ಒಂದೇ ದಿನ ನಡೆದ 3 ಪಂದ್ಯಗಳನ್ನು ಭಾರಿ ಅಂತರದಲ್ಲಿ ಗೆದ್ದ ಟೀಂ ಇಂಡಿಯಾ

Updated on: Jun 18, 2026 | 5:28 PM

Historic June 17: ಜೂನ್ 17 ಭಾರತೀಯ ಕ್ರಿಕೆಟ್‌ಗೆ ಅವಿಸ್ಮರಣೀಯ ದಿನವಾಗಿತ್ತು. ಒಂದೇ ದಿನ ಮೂರು ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಭಾರತ ತಂಡಗಳು ಅದ್ಭುತ ಗೆಲುವು ಸಾಧಿಸಿದವು. ಪುರುಷರ ಏಕದಿನ, ಭಾರತ ಎ ಮತ್ತು ಮಹಿಳಾ ಟಿ20 ತಂಡಗಳು ಭಾರಿ ಅಂತರದಿಂದ ಜಯಭೇರಿ ಬಾರಿಸಿ, ಅಭಿಮಾನಿಗಳಿಗೆ ರಸದೌತಣ ನೀಡಿದವು. ಈ ಪಂದ್ಯಗಳಲ್ಲಿ ಭಾರತದ ಪ್ರಾಬಲ್ಯ ಎದ್ದು ಕಾಣುತ್ತಿತ್ತು, ಇದು ಮುಂದಿನ ಸರಣಿಗಳಿಗೆ ಶುಭ ಸೂಚನೆ.

1 / 5
ಜೂನ್ 17 ರಂದು ಕ್ರಿಕೆಟ್ ಪ್ರಿಯರಿಗೆ ರಸದೌತಣವೇ ಸಿಕ್ಕಿತು. ಈ ಒಂದೇ ದಿನದಂದು ಬರೋಬ್ಬರಿ 7 ಅಂತರರಾಷ್ಟ್ರೀಯ ಪಂದ್ಯಗಳು ನಡೆದವು. ಆ 7 ಪಂದ್ಯಗಳಲ್ಲಿ ಟೀಂ ಇಂಡಿಯಾದ್ದೇ ಮೂರು ಪಂದ್ಯಗಳಿದ್ದವು. ಅಚ್ಚರಿಯ ಸಂಗತಿಯೆಂದರೆ ಈ ಮೂರು ಪಂದ್ಯಗಳನ್ನು ಭಾರತ ತಂಡ ಏಕಪಕ್ಷೀಯವಾಗಿ ಹಾಗೂ ಭಾರಿ ಅಂತರದಿಂದ ಗೆದ್ದುಕೊಂಡುವೆ. ಆ ಮೂರು ಪಂದ್ಯಗಳು ಯಾವುವು ಎಂಬುದರ ವಿವರ ಇಲ್ಲಿದೆ (PC- BCCI X).

2 / 5
ಮೊದಲಿಗೆ ಭಾರತೀಯ ಕಾಲಮಾನ ಬೆಳಿಗ್ಗೆ 10 ಗಂಟೆಗೆ ಭಾರತ ಎ ಹಾಗೂ ಅಫ್ಘಾನಿಸ್ತಾನ ಎ ತಂಡಗಳ ನಡುವೆ ತ್ರಿಕೋನ ಸರಣಿಯ ಪಂದ್ಯ ನಡೆಯಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಭಾರತ ಎ ತಂಡ 319 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಅಫ್ಘಾನಿಸ್ತಾನ ಎ ತಂಡ 218 ರನ್​ಗಳಿಗೆ ಆಲೌಟ್ ಆಯಿತು. ಈ ಮೂಲಕ ಭಾರತ ಎ ತಂಡ 101 ರನ್​ಗಳ ಬೃಹತ್ ಜಯ ದಾಖಲಿಸಿ ನೇರವಾಗಿ ಫೈನಲ್​ಗೇರಿತು (PC- BCCI X).

3 / 5
ಮಧ್ಯಾಹ್ನ 1:30ಕ್ಕೆ ಆರಂಭವಾದ ದಿನದ ಎರಡನೇ ಪಂದ್ಯದಲ್ಲಿ ಭಾರತ ಹಾಗೂ ಅಫ್ಘಾನಿಸ್ತಾನ ತಂಡಗಳು ಮೂರು ಪಂದ್ಯಗಳ ಏಕದಿನ ಸರಣಿಯ ಎರಡನೇ ಪಂದ್ಯವನ್ನು ಆಡಿದವು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಭಾರತ ತಂಡ ಬರೋಬ್ಬರಿ 402 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಅಫ್ಘಾನಿಸ್ತಾನ ತಂಡ 232 ರನ್​ಗಳಿಗೆ ಆಲೌಟ್ ಆಯಿತು. ಹೀಗಾಗಿ ಟೀಂ ಇಂಡಿಯಾ 170 ರನ್​ಗಳ ಜಯ ದಾಖಲಿಸಿ, ಸರಣಿಯನ್ನು ತನ್ನದಾಗಿಸಿಕೊಂಡಿತು (PC- BCCI X).

4 / 5
ಇನ್ನು ಸಂಜೆ 7 ಗಂಟೆಗೆ ಭಾರತ ಹಾಗೂ ನೆದರ್ಲ್ಯಾಂಡ್ಸ್ ಮಹಿಳಾ ತಂಡಗಳ ನಡುವೆ ಟಿ20 ವಿಶ್ವಕಪ್ ಪಂದ್ಯ ನಡೆಯಿತು. ಈ ಪಂದ್ಯದಲ್ಲೂ ಮೊದಲು ಬ್ಯಾಟಿಂಗ್‌ ಮಾಡಿದ ಭಾರತ ವನಿತಾ ಪಡೆ 209 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ನೆದರ್ಲ್ಯಾಂಡ್ಸ್ ತಂಡ ಕೇವಲ 114 ರನ್​ಗಳಿಗೆ ಆಲೌಟ್ ಆಗುವ ಮೂಲಕ 95 ರನ್​ಗಳ ಹೀನಾಯ ಸೋಲುಕಂಡಿತು. ಇತ್ತ ಭಾರತ ತಂಡ ಟಿ20 ವಿಶ್ವಕಪ್ ಇತಿಹಾಸದಲ್ಲಿ ಅತಿದೊಡ್ಡ ಗೆಲುವು ದಾಖಲಿಸಿದ ದಾಖಲೆ ಬರೆಯಿತು (PC- BCCI X).

5 / 5
ಇದೀಗ ಈ ಮೂರು ತಂಡಗಳು ಮತ್ತೆ ಶನಿವಾರ ಮತ್ತು ಭಾನುವಾರದಂದು ಕಣಕ್ಕಿಳಿಯಲಿವೆ. ಶನಿವಾರದಂದು ಭಾರತ ಹಾಗೂ ಅಫ್ಘಾನಿಸ್ತಾನದ ನಡುವೆ ಏಕದಿನ ಸರಣಿಯ ಕೊನೆಯ ಪಂದ್ಯ ನಡೆದರೆ, ಭಾನುವಾರದಂದು ಭಾರತ ಎ ತಂಡ ತ್ರಿಕೋನ ಸರಣಿಯ ಫೈನಲ್ ಪಂದ್ಯವನ್ನು ಆಡಲಿದೆ. ಇತ್ತ ಮಹಿಳಾ ಟಿ20 ವಿಶ್ವಕಪ್​ನಲ್ಲಿ ಭಾರತ ವನಿತಾ ಪಡೆ, ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದೆ (PC- BCCI X).

Follow Us