IPL 2022: ಬಲವಂತವಾಗಿ ನಾಯಕತ್ವದಿಂದ ವಜಾ! ಕೋಪದಿಂದ ತಂಡ ತೊರೆದ ಜಡೇಜಾ; ಸಿಎಸ್ಕೆಗೆ ಆಡುವುದು ಅನುಮಾನ
Ravindra Jadeja: ವರದಿಯ ಪ್ರಕಾರ, ರವೀಂದ್ರ ಜಡೇಜಾ ಐಪಿಎಲ್ 2022 ಅನ್ನು ಮಾತ್ರ ತೊರೆದಿಲ್ಲ. ಬದಲಿಗೆ, ಅವರು ಮುಂದಿನ ಸೀಸನ್ನಲ್ಲಿ ಈ ತಂಡಕ್ಕಾಗಿ ಆಡುತ್ತಾರೆಯೇ ಅಥವಾ ಇಲ್ಲವೇ ಎಂಬುದು ಕೂಡ ಸ್ಪಷ್ಟವಾಗಿಲ್ಲ.
ರವೀಂದ್ರ ಜಡೇಜಾ 15ನೇ ಸೀಸನ್ನಿಂದ ಹೊರಬಿದ್ದಿದ್ದಾರೆ. ಪಕ್ಕೆಲುಬಿನ ಗಾಯದಿಂದಾಗಿ ಅವರು ಉಳಿದ ಪಂದ್ಯಗಳಿಗೆ ಗೈರಾಗಲಿದ್ದು, ಇತ್ತೀಚಿನ ವರದಿಗಳ ಪ್ರಕಾರ ಜಡೇಜಾ ಇಂಜುರಿಯಲ್ಲಿ ಯಾವುದೇ ಸುಧಾರಣೆ ಕಂಡುಬಂದಿಲ್ಲ ಎಂದು ಹೇಳಲಾಗುತ್ತಿದೆ. ಆದರೆ ಈಗ ಸಿಟ್ಟಿಗೆದ್ದ ಜಡೇಜಾ ಐಪಿಎಲ್ 2022 ರಿಂದ ಹೊರಬರಲು ನಿರ್ಧರಿಸಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ.
1 / 5
ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ವರದಿ ಪ್ರಕಾರ, ರವೀಂದ್ರ ಜಡೇಜಾ ನಾಯಕತ್ವವನ್ನು ಕಿತ್ತುಕೊಂಡಿದ್ದರಿಂದ ಕೋಪಗೊಂಡಿದ್ದಾರೆ ಎಂದು ತಿಳಿದುಬಂದಿದೆ. ವಾಸ್ತವವಾಗಿ ಜಡೇಜಾ ನಾಯಕತ್ವ ಮುಂದುವರೆಸಲು ಬಯಸಿದ್ದರು ಆದರೆ ಫ್ರಾಂಚೈಸಿಯ ಆಡಳಿತ ಮಂಡಳಿ ಅವರನ್ನು ನಾಯಕತ್ವದಿಂದ ತೆಗೆದುಹಾಕಿತು. ರವೀಂದ್ರ ಜಡೇಜಾ ಅವರು 8 ಪಂದ್ಯಗಳಿಗೆ ತಂಡದ ನಾಯಕರಾಗಿದ್ದರು. ಆದರೆ ತಂಡದ ಕಳಪೆ ಪ್ರದರ್ಶನದ ನಂತರ ಧೋನಿಗೆ ಮತ್ತೊಮ್ಮೆ ನಾಯಕತ್ವವಹಿಸಲಾಯಿತು.
2 / 5
Ravindra Jadeja and Rashid Khan in the post match presentation After GT vs CSK IPL Match
3 / 5
4 / 5
ರವೀಂದ್ರ ಜಡೇಜಾ ಮತ್ತು ಸಿಎಸ್ಕೆ ನಡುವಿನ ಜಗಳದ ಚರ್ಚೆ ಸಾಮಾಜಿಕ ಜಾಲತಾಣದಲ್ಲೂ ಸಖತ್ ಸುದ್ದಿಯಾಗಿದೆ. ವಾಸ್ತವವಾಗಿ ಚೆನ್ನೈ ಸೂಪರ್ ಕಿಂಗ್ಸ್ ಜಡೇಜಾ ಅವರನ್ನು Instagram ನಲ್ಲಿ ಅನ್ ಫಾಲೋ ಮಾಡಿದೆ. ಹಾಗಾದರೆ ಜಡೇಜಾ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಸಂಬಂಧ ನಿಜವಾಗಿಯೂ ಹದಗೆಟ್ಟಿದೆಯೇ? ಎಂಬುದು ಈಗ ಎಲ್ಲರನ್ನೂ ಕಾಡುತ್ತಿರುವ ಪ್ರಶ್ನೆಯಾಗಿದೆ.