IND vs SL: 16 ವರ್ಷಗಳ ಬಳಿಕ ಈತನಿಲ್ಲದೆ ಟೆಸ್ಟ್ ಆಡಲಿದೆ ಟೀಂ ಇಂಡಿಯಾ

Updated on: Aug 10, 2026 | 5:25 PM

India vs Sri Lanka Test Series: ಭಾರತ ಮತ್ತು ಶ್ರೀಲಂಕಾ ನಡುವಿನ ಟೆಸ್ಟ್ ಸರಣಿ ಆಗಸ್ಟ್ 15ರಿಂದ ಆರಂಭವಾಗಲಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಈ ಸರಣಿ ಗೆಲುವು ಭಾರತಕ್ಕೆ ಅತ್ಯವಶ್ಯಕ. 16 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ವಿರಾಟ್ ಕೊಹ್ಲಿ ಇಲ್ಲದೆ ಟೀಂ ಇಂಡಿಯಾ ಶ್ರೀಲಂಕಾ ಪ್ರವಾಸ ಕೈಗೊಂಡಿದೆ. ಕೊಹ್ಲಿ ನಾಯಕತ್ವದಲ್ಲಿ ಭಾರತ ಲಂಕಾದಲ್ಲಿ ಸತತ ಸರಣಿ ಗೆದ್ದಿತ್ತು. ಈಗ, ಕೊಹ್ಲಿ ಅನುಪಸ್ಥಿತಿಯಲ್ಲಿ ಭಾರತ ತನ್ನ ಪ್ರಾಬಲ್ಯವನ್ನು ಉಳಿಸಿಕೊಳ್ಳಲಿದೆಯೇ ಎಂಬುದು ಕುತೂಹಲ ಮೂಡಿಸಿದೆ.

1 / 6
ಭಾರತ ಹಾಗೂ ಶ್ರೀಲಂಕಾ ನಡುವಿನ ಎರಡು ಪಂದ್ಯಗಳ ಟೆಸ್ಟ್ ಸರಣಿ ಆಗಸ್ಟ್ 15 ರಿಂದ ಆರಂಭವಾಗಲಿದೆ. ಈ ಸರಣಿ ಆರಂಭಕ್ಕೂ ಮುನ್ನ ನಡೆದ ಅಭ್ಯಾಸ ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಗೆಲುವು ಸಾಧಿಸಿದೆ. ಇದೀಗ ಮೊದಲ ಟೆಸ್ಟ್ ಪಂದ್ಯವನ್ನು ಗೆಲ್ಲುವ ಮೂಲಕ ಸರಣಿಯಲ್ಲಿ ಉತ್ತಮ ಆರಂಭ ಪಡೆದುಕೊಳ್ಳುವ ಇರಾದೆಯಲ್ಲಿದೆ(PC-PTI).

2 / 6
ವಿಶ್ವ ಟೆಸ್ಟ್ ಚಾಂಪಿಯನ್​​ಶಿಪ್ ಫೈನಲ್ ದೃಷ್ಟಿಯಿಂದ ಈ ಸರಣಿ ಗೆಲುವು ಭಾರತಕ್ಕೆ ಅತ್ಯವಶ್ಯಕವಾಗಿದೆ. ಅಲ್ಲದೆ ಬರೋಬ್ಬರಿ ಒಂಬತ್ತು ವರ್ಷಗಳ ನಂತರ ಟೆಸ್ಟ್ ಸರಣಿಯನ್ನಾಡಲು ಶ್ರೀಲಂಕಾಕ್ಕೆ ಬಂದಿರುವ ಟೀಂ ಇಂಡಿಯಾದಲ್ಲಿ ಕಳೆದ ಪ್ರವಾಸಕ್ಕೆ ಹೋಲಿಸಿದರೆ, ಸಾಕಷ್ಟು ಬದಲಾವಣೆಗಳಾಗಿವೆ. ಅದರಲ್ಲಿ ಪ್ರಮುಖ ಬದಲಾವಣೆ ಕಿಂಗ್ ಕೊಹ್ಲಿ ಇಲ್ಲದೆ ಇರುವುದು(PC-PTI).

