IPL 2023: ಸಿಕ್ಸ್ಗಳ ಸುರಿಮಳೆಗೈದ CSK: ಆದ್ರೂ RCB ದಾಖಲೆ ಮುರಿಯಲಾಗಲಿಲ್ಲ..!
IPL 2023 Kannada: ರಹಾನೆಗೆ ಸಾಥ್ ನೀಡಿದ ಶಿವಂ ದುಬೆ ಕೂಡ 5 ಸಿಕ್ಸ್ಗಳನ್ನು ಬಾರಿಸಿದ್ದರು. ಕೊನೆಯ ಹಂತದಲ್ಲಿ 2 ಸಿಕ್ಸ್ ಬಾರಿಸುವ ಮೂಲಕ ಜಡೇಜಾ ಕೂಡ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದರು.
Updated on:Apr 24, 2023 | 7:39 PM

IPL 2023: ಐಪಿಎಲ್ನ 33ನೇ ಪಂದ್ಯದಲ್ಲಿ ಕೆಕೆಆರ್ ವಿರುದ್ಧ ಸಿಎಸ್ಕೆ ಬ್ಯಾಟರ್ಗಳು ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಈ ಸಿಡಿಲಬ್ಬರದ ಬ್ಯಾಟಿಂಗ್ ಪರಿಣಾಮ ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಸಿಕ್ಸ್ಗಳ ಸುರಿಮಳೆಯಾಗಿತ್ತು.

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸಿಎಸ್ಕೆ ಪರ ಆರಂಭಿಕರಾದ ರುತುರಾಜ್ ಗಾಯಕ್ವಾಡ್ ಹಾಗೂ ಡೆವೊನ್ ಕಾನ್ವೆ ತಲಾ 3 ಸಿಕ್ಸ್ ಸಿಡಿಸಿದ್ದರು.

ಆ ಬಳಿಕ ಬಂದ ಅಜಿಂಕ್ಯ ರಹಾನೆ ಸ್ಪೋಟಕ ಬ್ಯಾಟಿಂಗ್ನೊಂದಿಗೆ 5 ಭರ್ಜರಿ ಸಿಕ್ಸ್ ಸಿಡಿಸಿ ಅಬ್ಬರಿಸಿದ್ದರು.

ಇನ್ನು ರಹಾನೆಗೆ ಸಾಥ್ ನೀಡಿದ ಶಿವಂ ದುಬೆ ಕೂಡ 5 ಸಿಕ್ಸ್ಗಳನ್ನು ಬಾರಿಸಿದ್ದರು. ಕೊನೆಯ ಹಂತದಲ್ಲಿ 2 ಸಿಕ್ಸ್ ಬಾರಿಸುವ ಮೂಲಕ ಜಡೇಜಾ ಕೂಡ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಇದರೊಂದಿಗೆ ಸಿಎಸ್ಕೆ ತಂಡದ ಮೊತ್ತ 4 ವಿಕೆಟ್ ನಷ್ಟಕ್ಕೆ 235 ಕ್ಕೆ ಬಂದು ನಿಂತಿತು.

ವಿಶೇಷ ಎಂದರೆ ಸಿಎಸ್ಕೆ ತಂಡದ ಈ ಭರ್ಜರಿ ಇನಿಂಗ್ಸ್ನಲ್ಲಿ ಒಟ್ಟು 18 ಸಿಕ್ಸ್ಗಳು ಮೂಡಿಬಂದಿದ್ದವು. ಇದು ಐಪಿಎಲ್ನಲ್ಲಿ ಇನಿಂಗ್ಸ್ವೊಂದರಲ್ಲಿ ಸಿಎಸ್ಕೆ ತಂಡ ಬಾರಿಸಿದ ಅತ್ಯಧಿಕ ಸಿಕ್ಸ್ ದಾಖಲೆಯಾಗಿದೆ.

ಇದಾಗ್ಯೂ ಐಪಿಎಲ್ ಇನಿಂಗ್ಸ್ವೊಂದರಲ್ಲಿ ಅತ್ಯಧಿಕ ಸಿಕ್ಸ್ ಬಾರಿಸಿದ ಆರ್ಸಿಬಿ ದಾಖಲೆಯನ್ನು ಮುರಿಯಲು ಸಾಧ್ಯವಾಗಿಲ್ಲ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 2013 ರಲ್ಲಿ ಪುಣೆ ವಾರಿಯರ್ಸ್ ಇಂಡಿಯಾ ವಿರುದ್ಧ ಬರೋಬ್ಬರಿ 21 ಸಿಕ್ಸ್ಗಳನ್ನು ಬಾರಿಸಿತ್ತು.

ಇದು ಐಪಿಎಲ್ ಇತಿಹಾಸದಲ್ಲೇ ಇನಿಂಗ್ಸ್ವೊಂದರಲ್ಲಿ ಮೂಡಿಬಂದ ಅತ್ಯಧಿಕ ಸಿಕ್ಸ್ಗಳ ದಾಖಲೆಯಾಗಿದೆ. ಅಂದರೆ ಐಪಿಎಲ್ನ ಇನಿಂಗ್ಸ್ವೊಂದರಲ್ಲಿ ಅತೀ ಹೆಚ್ಚು ಸಿಕ್ಸ್ ಬಾರಿಸಿದ ದಾಖಲೆ ಇನ್ನೂ ಕೂಡ ಆರ್ಸಿಬಿ (21 ಸಿಕ್ಸ್) ತಂಡದ ಹೆಸರಿನಲ್ಲಿದೆ.
Published On - 3:57 pm, Mon, 24 April 23



















