IND vs ENG: 5ನೇ ಟೆಸ್ಟ್​ ಮೊದಲ ಇನ್ನಿಂಗ್ಸ್​ನಲ್ಲೇ ಹಲವು ದಾಖಲೆ ಬರೆದ ಜೈಸ್ವಾಲ್..! ಪಟ್ಟಿ ಇಲ್ಲಿದೆ

Yashasvi Jaiswal: ಈ ಪಂದ್ಯದಲ್ಲಿ ಅರ್ಧಶತಕ ಸಿಡಿಸಿದ ಜೈಸ್ವಾಲ್ ಈ ಇನ್ನಿಂಗ್ಸ್ ಅನ್ನು ದೊಡ್ಡ ಇನ್ನಿಂಗ್ಸ್ ಆಗಿ ಪರಿವರ್ತಿಸಲು ವಿಫಲರಾದರು. ಅದಾಗ್ಯೂ ಇಂಗ್ಲೆಂಡ್ ವಿರುದ್ಧದ ಈ ಅರ್ಧಶತಕದೊಂದಿಗೆ ತಮ್ಮ ಹೆಸರಿನಲ್ಲಿ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ. ಈ ಮೂಲಕ ದಿಗ್ಗಜ ಬ್ಯಾಟ್ಸ್‌ಮನ್ ಡಾನ್ ಬ್ರಾಡ್‌ಮನ್ ಅವರ ಕ್ಲಬ್‌ಗೆ ಸೇರಿಕೊಂಡಿದ್ದಾರೆ.

ಪೃಥ್ವಿಶಂಕರ
|

Updated on:Mar 07, 2024 | 8:53 PM

ಭಾರತ ತಂಡದ ಯುವ ಆರಂಭಿಕ ಬ್ಯಾಟ್ಸ್‌ಮನ್ ಯಶಸ್ವಿ ಜೈಸ್ವಾಲ್ ಧರ್ಮಶಾಲಾ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ 58 ಎಸೆತಗಳಲ್ಲಿ 57 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದರು. ನಾಯಕ ರೋಹಿತ್ ಶರ್ಮಾ ಜೊತೆಗೂಡಿ ಮೊದಲ ವಿಕೆಟ್‌ಗೆ 104 ರನ್‌ಗಳ ಉತ್ತಮ ಜೊತೆಯಾಟವನ್ನು ಹಂಚಿಕೊಂಡರು.

1 / 10
ಆದಾಗ್ಯೂ, ತಮ್ಮ ಇನ್ನಿಂಗ್ಸ್ ಅನ್ನು ದೊಡ್ಡ ಇನ್ನಿಂಗ್ಸ್ ಆಗಿ ಪರಿವರ್ತಿಸಲು ವಿಫಲರಾದ ಜೈಸ್ವಾಲ್, ಇಂಗ್ಲೆಂಡ್ ವಿರುದ್ಧದ ಈ ಅರ್ಧಶತಕದೊಂದಿಗೆ ತಮ್ಮ ಹೆಸರಿನಲ್ಲಿ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ. ಈ ಮೂಲಕ ದಿಗ್ಗಜ ಬ್ಯಾಟ್ಸ್‌ಮನ್ ಡಾನ್ ಬ್ರಾಡ್‌ಮನ್ ಅವರ ಕ್ಲಬ್‌ಗೆ ಸೇರಿಕೊಂಡಿದ್ದಾರೆ.

2 / 10
ಈ ಪಂದ್ಯದಲ್ಲಿ ಅರ್ಧಶತಕ ಸಿಡಿಸಿದ ಜೈಸ್ವಾಲ್ ಅತಿ ಕಡಿಮೆ ಇನ್ನಿಂಗ್ಸ್​ಗಳಲ್ಲಿ 1000 ರನ್ ಪೂರೈಸಿದ ವಿಶ್ವದ ಐದನೇ ಆಟಗಾರ ಎನಿಸಿಕೊಂಡರು. ಜೈಸ್ವಾಲ್ ಇದುವರೆಗೆ ಆಡಿರುವ 9 ಟೆಸ್ಟ್ ಪಂದ್ಯಗಳಲ್ಲಿ 1000 ರನ್ ಪೂರೈಸಿದ್ದಾರೆ. ಇನ್ನು ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಡಾನ್ ಬ್ರಾಡ್‌ಮನ್ ಕೇವಲ 7 ಟೆಸ್ಟ್ ಪಂದ್ಯಗಳಲ್ಲಿ 1000 ರನ್ ಪೂರ್ಣಗೊಳಿಸಿದ್ದರು.

