- Kannada News Photo gallery Cricket photos IND vs ENG shubman gill maiden half century against england in odi
IND vs ENG: ಇಂಗ್ಲೆಂಡ್ ವಿರುದ್ಧ ಮೊದಲ ಬಾರಿಗೆ ಈ ಸಾಧನೆ ಮಾಡಿದ ಶುಭ್ಮನ್ ಗಿಲ್
Shubman Gill: ಇಂಗ್ಲೆಂಡ್ ವಿರುದ್ಧದ ಏಕದಿನ ಪಂದ್ಯದಲ್ಲಿ ಶುಭ್ಮನ್ ಗಿಲ್ ಅವರ ಅದ್ಭುತ ಅರ್ಧಶತಕ ಭಾರತಕ್ಕೆ ಗೆಲುವು ತಂದುಕೊಟ್ಟಿದೆ. 19 ರನ್‌ಗಳಿಗೆ ಎರಡು ವಿಕೆಟ್ ಕಳೆದುಕೊಂಡಿದ್ದಾಗ ಕ್ರೀಸ್‌ಗೆ ಬಂದ ಗಿಲ್ ಜವಾಬ್ದಾರಿಯುತ ಬ್ಯಾಟಿಂಗ್ ಮಾಡಿ ತಮ್ಮ 15ನೇ ಅರ್ಧಶತಕ ದಾಖಲಿಸಿದರು. ವಿಶೇಷವೆಂದರೆ ಉಪನಾಯಕನಾಗಿ ಗಿಲ್ಗೆ ಇದು ಮೊದಲ ಅರ್ಧಶತಕವಾದರೆ, ಇದರ ಜೊತೆಗೆ ಇಂಗ್ಲೆಂಡ್ ವಿರುದ್ಧ ಮೊದಲ ಏಕದಿನ ಅರ್ಧಶತಕ ಸಿಡಿಸಿದ ಸಾಧನೆಯನ್ನು ಗಿಲ್ ಮಾಡಿದರು.
Updated on: Feb 07, 2025 | 8:33 AM

ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಬ್ಯಾಟಿಂಗ್ ಕ್ರಮಾಂಕ ಬದಲಿಸಿ ಮೂರನೇ ಸ್ಥಾನದಲ್ಲಿ ಕ್ರೀಸ್ಗಿಳಿದಿದ್ದ ಶುಭ್ಮನ್ ಗಿಲ್ ಅದ್ಭುತ ಪ್ರದರ್ಶನ ನೀಡಿದರು. ಕೇವಲ 19 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡಿದ್ದಾಗ ಜವಬ್ದಾರಿಯುತ ಬ್ಯಾಟಿಂಗ್ ಮಾಡಿದ ಶುಭ್ಮನ್ ತಮ್ಮ ಏಕದಿನ ವೃತ್ತಿಜೀವನದ 15 ನೇ ಅರ್ಧಶತಕ ದಾಖಲಿಸಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು.

ಆದಾಗ್ಯೂ ಶುಭಮನ್ ಗಿಲ್ ಕೊನೆಯ ಹಂತದಲ್ಲಿ ಹೊಡಿಬಡಿ ಆಟಕ್ಕೆ ಮುಂದಾಗಿ ಕೇವಲ 13 ರನ್ಗಳಿಂದ ಶತಕ ವಂಚಿತರಾದರೂ ತಮ್ಮ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ಅಪರೂಪದ ಅರ್ಧಶತಕದ ಸಾಧನೆ ಮಾಡಿದರು. ವಾಸ್ತವವಾಗಿ ಗಿಲ್ ಅವರಿಗೆ ಈ ಅರ್ಧಶತಕ ವಿಶೇಷವಾಗಿದೆ. ಏಕೆಂದರೆ ಅವರು ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಮೊದಲ ಬಾರಿಗೆ ಅರ್ಧಶತಕದ ಇನ್ನಿಂಗ್ಸ್ ಆಡಿದರು. ಅದರಲ್ಲೂ ಗುರಿ ಬೆನ್ನಟ್ಟುವ ಬಂದ ಈ ಅರ್ಧಶತಕ ಗಿಲ್ ಪಾಲಿಗೆ ಮತ್ತಷ್ಟು ವಿಶೇಷವಾಗಿದೆ.

ಮೇಲೆ ಹೇಳಿದಂತೆ ಭಾರತ ಸಂಕಷ್ಟದಲ್ಲಿದ್ದಾಗ ಶುಭ್ಮನ್ ಗಿಲ್ ತಂಡದ ಸಾರಥ್ಯ ವಹಿಸಿಕೊಂಡರು. ಟೀಂ ಇಂಡಿಯಾ ಕೇವಲ 19 ರನ್‌ಗಳಿಗೆ ಜೈಸ್ವಾಲ್ ಮತ್ತು ರೋಹಿತ್ ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಈ ವೇಳೆ ಅಯ್ಯರ್ ಜೊತೆ ಸೇರಿ ಗಿಲ್ ಮೂರನೇ ವಿಕೆಟ್‌ಗೆ ಕೇವಲ 10.4 ಓವರ್‌ಗಳಲ್ಲಿ 94 ರನ್‌ಗಳನ್ನು ಜೊತೆಯಾಟ ನಡೆಸಿದರು.

ಅರ್ಧಶತಕ ಸಿಡಿಸಿ ಶ್ರೇಯಸ್ ಅಯ್ಯರ್ ಔಟಾದ ಬಳಿಕವೂ ಗಿಲ್ ಅದೇ ಜವಬ್ದಾರಿಯುತ ಬ್ಯಾಟಿಂಗ್ ಮುಂದುವರೆಸಿದರು. ಈ ವೇಳೆ ಬ್ಯಾಟಿಂಗ್ನಲ್ಲಿ ಬಡ್ತಿ ಪಡೆದು ಕ್ರೀಸ್‌ಗೆ ಬಂದ ಅಕ್ಷರ್ ಪಟೇಲ್ ಅವರೊಂದಿಗೂ ಶತಕದ ಜೊತೆಯಾಟ ನಡೆಸಿದರು. ಇಬ್ಬರೂ 107 ಎಸೆತಗಳಲ್ಲಿ 108 ರನ್ ಸೇರಿಸಿದರು. ಈ ಜೊತೆಯಾಟದಲ್ಲಿ ಅಕ್ಷರ್ 52 ರನ್ ಮತ್ತು ಗಿಲ್ 53 ರನ್ ಕಲೆಹಾಕಿದರು.

ಶುಭಮನ್ ಗಿಲ್ ನಾಗ್ಪುರ ಏಕದಿನ ಪಂದ್ಯದಲ್ಲಿ ಅರ್ಧಶತಕ ಬಾರಿಸುವುದರೊಂದಿಗೆ ಮತ್ತೊಂದು ದೊಡ್ಡ ಸಾಧನೆ ಕೂಡ ಮಾಡಿದ್ದಾರೆ. ವಾಸ್ತವವಾಗಿ ಗಿಲ್, 2000 ಕ್ಕೂ ಹೆಚ್ಚು ರನ್ ಗಳಿಸಿದ ಭಾರತೀಯ ಬ್ಯಾಟ್ಸ್‌ಮನ್‌ಗಳಲ್ಲಿ ಅತ್ಯಧಿಕ ಸರಾಸರಿ ಹೊಂದಿರುವ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಗಿಲ್ ಅವರ ಸರಾಸರಿ 60 ದಾಟಿದೆ.



















