IND vs SL: ಗಾಲೆ ಟೆಸ್ಟ್ ಗೆಲ್ಲಬೇಕೆಂದರೆ ಭಾರತ ಇನ್ನೇಷ್ಟು ರನ್ ಕಲೆಹಾಕಬೇಕು?

Updated on: Aug 17, 2026 | 7:40 PM

India vs Sri Lanka Test: ಶ್ರೀಲಂಕಾ ವಿರುದ್ಧದ ಗಾಲೆ ಟೆಸ್ಟ್‌ನಲ್ಲಿ ಭಾರತ 178 ರನ್‌ಗಳ ಭಾರಿ ಮುನ್ನಡೆ ಸಾಧಿಸಿದೆ. ಗಾಲೆ ಮೈದಾನದಲ್ಲಿ ನಾಲ್ಕನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಕಷ್ಟಕರವಾಗಿರುವುದರಿಂದ, ಈ ಮುನ್ನಡೆ ಭಾರತದ ಗೆಲುವಿನ ಸಾಧ್ಯತೆಗಳನ್ನು ಹೆಚ್ಚಿಸಿದೆ. ಗೆಲುವನ್ನು ಖಚಿತಪಡಿಸಿಕೊಳ್ಳಲು ಭಾರತವು ಪ್ರಸ್ತುತ ಮೊತ್ತಕ್ಕೆ 200-250 ರನ್‌ಗಳನ್ನು ಸೇರಿಸುವ ಗುರಿಯನ್ನು ಹೊಂದಿದೆ. ಈ ಪಿಚ್‌ನಲ್ಲಿ ದೊಡ್ಡ ಮೊತ್ತ ಬೆನ್ನಟ್ಟಿದ ಉದಾಹರಣೆಗಳು ಕಡಿಮೆ.

1 / 5
ಶ್ರೀಲಂಕಾ ವಿರುದ್ಧದ ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ 178 ರನ್‌ಗಳ ಮುನ್ನಡೆ ಸಾಧಿಸಿದೆ. ಈ ಮುನ್ನಡೆಯೊಂದಿಗೆ, ಈ ಪಂದ್ಯವನ್ನು ಟೀಂ ಇಂಡಿಯಾ ಗೆಲ್ಲುವ ಸಾಧ್ಯತೆಗಳು ಗಮನಾರ್ಹವಾಗಿ ಹೆಚ್ಚಿವೆ. ಏಕೆಂದರೆ ಗಾಲೆ ಮೈದಾನದಲ್ಲಿ ನಾಲ್ಕನೇ ಇನ್ನಿಂಗ್ಸ್​ನಲ್ಲಿ ಬ್ಯಾಟಿಂಗ್‌ ಮಾಡುವುದು ಸುಲಭವಲ್ಲ. ಹೀಗಾಗಿ ಟೀಂ ಇಂಡಿಯಾ ಈಗಿರುವ ರನ್​ಗೆ ಇನ್ನೇಷ್ಟು ರನ್ ಸೇರಿದರೆ ಗೆಲುವು ಖಚಿತವಾಗಲಿದೆ ಎಂಬುದನ್ನು ನಾವು ನಿಮಗೆ ಹೇಳಲಿದ್ದೇವೆ.

2 / 5
ಮೊದಲ ಇನ್ನಿಂಗ್ಸ್‌ನಲ್ಲಿ 462 ರನ್ ಕಲೆಹಾಕಿದ್ದ ಟೀಂ ಇಂಡಿಯಾ, ಆತಿಥೇಯ ಶ್ರೀಲಂಕಾವನ್ನು ಕೇವಲ 284 ರನ್‌ಗಳಿಗೆ ಆಲೌಟ್ ಮಾಡಿದೆ. ಹೀಗಾಗಿ ಮೊದಲ ಇನ್ನಿಂಗ್ಸ್​ನಲ್ಲಿ ಇಂಡಿಯಾಕ್ಕೆ 178 ರನ್‌ಗಳ ಮುನ್ನಡೆ ಸಿಕ್ಕಿದೆ. ಇದೀಗ ಟೀಂ ಇಂಡಿಯಾ ಈ ಪಂದ್ಯವನ್ನು ಗೆಲ್ಲಬೇಕೆಂದರೆ, ಈಗಿರುವ ರನ್​ಗೆ 200 ರಿಂದ 250 ರನ್ ಸೇರಿಸಿದರೆ ಗೆಲುವು ಖಚಿತ ಎನ್ನಬಹುದು.