3 / 10
ಇದಲ್ಲದೆ ಅತಿ ಕಡಿಮೆ ಇನ್ನಿಂಗ್ಸ್‌ಗಳಲ್ಲಿ 1000 ರನ್ ಪೂರೈಸಿದ ಭಾರತದ ಎರಡನೇ ಬ್ಯಾಟ್ಸ್‌ಮನ್ ಎಂಬ ಖ್ಯಾತಿಗೆ ಜೈಸ್ವಾಲ್ ಪಾತ್ರರಾಗಿದ್ದಾರೆ. ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಮಾಜಿ ಆಟಗಾರ  ವಿನೋದ್ ಕಾಂಬ್ಳಿ ಕೇವಲ 14 ಇನ್ನಿಂಗ್ಸ್‌ಗಳಲ್ಲಿ 1000 ರನ್ ಪೂರೈಸಿದ್ದರು.

4 / 10
ಉಳಿದಂತೆ ಈ ಪಟ್ಟಿಯಲ್ಲಿ 16 ಇನ್ನಿಂಗ್ಸ್‌ಗಳಲ್ಲಿ 1000 ರನ್‌ಗಳ ಗಡಿ ದಾಟಿದ ಚೇತೇಶ್ವರ ಪೂಜಾರ ಮೂರನೇ ಸ್ಥಾನದಲ್ಲಿದ್ದರೆ, ಕನ್ನಡಿಗ ಮಯಾಂಕ್ ಅಗರ್ವಾಲ್ (19 ಇನ್ನಿಂಗ್ಸ್) ನಾಲ್ಕನೇ ಸ್ಥಾನ ಹಾಗೂ ಮಾಜಿ ನಾಯಕ ಸುನಿಲ್ ಗವಾಸ್ಕರ್ (21 ಇನ್ನಿಂಗ್ಸ್) ಐದನೇ ಸ್ಥಾನದಲ್ಲಿದ್ದಾರೆ.

5 / 10
ಧರ್ಮಶಾಲಾ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ 1000 ರನ್ ಗಳಿಸಿದ ಯಶಸ್ವಿ ಜೈಸ್ವಾಲ್ ಟೆಸ್ಟ್ ಕ್ರಿಕೆಟ್‌ನಲ್ಲಿ ಅತ್ಯಂತ ಕಿರಿಯ ವಯಸ್ಸಿನಲ್ಲಿ 1000 ರನ್ ಗಳಿಸಿದ ನಾಲ್ಕನೇ ಭಾರತೀಯ ಬ್ಯಾಟ್ಸ್‌ಮನ್ ಎನಿಸಿಕೊಂಡರು. ಯಶಸ್ವಿ ಜೈಸ್ವಾಲ್ 22 ವರ್ಷ 70 ದಿನಗಳಲ್ಲಿ 1 ಸಾವಿರ ರನ್ ಪೂರೈಸಿದ್ದಾರೆ.

6 / 10
19 ವರ್ಷ 217 ದಿನಗಳಲ್ಲಿ ಭಾರತದ ಪರ 1000 ಸಾವಿರ ರನ್ ಪೂರೈಸಿದ ಸಚಿನ್ ತೆಂಡೂಲ್ಕರ್ ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಎರಡನೇ ಸ್ಥಾನದಲ್ಲಿರುವ ವಿಶ್ವಕಪ್ ವಿಜೇತ ನಾಯಕ ಕಪಿಲ್ ದೇವ್ ಅವರು 21 ವರ್ಷ ಮತ್ತು 27 ದಿನಗಳ ವಯಸ್ಸಿನಲ್ಲಿ ಈ ಅಂಕಿಅಂಶವನ್ನು ದಾಟಿದ್ದರು.

7 / 10
ಮೂರನೇ ಸ್ಥಾನದಲ್ಲಿರುವ ಟೀಂ ಇಂಡಿಯಾದ ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ ಅವರು 21 ವರ್ಷ ಮತ್ತು 197 ದಿನಗಳಲ್ಲಿ ಟೆಸ್ಟ್‌ನಲ್ಲಿ 1000 ರನ್ ಪೂರೈಸಿದ್ದರು. ಇದೀಗ ಈ ಪಟ್ಟಿಯಲ್ಲಿ ಯಶಸ್ವಿ ಜೈಸ್ವಾಲ್ ನಾಲ್ಕನೇ ಸ್ಥಾನಕ್ಕೆ ತಲುಪಿದ್ದಾರೆ.