3 / 6
ವಾಸ್ತವವಾಗಿ ಕಳೆದ 16 ವರ್ಷಗಳಲ್ಲಿ ವಿರಾಟ್ ಕೊಹ್ಲಿ ಇಲ್ಲದೆ ಟೀಂ ಇಂಡಿಯಾ ಶ್ರೀಲಂಕಾ ಪ್ರವಾಸ ಮಾಡಿದೆ. ಅಂದರೆ 16 ವರ್ಷಗಳಲ್ಲಿ ಟೀಂ ಇಂಡಿಯಾ ತನ್ನ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಇಲ್ಲದೆ ಶ್ರೀಲಂಕಾದಲ್ಲಿ ಟೆಸ್ಟ್ ಸರಣಿಯನ್ನು ಆಡುತ್ತಿರುವುದು ಇದೇ ಮೊದಲು. ವಿರಾಟ್ ಕೊಹ್ಲಿ ಟೆಸ್ಟ್‌ಗೆ ಪಾದಾರ್ಪಣೆ ಮಾಡದ 2010 ರಲ್ಲಿ ಭಾರತ ತಂಡವು ವಿರಾಟ್ ಕೊಹ್ಲಿ ಇಲ್ಲದೆ ಶ್ರೀಲಂಕಾದಲ್ಲಿ ಕೊನೆಯ ಬಾರಿಗೆ ಟೆಸ್ಟ್ ಸರಣಿಯನ್ನು ಆಡಿತ್ತು(PC-PTI).

4 / 6
ವಿರಾಟ್ ಕೊಹ್ಲಿ ಅವರ ಟೆಸ್ಟ್ ಚೊಚ್ಚಲ ಪಂದ್ಯದ ನಂತರ, ಭಾರತ ತಂಡ ಶ್ರೀಲಂಕಾಕ್ಕೆ ಪ್ರಯಾಣಿಸಿದಾಗಲೆಲ್ಲಾ, ವಿರಾಟ್ ಕೊಹ್ಲಿ ತಂಡದ ಭಾಗವಾಗಿದ್ದರು, ಮಾತ್ರವಲ್ಲದೆ ತಂಡದ ನಾಯಕತ್ವವನ್ನೂ ವಹಿಸಿದ್ದರು. ಕಿಂಗ್ ಕೊಹ್ಲಿಯ ಅವಧಿಯಲ್ಲಿ ಭಾರತದ ಪ್ರದರ್ಶನ ಅಮೋಘವಾಗಿತ್ತು(PC-PTI).

5 / 6
ವಿರಾಟ್ ಕೊಹ್ಲಿ ಅವರ ನಾಯಕತ್ವದಲ್ಲಿ, ಭಾರತ ತಂಡವು ಶ್ರೀಲಂಕಾದಲ್ಲಿ ಸತತ ಎರಡು ಟೆಸ್ಟ್ ಸರಣಿಗಳನ್ನು ಗೆಲ್ಲುವ ಮೂಲಕ ಇತಿಹಾಸವನ್ನು ಸೃಷ್ಟಿಸಿತ್ತು. 2015 ರಲ್ಲಿ, ಭಾರತವು ಟೆಸ್ಟ್ ಸರಣಿಯನ್ನು 2-1 ಅಂತರದಿಂದ ಗೆದ್ದರೆ, 2017 ರಲ್ಲಿ ಶ್ರೀಲಂಕಾವನ್ನು 3-0 ಅಂತರದಿಂದ ವೈಟ್‌ವಾಶ್ ಮಾಡಿತ್ತು(PC-PTI).

6 / 6
ಶ್ರೀಲಂಕಾ ತಂಡದ ದಾಖಲೆಯನ್ನು ನೋಡಿದರೆ, ಶ್ರೀಲಂಕಾ 2008 ರಲ್ಲಿ ತಮ್ಮ ತವರು ನೆಲದಲ್ಲಿ ಭಾರತವನ್ನು ಕೊನೆಯ ಬಾರಿಗೆ ಟೆಸ್ಟ್ ಸರಣಿಯಲ್ಲಿ ಸೋಲಿಸಿತ್ತು. ಈಗ, 16 ವರ್ಷಗಳ ನಂತರ, ಭಾರತ ತಂಡ ಕೊಹ್ಲಿ ಇಲ್ಲದೆ ತನ್ನ ಪ್ರಾಬಲ್ಯವನ್ನು ಉಳಿಸಿಕೊಳ್ಳುತ್ತಾ ಎಂಬುದನ್ನು ಕಾದುನೋಡಬೇಕಿದೆ(PC-PTI).

Loading...
Unable to load recommendations.
Follow Us