3 / 5
ಗಾಲೆಯಲ್ಲಿ ಪಾಕಿಸ್ತಾನ ತಂಡ ಅತ್ಯಧಿಕ ಮೊತ್ತವನ್ನು ಬೆನ್ನಟ್ಟಿದ ದಾಖಲೆ ಹೊಂದಿದೆ. 2022 ರಲ್ಲಿ ನಡೆದಿದ್ದ ಆ ಪಂದ್ಯದಲ್ಲಿ ಪಾಕಿಸ್ತಾನಕ್ಕೆ 342 ರನ್‌ಗಳ ಗುರಿಯನ್ನು ನೀಡಲಾಗಿತ್ತು. ಈ ಗುರಿ ಬೆನ್ನಟ್ಟಿದ ಪಾಕಿಸ್ತಾನ ಪರ ಅಬ್ದುಲ್ಲಾ ಶಫೀಕ ಶತಕ ಬಾರಿಸುವ ಮೂಲಕ ತಂಡಕ್ಕೆ ಗೆಲುವು ತಂದುಕೊಟ್ಟಿದ್ದರು. ಇನ್ನು ಈ ಮೈದಾನದಲ್ಲಿ ಶ್ರೀಲಂಕಾ 2019 ರಲ್ಲಿ ನ್ಯೂಜಿಲೆಂಡ್ ವಿರುದ್ಧ 268 ರನ್‌ಗಳ ಗುರಿ ಬೆನ್ನಟ್ಟಿ ಗೆದ್ದಿದ್ದನ್ನು ಬಿಟ್ಟರೆ, ಇದಕ್ಕಿಂತ ದೊಡ್ಡ ಮೊತ್ತವನ್ನು ಬೆನ್ನಟ್ಟಿಲ್ಲ.

4 / 5
ಇನ್ನು ಗಾಲೆಯಲ್ಲಿ ರನ್‌ಗಳ ವಿಷಯದಲ್ಲಿ ಅತಿದೊಡ್ಡ ಗೆಲುವು ಸಾಧಿಸಿದ ದಾಖಲೆಯನ್ನು ಟೀಂ ಇಂಡಿಯಾ ಹೊಂದಿದೆ. 2017 ರಲ್ಲಿ ನಡೆದಿದ್ದ ಆ ಪಂದ್ಯದಲ್ಲಿ ಟೀಂ ಇಂಡಿಯಾ, ಶ್ರೀಲಂಕಾವನ್ನು 304 ರನ್‌ಗಳಿಂದ ಸೋಲಿಸಿತು. ಆ ಪಂದ್ಯದಲ್ಲಿ ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್‌ನಲ್ಲಿ 600 ರನ್‌ಗಳನ್ನು ಗಳಿಸಿದರೆ, ಶ್ರೀಲಂಕಾ 291 ರನ್‌ ಬಾರಿಸಿತ್ತು. ನಂತರ ಭಾರತ ಎರಡನೇ ಇನ್ನಿಂಗ್ಸ್‌ನಲ್ಲಿ 240 ರನ್‌ ಕಲೆಹಾಕಿದರೆ, ಇತ್ತ ಈ  ಗುರಿ ಬೆನ್ನಟ್ಟಿದ ಶ್ರೀಲಂಕಾ 245 ರನ್‌ಗಳಿಗೆ ಆಲೌಟ್ ಆಯಿತು.

5 / 5
ಪ್ರಸ್ತುತ ನಡೆಯುತ್ತಿರುವ ಗಾಲೆ ಟೆಸ್ಟ್ ಪಂದ್ಯದ ಬಗ್ಗೆ ಹೇಳುವುದಾದರೆ.. ಶ್ರೀಲಂಕಾ ಪರ ಮೊದಲ ಇನ್ನಿಂಗ್ಸ್​ನಲ್ಲಿ ಸೋನಲ್ ದಿನುಷಾ ಶತಕ ಬಾರಿಸಿದರೆ, ನಿರೋಷನ್ ಡಿಕ್ವೆಲ್ಲಾ 80 ರನ್​ಗಳ ಇನ್ನಿಂಗ್ಸ್ ಆಡಿದರು. ಇತ್ತ ಭಾರತದ ಪರ ಮಾನವ್ ಸುತಾರ್ 4 ವಿಕೆಟ್ ಪಡೆದರೆ, ರವೀಂದ್ರ ಜಡೇಜಾ 3 ವಿಕೆಟ್ ಪಡೆದರು. ಉಳಿದಂತೆ ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ ಹಾಗೂ ಕುಲ್ದೀಪ್ ಯಾದವ್ ತಲಾ 1 ವಿಕೆಟ್ ಪಡೆದರು.

Loading...
Unable to load recommendations.
Follow Us