- Kannada News Photo gallery Cricket photos IND vs WI 2st Test Here is the weather report of India vs West Indies 1st Test Match Day 2 to Day 5
IND vs WI 1st Test: ಭಾರತ- ವೆಸ್ಟ್ ಇಂಡೀಸ್ ಪ್ರಥಮ ಟೆಸ್ಟ್ನ ನಾಲ್ಕು ಮತ್ತು ಐದನೇ ದಿನ ಪಂದ್ಯ ನಡೆಯುವುದು ಅನುಮಾನ
Weather Report: ಭಾರತ- ವೆಸ್ಟ್ ಇಂಡೀಸ್ ಪ್ರಥಮ ಟೆಸ್ಟ್ ಪಂದ್ಯದಲ್ಲಿ ನಾಲ್ಕನೇ ಮತ್ತು ಐದನೇ ದಿನದಾಟ ನಡೆಯುವುದು ಅನುಮಾನ. ಯಾಕೆಂದರೆ ಹವಾಮಾನ ವರದಿಯ ಪ್ರಕಾರ ಪ್ರಥಮ ಟೆಸ್ಟ್ನ ನಾಲ್ಕನೇ ಮತ್ತು ಐದನೇ ದಿನ ಜೋರು ಮಳೆ ಆಗಲಿದೆಯಂತೆ.
Updated on: Jul 13, 2023 | 9:54 AM

ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಣ ಸರಣಿಗೆ ಚಾಲನೆ ಸಿಕ್ಕಿದೆ. ಡೊಮಿನಿಕಾದ ವಿಂಡ್ಸರ್ ಪಾರ್ಕ್ನಲ್ಲಿ ಪ್ರಥಮ ಟೆಸ್ಟ್ ಆರಂಭವಾಗಿದ್ದು, ಮೊದಲ ದಿನವೇ ಟೀಮ್ ಇಂಡಿಯಾ ಮೇಲುಗೈ ಸಾಧಿಸಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ವಿಂಡೀಸ್ ಆರ್. ಅಶ್ವಿನ್ ಹಾಗೂ ರವೀಂದ್ರ ಜಡೇಜಾ ಬೌಲಿಂಗ್ ದಾಳಿಗೆ ತತ್ತರಿಸಿ ಹೋಯಿತು. 64.3 ಓವರ್ಗಳಲ್ಲಿ ಕೇವಲ 150 ರನ್ಗೆ ಆಲೌಟ್ ಆಯಿತು.

ಕೆರಿಬಿಯನ್ ತಂಡದ ಪರ ಅಲಿಕ್ ಅಥನಾಜೆ 47 ರನ್ ಗಳಿಸಿದ್ದು ಬಿಟ್ಟರೆ ಉಳಿದ ಬ್ಯಾಟರ್ಗಳೆಲ್ಲ ಬೇಗನೆ ನಿರ್ಗಮಿಸಿದರು. ಭಾರತ ಪರ ಆರ್. ಅಶ್ವಿನ್ 5 ವಿಕೆಟ್ ಕಿತ್ತರೆ, ರವೀಂದ್ರ ಜಡೇಜಾ 3 ವಿಕೆಟ್ ಪಡೆದರು.

ನಂತರ ತನ್ನ ಮೊದಲ ಇನ್ನಿಂಗ್ಸ್ ಶುರು ಮಾಡಿದ ಭಾರತ ಮೊದಲ ದಿನದಾಟದ ಅಂತ್ಯಕ್ಕೆ 23 ಓವರ್ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 80 ರನ್ ಬಾರಿಸಿದೆ. ನಾಯಕ ರೋಹಿತ್ ಶರ್ಮಾ (30) ಹಾಗೂ ಯಶಸ್ವಿ ಜೈಸ್ವಾಲ್ 40 ರನ್ ಗಳಿಸಿ ದ್ವಿತೀಯ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ಈ ಟೆಸ್ಟ್ ಪಂದ್ಯದಲ್ಲಿ ನಾಲ್ಕನೇ ಮತ್ತು ಐದನೇ ದಿನದಾಟ ನಡೆಯುವುದು ಅನುಮಾನ. ಯಾಕೆಂದರೆ ಹವಾಮಾನ ವರದಿಯ ಪ್ರಕಾರ ಪ್ರಥಮ ಟೆಸ್ಟ್ನ ನಾಲ್ಕನೇ ಮತ್ತು ಐದನೇ ದಿನ ಜೋರು ಮಳೆ ಆಗಲಿದೆಯಂತೆ.

ಇಂದು ಮತ್ತು ನಾಳೆ ಎರಡು ದಿನಗಳ ಕಾಲ ಹವಾಮಾನವು ಆಟಕ್ಕೆ ಉತ್ತಮವಾಗಿದೆ. ಆದಾಗ್ಯೂ, ಜುಲೈ 15 ಮತ್ತು 16 ರಂದು ಭಾರೀ ಮಳೆಯ ಮುನ್ಸೂಚನೆಯಿರುವುದರಿಂದ 4 ಮತ್ತು 5 ನೇ ದಿನದಾಟ ನಡೆಯುವುದು ಅನುಮಾನ. ಗರಿಷ್ಠ ತಾಪಮಾನವು 30o C ನಿಂದ 32o C ಗೆ ಏರಿಳಿತ ಇರುತ್ತದೆ.

ಪಿಚ್ ಬಗ್ಗೆ ನೋಡುವುದಾದರೆ ಎರಡು ಮತ್ತು ಮೂರನೇ ದಿನಗಳಲ್ಲಿ ಬ್ಯಾಟಿಂಗ್ ಮಾಡಲು ಸುಲಭವಾಗುತ್ತದೆ. ಆದಾಗ್ಯೂ, ಪಂದ್ಯ ಸಾಗಿದಂತೆ ಸ್ಪಿನ್ನರ್‌ಗಳು ಕೊನೆಯ ಎರಡು ದಿನಗಳಲ್ಲಿ ಮಾರಕವಾಗುತ್ತಾರೆ.

ಸರಾಸರಿ ಸ್ಕೋರ್‌ಗಳನ್ನು ಗಮನಿಸಿದರೆ ಎರಡನೇ ಬ್ಯಾಟಿಂಗ್ ಮಾಡುವ ತಂಡವು ಹೆಚ್ಚು ರನ್ ಗಳಿಸಿದೆ. ಜೊತೆಗೆ ಅಂತಿಮ ಇನ್ನಿಂಗ್ಸ್ ನಲ್ಲಿ ಚೇಸಿಂಗ್ ಮಾಡುವ ತಂಡಗಳು ಯಶಸ್ಸು ಸಾಧಿಸಿದೆ. ಸ್ಪಿನ್ನರ್‌ಗಳು ಮತ್ತು ವೇಗಿಗಳು ಇಬ್ಬರೂ ವಿಕೆಟ್ ಪಡೆಯುತ್ತಾರೆ.



















