- Kannada News Photo gallery Cricket photos IPL 2023 After Sanju Samson five captain fined for maintaining a slow over rate
IPL 2023: ನಿಷೇಧದ ಭೀತಿಯಲ್ಲಿ ಐದು ತಂಡಗಳ ನಾಯಕರು! ಫಾಫ್ ಡು ಪ್ಲೆಸಿಸ್ಗೂ ಸಂಕಷ್ಟ
IPL 2023: ವಾಸ್ತವವಾಗಿ ಈ ಐಪಿಎಲ್ನಲ್ಲಿ ನಿಧಾನಗತಿಯ ಓವರ್ ಬೌಲ್ ಮಾಡಿದಕ್ಕಾಗಿ ಈವರೆಗೂ ಐದು ತಂಡದ ನಾಯಕರುಗಳಿಗೆ ತಲಾ 12 ಲಕ್ಷರೂ. ದಂಡ ವಿಧಿಸಲಾಗಿದೆ.
Updated on:Apr 21, 2023 | 4:47 PM

16ನೇ ಆವೃತ್ತಿಯ ಐಪಿಎಲ್ ಭರದಿಂದ ಸಾಗುತ್ತಿದೆ. ಪಂದ್ಯದಿಂದ ಪಂದ್ಯಕ್ಕೆ ರೋಚಕತೆ ಹೆಚ್ಚುತ್ತಿದೆ. ಆದರೆ ಈ ರೋಚಕತೆಯ ನಡುವೆ ಕೆಲವು ತಂಡದ ನಾಯಕರುಗಳಿಗೆ ಆಡಳಿತ ಮಂಡಳಿ ದಂಡದ ಬರೆ ಎಳೆಯುತ್ತಿದೆ. ಇದು ಮುಂದುವರೆದರೆ, ಈ ತಂಡದ ನಾಯಕರಿಗೆ ಒಂದು ಪಂದ್ಯದಿಂದ ನಿಷೇಧ ಶಿಕ್ಷೆ ಕೂಡ ವಿಧಿಸಬಹುದಾಗಿದೆ.

ವಾಸ್ತವವಾಗಿ ಈ ಐಪಿಎಲ್ನಲ್ಲಿ ನಿಧಾನಗತಿಯ ಓವರ್ ಬೌಲ್ ಮಾಡಿದಕ್ಕಾಗಿ ಈವರೆಗೂ ಐದು ತಂಡದ ನಾಯಕರುಗಳಿಗೆ ತಲಾ 12 ಲಕ್ಷರೂ. ದಂಡ ವಿಧಿಸಲಾಗಿದೆ.

ಅವರಲ್ಲಿ ಗುಜರಾತ್ ಟೈಟಾನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಫಾಫ್ ಡು ಪ್ಲೆಸಿಸ್, ರಾಜಸ್ಥಾನ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್, ಮುಂಬೈ ಇಂಡಿಯನ್ಸ್ ಪರ ರೋಹಿತ್ ಶರ್ಮಾ ಬದಲಿಗೆ ಸೂರ್ಯಕುಮಾರ್ ಯಾದವ್ ಹಾಗೂ ಲಖನೌ ನಾಯಕ ಕೆಎಲ್ ರಾಹುಲ್ ಕೂಡ ಸೇರಿದ್ದಾರೆ.

ಐಪಿಎಲ್ ನಿಯಮದ ಪ್ರಕಾರ ಯಾವುದೇ ತಂಡ ನಿಗದಿತ ಸಮಯದೊಳಗೆ ಓವರ್‌ಗಳನ್ನು ಮುಗಿಸದಿದ್ದರೆ ಮೊದಲನೆಯದಾಗಿ ಆ ತಂಡದ ನಾಯಕನಿಗೆ 12 ಲಕ್ಷ ರೂ. ದಂಡ ವಿಧಿಸಲಾಗುತ್ತದೆ. ಇದೇ ತಪ್ಪನ್ನು ಎರಡನೇ ಬಾರಿ ಮಾಡಿದಾಗ, ನಾಯಕನಿಗೆ ವಿಧಿಸುವ ದಂಡವನ್ನು 24 ಲಕ್ಷಕ್ಕೆ ಹೆಚ್ಚಿಸಲಾಗುವುದು. ಇದರೊಂದಿಗೆ ಇತರೆ ಆಟಗಾರರು ಪಂದ್ಯದ ಶುಲ್ಕದ ಶೇಕಡಾ 25 ರಷ್ಟು ದಂಡವನ್ನಾಗಿ ಪಾವತಿಸಬೇಕಾಗುತ್ತದೆ.

ಮೂರನೇ ಬಾರಿಯೂ ಇದೇ ರೀತಿ ತಪ್ಪನ್ನು ಎಸಗಿದರೆ, ಆಗ ತಂಡದ ನಾಯಕನಿಗೆ 30 ಲಕ್ಷ ರೂಪಾಯಿ ದಂಡ ಮತ್ತು ಒಂದು ಪಂದ್ಯದಿಂದ ನಿಷೇಧ ಹೆರಲಾಗುತ್ತದೆ. ಹಾಗೆಯೇ ತಂಡದ ಇತರ ಆಟಗಾರರಿಗೆ ಸಂಭಾವನೆಯ ಶೇಕಡಾ 50 ರಷ್ಟನ್ನು ದಂಡವಾಗಿ ವಿಧಿಸಲಾಗುತ್ತದೆ. ಹೀಗಾಗಿ ಮುಂಬರುವ ಐಪಿಎಲ್ ಪಂದ್ಯದಲ್ಲಿ ಈ ತಂಡಗಳು ಎಚ್ಚರಿಕೆ ವಹಿಸಬೇಕಿದೆ.
Published On - 4:47 pm, Fri, 21 April 23




