T20 World Cup: ತಂಡವನ್ನು ತೊರೆದು ಇದ್ದಕ್ಕಿದ್ದಂತೆ ಮನೆಗೆ ಮರಳಿದ ರಿಂಕು ಸಿಂಗ್

Updated on: Feb 24, 2026 | 8:52 PM

Rinku Singh Exits T20 World Cup 2026: 2026ರ ಟಿ20 ವಿಶ್ವಕಪ್‌ನಲ್ಲಿ ಟೀಂ ಇಂಡಿಯಾಗೆ ಆಘಾತ ಎದುರಾಗಿದೆ. ಸ್ಟಾರ್ ಆಲ್‌ರೌಂಡರ್ ರಿಂಕು ಸಿಂಗ್ ಕುಟುಂಬದ ತುರ್ತು ಪರಿಸ್ಥಿತಿ, ತಂದೆಯ ಅನಾರೋಗ್ಯದಿಂದಾಗಿ ತವರಿಗೆ ಮರಳಿದ್ದಾರೆ. ಜಿಂಬಾಬ್ವೆ ವಿರುದ್ಧದ ಪ್ರಮುಖ ಪಂದ್ಯಕ್ಕೂ ಮುನ್ನ ಅವರ ಅನುಪಸ್ಥಿತಿ ತಂಡದ ಮೇಲೆ ಪರಿಣಾಮ ಬೀರಲಿದೆ. ಭಾರತ ಸೆಮಿಫೈನಲ್ ತಲುಪಲು ದೊಡ್ಡ ಗೆಲುವು ದಾಖಲಿಸಬೇಕಿದೆ.

1 / 5
2026 ರ ಟಿ20 ವಿಶ್ವಕಪ್​ನ ಗುಂಪು ಹಂತದಲ್ಲಿ ಆಡಿದ ಎಲ್ಲಾ ಪಂದ್ಯಗಳನ್ನು ಗೆದ್ದು ಸೂಪರ್ 8 ಸುತ್ತಿಗೆ ಅಜೇಯ ತಂಡವಾಗಿ ಎಂಟ್ರಿಕೊಟ್ಟಿದ್ದ ಆತಿಥೇಯ ಟೀಂ ಇಂಡಿಯಾ, ಈ ಸುತ್ತಿನ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಹೀನಾಯ ಸೋಲುಕಂಡಿದೆ. ಹೀಗಾಗಿ ಸೆಮಿಫೈನಲ್​ಗೇರಬೇಕೆಂದರೆ ಭಾರತ ತಂಡ ಉಳಿದಿರುವ ಎರಡೂ ಪಂದ್ಯಗಳಲ್ಲಿ ದೊಡ್ಡ ಗೆಲುವು ದಾಖಲಿಸಬೇಕಿದೆ.

2026 ರ ಟಿ20 ವಿಶ್ವಕಪ್​ನ ಗುಂಪು ಹಂತದಲ್ಲಿ ಆಡಿದ ಎಲ್ಲಾ ಪಂದ್ಯಗಳನ್ನು ಗೆದ್ದು ಸೂಪರ್ 8 ಸುತ್ತಿಗೆ ಅಜೇಯ ತಂಡವಾಗಿ ಎಂಟ್ರಿಕೊಟ್ಟಿದ್ದ ಆತಿಥೇಯ ಟೀಂ ಇಂಡಿಯಾ, ಈ ಸುತ್ತಿನ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಹೀನಾಯ ಸೋಲುಕಂಡಿದೆ. ಹೀಗಾಗಿ ಸೆಮಿಫೈನಲ್​ಗೇರಬೇಕೆಂದರೆ ಭಾರತ ತಂಡ ಉಳಿದಿರುವ ಎರಡೂ ಪಂದ್ಯಗಳಲ್ಲಿ ದೊಡ್ಡ ಗೆಲುವು ದಾಖಲಿಸಬೇಕಿದೆ.

