IND vs SL: 152 ರನ್ ಮಾತ್ರಬೇಕು; ಲಂಕಾ ವಿರುದ್ಧ ವಿಶೇಷ ಮೈಲಿಗಲ್ಲು ದಾಟಲಿದ್ದಾರೆ ಕಿಂಗ್ ಕೊಹ್ಲಿ

|

Updated on: Jul 19, 2024 | 10:54 PM

Virat Kohli: ಈ ಸರಣಿಯಲ್ಲಿ ವಿರಾಟ್ ಕೊಹ್ಲಿ ತಮ್ಮ ಏಕದಿನ ಕ್ರಿಕೆಟ್‌ನಲ್ಲಿ 14000 ರನ್ ಪೂರ್ಣಗೊಳಿಸುವ ಅವಕಾಶವನ್ನು ಹೊಂದಿದ್ದು, ಈ ಮೈಲಿಗಲ್ಲು ತಲುಪಲು ಕೊಹ್ಲಿಗೆ 152 ರನ್ ಮಾತ್ರಬೇಕು. ಲಂಕಾ ವಿರುದ್ಧ ಕೊಹ್ಲಿ ಈ ಸಾಧನೆ ಮಾಡಿದರೆ ಏಕದಿನ ಕ್ರಿಕೆಟ್‌ನಲ್ಲಿ 14000 ರನ್ ಗಳಿಸಿದ ವಿಶ್ವದ ಮೂರನೇ ಬ್ಯಾಟ್ಸ್‌ಮನ್ ಎನಿಸಿಕೊಳ್ಳಲಿದ್ದಾರೆ.

1 / 7
2024 ರ ಟಿ20 ವಿಶ್ವಕಪ್ ಗೆದ್ದ ನಂತರ, ವಿರಾಟ್ ಕೊಹ್ಲಿ ಮತ್ತೊಮ್ಮೆ ಕಮ್ ಬ್ಯಾಕ್ ಮಾಡಲು ಸಿದ್ಧರಾಗಿದ್ದಾರೆ. ಟಿ20 ಮಾದರಿಯಿಂದ ನಿವೃತ್ತಿಯಾದ ನಂತರ ವಿರಾಟ್ ಕೊಹ್ಲಿ ಈಗ ಏಕದಿನ ಮತ್ತು ಟೆಸ್ಟ್ ಕ್ರಿಕೆಟ್‌ನತ್ತ ಗಮನ ಹರಿಸಲು ಬಯಸಿದ್ದಾರೆ.

2 / 7
ಅದರಂತೆ ಇದೀಗ ಭಾರತದ ಶ್ರೀಲಂಕಾ ಪ್ರವಾಸದಲ್ಲಿ ಏಕದಿನ ಸರಣಿಗೆ ತಂಡದಲ್ಲಿ ಆಯ್ಕೆಯಾಗಿದ್ದಾರೆ. ಈ ಸರಣಿಯಲ್ಲಿ ವಿರಾಟ್ ಕೊಹ್ಲಿ ಬ್ಯಾಟ್ ಅಬ್ಬರಿಸಿದರೆ ಅಂತರಾಷ್ಟ್ರೀಯ ಏಕದಿನ ಕ್ರಿಕೆಟ್​ನಲ್ಲಿ ಅಪರೂಪದ ಮೈಲಿಗಲ್ಲನ್ನು ದಾಟಲಿದ್ದಾರೆ.

3 / 7
ಈ ಸರಣಿಯಲ್ಲಿ ವಿರಾಟ್ ಕೊಹ್ಲಿ ತಮ್ಮ ಏಕದಿನ ಕ್ರಿಕೆಟ್‌ನಲ್ಲಿ 14000 ರನ್ ಪೂರ್ಣಗೊಳಿಸುವ ಅವಕಾಶವನ್ನು ಹೊಂದಿದ್ದು, ಈ ಮೈಲಿಗಲ್ಲು ತಲುಪಲು ಕೊಹ್ಲಿಗೆ 152 ರನ್ ಮಾತ್ರಬೇಕು. ಲಂಕಾ ವಿರುದ್ಧ ಕೊಹ್ಲಿ ಈ ಸಾಧನೆ ಮಾಡಿದರೆ ಏಕದಿನ ಕ್ರಿಕೆಟ್‌ನಲ್ಲಿ 14000 ರನ್ ಗಳಿಸಿದ ವಿಶ್ವದ ಮೂರನೇ ಬ್ಯಾಟ್ಸ್‌ಮನ್ ಎನಿಸಿಕೊಳ್ಳಲಿದ್ದಾರೆ.