8 / 10
ಯಶಸ್ವಿ ಜೈಸ್ವಾಲ್ ಇದೀಗ ಭಾರತದ ಪರ ಟೆಸ್ಟ್ ಸರಣಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಎರಡನೇ ಭಾರತೀಯ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಜೈಸ್ವಾಲ್ ಮೊದಲು ವಿರಾಟ್ ಕೊಹ್ಲಿ ಎರಡನೇ ಸ್ಥಾನದಲ್ಲಿದ್ದರು. 2014/15ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ 692 ರನ್ ಗಳಿಸಿದ್ದ ಕೊಹ್ಲಿಯ ದಾಖಲೆಯನ್ನು 712 ರನ್ ಕಲೆಹಾಕುವ ಮೂಲಕ ಯಶಸ್ವಿ ಜೈಸ್ವಾಲ್ ಮುರಿದಿದ್ದಾರೆ.

9 / 10
ಇನ್ನು ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಸುನಿಲ್ ಗವಾಸ್ಕರ್ 1971 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ 774 ರನ್ ಮತ್ತು 1978/79 ರಲ್ಲಿ ಅದೇ ತಂಡದ ವಿರುದ್ಧ 732 ​​ರನ್ ಗಳಿಸಿ ವಿಶೇಷ ದಾಖಲೆ ಮಾಡಿದ್ದರು. 53 ವರ್ಷಗಳಿಂದ ಈ ದಾಖಲೆಯನ್ನು ಮುರಿಯಲು ಭಾರತದ ಯಾವುದೇ ಬ್ಯಾಟ್ಸ್‌ಮನ್‌ಗೆ ಸಾಧ್ಯವಾಗಿಲ್ಲ. ಆದರೆ, ಈ ದಾಖಲೆ ಮುರಿಯಲು ಯಶಸ್ವಿ ಜೈಸ್ವಾಲ್‌ಗೆ ಸುವರ್ಣಾವಕಾಶ ಸಿಕ್ಕಿದೆ. ಅವರಿಗೆ ಧರ್ಮಶಾಲಾ ಟೆಸ್ಟ್‌ನಲ್ಲಿ ಇನ್ನೂ ಒಂದು ಇನ್ನಿಂಗ್ಸ್ ಬಾಕಿ ಉಳಿದಿದೆ.

10 / 10

Published On - 8:52 pm, Thu, 7 March 24

Follow us
ನರೈನಾ ಗ್ರಾಮಕ್ಕೆ ಪ್ರಧಾನಿ ಮೋದಿ ಭೇಟಿ; ಲೋಹ್ರಿ ಆಚರಿಸಿ, ಜನರೊಂದಿಗೆ ಸಂವಾದ

ಸಚಿವ ಕಿಶನ್ ರೆಡ್ಡಿ ಮನೆಯ ಸಂಕ್ರಾಂತಿ ಹಬ್ಬದಲ್ಲಿ ಪಾಲ್ಗೊಂಡ ಪ್ರಧಾನಿ ಮೋದಿ

ತ್ಯಾಗ ಬಲಿದಾನಗಳಿಗಾಗಿ ನಮ್ಮಿಂದ ಪ್ರಾಮಾಣಿಕ ಪ್ರಯತ್ನ ನಡೆಯಬೇಕು: ಸಿಎಂ

ಬಿಗ್ ಬಾಸ್ ಮನೆಯೊಳಗೆ ಸಿದ್ಧವಾಯ್ತು ‘ಬಾಯ್ಸ್ Vs ಗರ್ಲ್ಸ್​’ ಪ್ರೋಮೋ

ಹಣಮಂತು ಮತ್ತು ರಜತ್; ಜಗದೀಶ್-ರಂಜಿತ್​ಗೆ ಉತ್ತಮ ರಿಪ್ಲೇಸ್ಮೆಂಟ್: ಚೈತ್ರಾ

ಹದಿನೈದನೇ ಹಣಕಾಸು ಆಯೋಗದ ಮೇಲೆ ಚರ್ಚೆಗೆ ಕುಮಾರಣ್ಣ ಬರಲಿ: ಶಿವಲಿಂಗೇಗೌಡ

ಬಿಗ್ ಬಾಸ್ ಮನೆಯಿಂದ ಹೊರಬಂದು ಮದುವೆ ಬಗ್ಗೆ ಮಾತಾಡಿದ ಚೈತ್ರಾ ಕುಂದಾಪುರ

ಮಹಾಕುಂಭದ ಮೊದಲ ದಿನವಾದ ಇಂದು 1 ಕೋಟಿ ಭಕ್ತರಿಂದ ತೀರ್ಥ ಸ್ನಾನ

ಕಾರ್ಯಕರ್ತರಿಂದಲೇ ಸರ್ಕಾರ ಅಂತ ಹತ್ತು ಸಲ ಹೇಳಿದ್ದೇನೆ: ಸತೀಶ್ ಜಾರಕಿಹೊಳಿ

ನಿನ್ನೆ ಜೋಡಿ, ಇಂದು ವೈರಿ: ಕಿತ್ತಾಡಿದ ಭವ್ಯಾ-ತ್ರಿವಿಕ್ರಮ್