲ್ಲಿ ಪರವಾಗಿ ಮತ ಕೇಳಿದ ಮಳವಳ್ಳಿ ಶಾಸಕ

ಚಿಕ್ಕಮಗಳೂರಲ್ಲಿ ವರುಣನ ಅಬ್ಬರ: ಅಕಾಲಿಕ ಮಳೆಗೆ ಕೊಚ್ಚಿಹೋದ ಕಾಫಿ

ಕಾಂಗ್ರೆಸ್​​​ನಲ್ಲಿ ಮಹತ್ವದ ಬೆಳವಣಿಗೆ: ಡಿಕೆಶಿಗೆ ರಾಹುಲ್ ಮಹತ್ವದ ಸಂದೇಶ