- TV9 Kannada Photo gallery Cricket photos India vs South Africa first T20 match doubtful check Kingsmead Stadium Durban Weather Report
IND vs SA 1st T20I: ಭಾರತ-ದಕ್ಷಿಣ ಆಫ್ರಿಕಾ ಮೊದಲ ಟಿ20 ಪಂದ್ಯ ನಡೆಯುವುದು ಅನುಮಾನ: ಯಾಕೆ ಗೊತ್ತೇ?
Kingsmead Stadium Durban Weather Report: ಭಾನುವಾರ ಆಯೋಜಿಸಿಗಿರುವ ಭಾರತ-ದಕ್ಷಿಣ ಆಫ್ರಿಕಾ ಮೊದಲ ಟಿ20 ಪಂದ್ಯ ನಡೆಯುವುದು ಅನುಮಾನ. ಯಾಕೆಂದರೆ, ಹವಾಮಾನವು ಈ ಪಂದ್ಯಕ್ಕೆ ಅಡ್ಡಿಪಡಿಸಲಿದೆ. ಅಕ್ಯುವೆದರ್ ಪ್ರಕಾರ, ಡರ್ಬನ್‌ನಲ್ಲಿ ಪಂದ್ಯದ ಸಮಯ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಗಳಿದೆ ಎಂದು ಹೇಳಿದೆ.
Updated on: Dec 09, 2023 | 11:22 AM

ಭಾರತ ಕ್ರಿಕೆಟ್ ತನ್ನ ದಕ್ಷಿಣ ಆಫ್ರಿಕಾ ಪ್ರವಾಸವನ್ನು ಮೂರು ಪಂದ್ಯಗಳ T20I ಸರಣಿಯೊಂದಿಗೆ ಪ್ರಾರಂಭಿಸಲು ಸಜ್ಜಾಗಿದೆ. ಭಾನುವಾರ, ಡಿಸೆಂಬರ್ 10 ರಂದು ಡರ್ಬನ್‌ನ ಕಿಂಗ್ಸ್‌ಮೀಡ್ ಸ್ಟೇಡಿಯಂನಲ್ಲಿ ಇಂಡೋ-ಆಫ್ರಿಕಾ ನಡುವೆ ಮೊದಲ ಟಿ20 ಪಂದ್ಯ ನಡೆಯಲಿದೆ.

ಆದರೆ, ಭಾನುವಾರ ಆಯೋಜಿಸಿರುವ ಭಾರತ-ದಕ್ಷಿಣ ಆಫ್ರಿಕಾ ಮೊದಲ ಟಿ20 ಪಂದ್ಯ ನಡೆಯುವುದು ಅನುಮಾನ. ಯಾಕೆಂದರೆ, ಹವಾಮಾನವು ಈ ಪಂದ್ಯಕ್ಕೆ ಅಡ್ಡಿಪಡಿಸಲಿದೆ. ಅಕ್ಯುವೆದರ್ ಪ್ರಕಾರ, ಡರ್ಬನ್‌ನಲ್ಲಿ ಪಂದ್ಯದ ಸಮಯ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಗಳಿದೆ ಎಂದು ಹೇಳಿದೆ.

ಮೊದಲ ಟಿ20 ಪಂದ್ಯದ ಸಮಯ ಶೇಕಡಾ 75 ರಷ್ಟು ಮಳೆಯಾಗುವ ಸಾಧ್ಯತೆಯಿದೆ. ತಾಪಮಾನವು ಸುಮಾರು 20 ಡಿಗ್ರಿ ಸೆಲ್ಸಿಯಸ್ ಆಗಿರುತ್ತದೆ ಮತ್ತು 100% ಮೋಡ ಕವಿದಿರುತ್ತದೆ. ಆರ್ದ್ರತೆಯ ಮಟ್ಟವು ಹೆಚ್ಚು ಎಂದು ನಿರೀಕ್ಷಿಸಲಾಗಿದೆ, ಇದು 86% ತಲುಪುತ್ತದೆ ಎನ್ನಲಾಗಿದೆ.

ಸ್ಥಳೀಯ ಕಾಲಮಾನ ಬೆಳಿಗ್ಗೆ 11 ಗಂಟೆಗೆ (2:30 PM IST) ಮತ್ತು ರಾತ್ರಿ 8 ರಿಂದ 10 ಗಂಟೆ ವರೆಗೆ (11:30 PM ನಿಂದ 1:30 AM ವರೆಗೆ) ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆ ಇದೆ. ಹೀಗಾಗಿ ಪಂದ್ಯಕ್ಕೆ ಮಳೆ ಅಡ್ಡಿ ಪಡಿಸುವ ಸಾಧ್ಯತೆ ದಟ್ಟವಾಗಿದೆ.

ಟೀಮ್ ಇಂಡಿಯಾ ಡರ್ಬನ್ ಮೈದಾನದಲ್ಲಿ ಉತ್ತಮ ದಾಖಲೆಯನ್ನು ಹೊಂದಿದೆ. ಇದುವರೆಗೆ ಆಡಿದ 5 T20I ಪಂದ್ಯಗಳಲ್ಲಿ ಅಜೇಯವಾಗಿ ಉಳಿದಿದೆ. ಆತಿಥೇಯ ದಕ್ಷಿಣ ಆಫ್ರಿಕಾ 11 ಪಂದ್ಯಗಳಲ್ಲಿ 5 ಗೆಲುವುಗಳನ್ನು ಹೊಂದಿದೆ. ಇಲ್ಲಿನ ಪಿಚ್ ಬೌನ್ಸ್ ಮತ್ತು ಸ್ವಿಂಗ್ನಿಂದ ಕೂಡಿದ್ದು, ಬ್ಯಾಟರ್ಗಳಿಗೆ ಸಹಕಾರಿ ಆಗಲಿದೆ.

ಭಾರತ ಕ್ರಿಕೆಟ್ ತಂಡವು ಒಂದು ತಿಂಗಳ ಸುದೀರ್ಘ ಪ್ರವಾಸದಲ್ಲಿ 3 T20I ಮತ್ತು ODI ಹಾಗೂ 2 ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ. ಸೂರ್ಯಕುಮಾರ್ ಯಾದವ್ ಟಿ20 ತಂಡವನ್ನು ಮುನ್ನಡೆಸಿದರೆ, ಕೆಎಲ್ ರಾಹುಲ್ ಮತ್ತು ರೋಹಿತ್ ಶರ್ಮಾ ಕ್ರಮವಾಗಿ ಏಕದಿನ ಮತ್ತು ಟೆಸ್ಟ್ ತಂಡವನ್ನು ಮುನ್ನಡೆಸಲಿದ್ದಾರೆ.

Tv9 ಕನ್ನಡ ಡಿಜಿಟಲ್ನಲ್ಲಿ 2021ರ ಜುಲೈನಿಂದ ಕ್ರೀಡಾ ಹಾಗೂ ತಂತ್ರಜ್ಞಾನ ಪತ್ರಕರ್ತನಾಗಿ ಕೆಲಸ ಮಾಡುತ್ತಿದ್ದೇನೆ. ಡಿಜಿಟಲ್ ವಿಭಾಗದಲ್ಲಿ 6 ವರ್ಷ ಅನುಭವ. ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನವ. ಕ್ರೀಡಾ ಸುದ್ದಿ, ಕ್ರೀಡಾ ಲೇಖನ, ಟೆಕ್ನಾಲಜಿ, ಸಿನಿಮಾ ಸುದ್ದಿ ಬರೆಯುವುದು ನನ್ನ ಆಸಕ್ತದಾಯಕ ವಿಷಯಗಳು.
Read More