2 / 5

ಹೀಗಾಗಿ ಜಿಂಬಾಬ್ವೆ ವಿರುದ್ಧದ ತನ್ನ ಎರಡನೇ ಪಂದ್ಯವನ್ನು ಏಕಪಕ್ಷೀಯವಾಗಿ ಗೆದ್ದುಕೊಳ್ಳುವ ಗುರಿಯೊಂದಿಗೆ ತಯಾರಿ ನಡೆಸುತ್ತಿದ್ದ ಟೀಂ ಇಂಡಿಯಾಗೆ ಆಘಾತ ಎದುರಾಗಿದೆ. ತಂಡದ ಸ್ಟಾರ್ ಆಲ್‌ರೌಂಡರ್ ರಿಂಕು ಸಿಂಗ್ ಅನಿರೀಕ್ಷಿತವಾಗಿ ತಂಡವನ್ನು ತೊರೆದು ತವರಿಗೆ ಮರಳಿದ್ದಾರೆ. ಕುಟುಂಬದ ತುರ್ತು ಪರಿಸ್ಥಿತಿ ಕಾರಣ ರಿಂಕು ಸಿಂಗ್ ಮನೆಗೆ ವಾಪಸ್ಸಾಗಿದ್ದಾರೆ ಎಂದು ತಿಳಿದುಬಂದಿದೆ.

3 / 5

ಟೀ ಇಂಡಿಯಾ ತನ್ನ ಎರಡನೇ ಪಂದ್ಯವನ್ನು ಚೆನ್ನೈನಲ್ಲಿ ಆಡಬೇಕಿತ್ತು. ಹೀಗಾಗಿ ರಿಂಕು ತಂಡದೊಂದಿಗೆ ಚೆನ್ನೈನಲ್ಲಿದ್ದರು. ಆದರೆ ರಿಂಕು ಸಿಂಗ್ ಅವರ ತಂದೆಯ ಆರೋಗ್ಯ ಹದಗೆಟ್ಟಿದ್ದು, ಅವರನ್ನು ಗ್ರೇಟರ್ ನೋಯ್ಡಾದ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲದೆ ಅವರನ್ನು ವೆಂಟಿಲೇಟರ್​ನಲ್ಲಿ ಇಡಲಾಗಿದೆ ಎಂದು ವರದಿಯಾಗಿದೆ.

4 / 5

ಹೀಗಾಗಿ ತಂದೆಯ ಅನಾರೋಗ್ಯದ ಕಾರಣ ಹಠಾತ್ತನೆ ಮನೆಗೆ ಮರಳಿದ ರಿಂಕು ಸಿಂಗ್ ಮಂಗಳವಾರ ಟೀಮ್ ಇಂಡಿಯಾದ ಅಭ್ಯಾಸ ಅವಧಿಗೆ ಗೈರುಹಾಜರಾಗಿದ್ದರು. ಫೆಬ್ರವರಿ 26 ರಂದು ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಅವರು ಆಡುವ ಸಾಧ್ಯತೆಗಳು ಕಡಿಮೆ ಎಂತಲೂ ವರದಿಯಾಗಿದೆ.

5 / 5

2026 ರ ಟಿ20 ವಿಶ್ವಕಪ್‌ನಲ್ಲಿ ರಿಂಕು ಸಿಂಗ್ ಅವರ ಬ್ಯಾಟಿಂಗ್ ಪ್ರದರ್ಶನ ಅಷ್ಟೇನೂ ಪ್ರಭಾವಶಾಲಿಯಾಗಿಲ್ಲ. ಅವರು ಫೀಲ್ಡಿಂಗ್‌ನಲ್ಲಿ ಪ್ರಭಾವ ಬೀರಿದ್ದರೂ, ಐದು ಪಂದ್ಯಗಳಲ್ಲಿ ಐದು ಇನ್ನಿಂಗ್ಸ್‌ಗಳಲ್ಲಿ ಕೇವಲ 24 ರನ್‌ ಮಾತ್ರ ಗಳಿಸಿದ್ದಾರೆ, ಅವರ ಅತ್ಯುತ್ತಮ ಸ್ಕೋರ್ ಔಟಾಗದೆ 11 ರನ್‌ಗಳು. ಬೌಲಿಂಗ್​ನಲ್ಲಿ ಕೇವಲ ಒಂದು ಓವರ್ ಎಸೆದಿರುವ ರಿಂಕು 9 ರನ್‌ಗಳನ್ನು ಬಿಟ್ಟುಕೊಟ್ಟಿದ್ದಾರೆ.

Published On - 8:52 pm, Tue, 24 February 26

Loading...
Unable to load recommendations.
Follow Us