4 / 7
ಏಕದಿನ ಕ್ರಿಕೆಟ್‌ನಲ್ಲಿ 14000ಕ್ಕೂ ಹೆಚ್ಚು ರನ್ ಗಳಿಸಿದ ದಾಖಲೆ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಾದ ಸಚಿನ್ ತೆಂಡೂಲ್ಕರ್ ಮತ್ತು ಕುಮಾರ ಸಂಗಕ್ಕಾರ ಹೆಸರಿನಲ್ಲಿದೆ. ಸಚಿನ್ 463 ಏಕದಿನ ಪಂದ್ಯಗಳಲ್ಲಿ 18426 ರನ್ ಗಳಿಸಿದ್ದರೆ, ಕುಮಾರ ಸಂಗಕ್ಕಾರ 404 ಪಂದ್ಯಗಳಲ್ಲಿ 14234 ರನ್ ಬಾರಿಸಿದ್ದಾರೆ.

5 / 7
ಈ ದಾಖಲೆಯಲ್ಲದೆ ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಅತಿವೇಗವಾಗಿ 14,000 ರನ್ ಗಳಿಸಿದ ಮೊದಲ ಬ್ಯಾಟ್ಸ್‌ಮನ್ ಆಗಲಿದ್ದಾರೆ. ಕೊಹ್ಲಿ ಅತ್ಯಂತ ವೇಗವಾಗಿ 8,000, 9,000, 10,000, 11,000, 12,000 ಮತ್ತು 13,000 ರನ್ ಗಳಿಸಿದ ದಾಖಲೆ ಕೂಡ ಹೊಂದಿದ್ದಾರೆ.

6 / 7
ಶ್ರೀಲಂಕಾ ಪ್ರವಾಸದೊಂದಿಗೆ ಟೀಂ ಇಂಡಿಯಾ 2025ರಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಗೆ ಸಿದ್ಧತೆ ಆರಂಭಿಸಲಿದೆ. ರೋಹಿತ್ ಶರ್ಮಾ ಕೂಡ ಚಾಂಪಿಯನ್ ಟ್ರೋಫಿಯತ್ತ ದೃಷ್ಟಿ ನೆಟ್ಟಿದ್ದಾರೆ. ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯ ಬಳಿಕ ಟೀಂ ಇಂಡಿಯಾ ಇನ್ನು 6 ಏಕದಿನ ಪಂದ್ಯಗಳನ್ನಷ್ಟೇ ಆಡಬೇಕಿದೆ. ಅಂತಹ ಪರಿಸ್ಥಿತಿಯಲ್ಲಿ ಈ ಪ್ರವಾಸ ರೋಹಿತ್ ಪಡೆಗೆ ಅತ್ಯವಶ್ಯಕವಾಗಿದೆ.

7 / 7
ಏಕದಿನ ಸರಣಿಗೆ ಟೀಂ ಇಂಡಿಯಾ ತಂಡ: ರೋಹಿತ್ ಶರ್ಮಾ (ನಾಯಕ), ಶುಭ್​ಮನ್ ಗಿಲ್ (ಉಪನಾಯಕ), ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ (ವಿಕೆಟ್ ಕೀಪರ್), ರಿಷಬ್ ಪಂತ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್, ಶಿವಂ ದುಬೆ, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ವಾಷಿಂಗ್ಟನ್ ಸುಂದರ್, ಅರ್ಷ್‌ದೀಪ್ ಸಿಂಗ್, ರಯಾನ್ ಪರಾಗ್, ಅಕ್ಷರ್ ಪಟೇಲ್, ಖಲೀಲ್ ಅಹ್ಮದ್, ಹರ್ಷಿತ್ ರಾಣಾ.

Published On - 10:53 pm, Fri, 19 July 24