- Kannada News Photo gallery Cricket photos IND vs SA Test Match tickets Price will begin from Rs 60 per day
ಟೀಮ್ ಇಂಡಿಯಾ ಪಂದ್ಯದ ಟಿಕೆಟ್ ಬೆಲೆ ಕೇವಲ 60 ರೂ. ಮಾತ್ರ..!
India vs South Africa: ಭಾರತ ಮತ್ತು ಸೌತ್ ಆಫ್ರಿಕಾ ನಡುವಣ ಮೊದಲ ಟೆಸ್ಟ್ ಪಂದ್ಯದ ಟಿಕೆಟ್ ಮಾರಾಟ ಪ್ರಾರಂಭವಾಗಿದೆ. ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯದ ಟಿಕೆಟ್ಗಳನ್ನು ಬಂಗಾಳ ಕ್ರಿಕೆಟ್ ಸಂಸ್ಥೆ ಆನ್ಲೈನ್ ಮೂಲಕ ಮಾರಾಟ ಮಾಡುತ್ತಿದ್ದು, ಆಸಕ್ತರು ಅಧಿಕೃತ ವೆಬ್ಸೈಟ್ ಮೂಲಕ ಖರೀದಿಸಬಹುದು.
Updated on: Oct 20, 2025 | 10:25 AM

ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಸರಣಿ ಮುಕ್ತಾಯದ ಬೆನ್ನಲ್ಲೇ ಟೀಮ್ ಇಂಡಿಯಾ ಮತ್ತೆ ರೆಡ್ ಬಾಲ್ ಕ್ರಿಕೆಟ್ನತ್ತ ಮರಳಲಿದೆ. ಅದು ಸಹ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಹಾಲಿ ಚಾಂಪಿಯನ್ ಸೌತ್ ಆಫ್ರಿಕಾ ವಿರುದ್ಧದ ಸರಣಿಯೊಂದಿಗೆ. ಈ ಸರಣಿಯ ಮೊದಲ ಪಂದ್ಯದ ಟಿಕೆಟ್ ಬೆಲೆ ಕೇವಲ 60 ರೂ. ಎಂದರೆ ನಂಬಲೇಬೇಕು.

ನವೆಂಬರ್ 14 ರಂದು ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆಯಲಿರುವ ಭಾರತ ಮತ್ತು ಸೌತ್ ಆಫ್ರಿಕಾ ನಡುವಣ ಮೊದಲ ಟೆಸ್ಟ್ ಪಂದ್ಯದ ಟಿಕೆಟ್ ಮಾರಾಟ ಪ್ರಾರಂಭವಾಗಿದೆ. ಈ ಟಿಕೆಟ್ ದರಗಳು ಕೇವಲ 60 ರೂ.ನಿಂದ ಪ್ರಾರಂಭವಾಗುತ್ತಿರುವುದು ವಿಶೇಷ.

ಅಂದರೆ ಒಂದು ದಿನದಾಟದ ಟಿಕೆಟ್ ಬೆಲೆ ಕೇವಲ 60 ರೂ. ಇನ್ನು ಐದು ದಿನದಾಟಗಳವರೆಗಿನ ಟಿಕೆಟ್ ಕೇವಲ 300 ರೂ.ಗೆ ಸಿಗಲಿದೆ. ಇನ್ನು ಮೇಲ್ದರ್ಜೆಯ ಗ್ಯಾಲರಿ ಟಿಕೆಟ್ಗಳನ್ನು 250 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಅದರಂತೆ ಐದು ದಿನಗಳವರೆಗಿನ ಟಿಕೆಟ್ ಅನ್ನು 1250 ರೂ.ಗೆ ಖರೀದಿಸಬಹುದು.

ಭಾರತ ಮತ್ತು ಸೌತ್ ಆಫ್ರಿಕಾ ನಡುವಣ ಮೊದಲ ಟೆಸ್ಟ್ ಪಂದ್ಯವು ನವೆಂಬರ್ 14 ರಿಂದ ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಶುರುವಾಗಲಿದೆ. ಇದಾದ ಬಳಿಕ ನವೆಂಬರ್ 22 ರಂದು ದ್ವಿತೀಯ ಟೆಸ್ಟ್ ಪಂದ್ಯ ಆರಂಭವಾಗಲಿದೆ. ಈ ಪಂದ್ಯವು ಗುವಾಹಟಿಯಲ್ಲಿ ನಡೆಯಲಿದೆ.

ಈ ಎರಡು ಟೆಸ್ಟ್ ಪಂದ್ಯಗಳ ನಡುವೆ ಭಾರತ ಮತ್ತು ಸೌತ್ ಆಫ್ರಿಕಾ ನಡುವೆ ಮೂರು ಏಕದಿನ ಪಂದ್ಯಗಳು ನಡೆಯಲಿದೆ. ಈ ಸರಣಿಯು ನವೆಂಬರ್ 30 ರಿಂದ ಶುರುವಾಗಲಿದೆ. ಇದಾದ ಬಳಿಕ ಡಿಸೆಂಬರ್ 9 ರಿಂದ 5 ಪಂದ್ಯಗಳ ಟಿ20 ಸರಣಿ ಆರಂಭವಾಗಲಿದೆ.
