Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2023: ಅಂಡರ್-16 ಆಟಗಾರರೊಂದಿಗೆ ಸಂವಾದ ನಡೆಸಿದ ದಿನೇಶ್ ಕಾರ್ತಿಕ್

IPL 2023 Kannada: ಈ ಬಾರಿಯ ಐಪಿಎಲ್​ನಲ್ಲಿ ದಿನೇಶ್ ಕಾರ್ತಿಕ್ ಕಳಪೆ ಪ್ರದರ್ಶನ ನೀಡುತ್ತಿದ್ದಾರೆ. ಆಡಿರುವ 8 ಪಂದ್ಯಗಳಿಂದ DK ಕೇವಲ 83 ರನ್​ಗಳಿಸಿದ್ದಾರೆ.

TV9 Web
| Updated By: ಝಾಹಿರ್ ಯೂಸುಫ್

Updated on: Apr 29, 2023 | 6:22 PM

IPL 2023: ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ನಡೆದ ಅಂಡರ್-16 ಆಟಗಾರರ ವಿಶೇಷ ಶಿಬಿರದಲ್ಲಿ RCB ತಂಡದ ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ದಿನೇಶ್ ಕಾರ್ತಿಕ್ ಕಾಣಿಸಿಕೊಂಡಿದ್ದಾರೆ.

1 / 7
16 ವರ್ಷದೊಳಗಿನ ಈ ಶಿಬಿರದಲ್ಲಿ ಭಾಗವಹಿಸಿದ ದಿನೇಶ್ ಕಾರ್ತಿಕ್, ಯುವ ಪ್ರತಿಭೆಯೊಂದಿಗೆ ಸಂವಾದ ನಡೆಸಿದರು. ಅಲ್ಲದೆ ತಮ್ಮ ಕನಸುಗಳನ್ನು ಬೆನ್ನತ್ತಲು ಅಮೂಲ್ಯವಾದ ಸಲಹೆಗಳನ್ನು ಹಾಗೂ ಜೀವನ ಪಾಠಗಳನ್ನು ಹೇಳಿಕೊಟ್ಟಿದ್ದಾರೆ.

2 / 7
 ಈ ವಿಶೇಷ ಸಂವಾದದ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವೈರಲ್ ಬೆನ್ನಲ್ಲೇ ಡಿಕೆ ಟ್ರೋಲ್​ಗೂ ಒಳಗಾಗಿರುವುದು ವಿಶೇಷ.

3 / 7
ಏಕೆಂದರೆ ಈ ಬಾರಿಯ ಐಪಿಎಲ್​ನಲ್ಲಿ ದಿನೇಶ್ ಕಾರ್ತಿಕ್ ಕಳಪೆ ಪ್ರದರ್ಶನ ನೀಡುತ್ತಿದ್ದಾರೆ. ಆಡಿರುವ 8 ಪಂದ್ಯಗಳಿಂದ DK ಕೇವಲ 83 ರನ್​ಗಳಿಸಿದ್ದಾರೆ. ಅಂದರೆ ತಂಡದ ಫಿನಿಶರ್ ಎನಿಸಿಕೊಂಡಿರುವ ಕಾರ್ತಿಕ್ ಅವರ ಬ್ಯಾಟ್​ನಿಂದ ಕೇವಲ 11.86 ಸರಾಸರಿಯಲ್ಲಿ ರನ್ ಮೂಡಿಬಂದಿದೆ.

4 / 7
ಇತ್ತ ದಿನೇಶ್ ಕಾರ್ತಿಕ್ ಅವರಂತಹ ಅನುಭವಿ ಆಟಗಾರ ಮಧ್ಯಮ ಕ್ರಮಾಂಕದಲ್ಲಿ ವಿಫಲರಾಗುತ್ತಿರುವುದು ಆರ್​ಸಿಬಿ ತಂಡದ ಸೋಲಿಗೆ ಪ್ರಮುಖ ಕಾರಣವಾಗುತ್ತಿದೆ. ಇಂತಹ ಕಳಪೆ ಫಾರ್ಮ್​ನಲ್ಲಿರುವ ಡಿಕೆ ಯುವ ಕ್ರಿಕೆಟಿಗರಿಗೆ ಸಲಹೆ ನೀಡಲು ಹೋಗಿರುವುದನ್ನು ನೆಟ್ಟಿಗರು ಕಿಚಾಯಿಸುತ್ತಿದ್ದಾರೆ.

5 / 7
ಕೆಲವರು ಯುವ ಆಟಗಾರರಿಗೆ ನೀಡುವ ಸಲಹೆಯನ್ನು ನಿಮ್ಮದೇ ಕೆರಿಯರ್​ನಲ್ಲಿ ಉಪಯೋಗಿಸಿ ಎಂದು ಕಿಚಾಯಿಸಿದರೆ, ಮತ್ತೆ ಕೆಲವರು ಕಳಪೆ ಫಾರ್ಮ್​ನಲ್ಲಿದ್ದರೂ ಸತತ ಹೇಗೆ ಅವಕಾಶ ಪಡೆಯಬಹುದೆಂದು ಬಿಟ್ಟಿ ಸಲಹೆ ನೀಡಿರಬಹುದೇ? ವ್ಯಂಗ್ಯವಾಡಿದ್ದಾರೆ. ಮತ್ತೊಬ್ಬರು, ಸೀಮಿತ ಓವರ್​ ಕ್ರಿಕೆಟ್​ನಲ್ಲಿ 391 ಪಂದ್ಯಗಳನ್ನಾಡಿ ಒಂದೇ ಒಂದು ಶತಕ ಬಾರಿಸಲು ಸಾಧ್ಯವಾಗದ ಆಟಗಾರನಿಂದ ಯುವ ಪ್ರತಿಭೆಗಳಿಗೆ ಕ್ರಿಕೆಟ್ ಪಾಠ...ಎಂದು ಕಾಲೆಳೆದಿದ್ದಾರೆ.

6 / 7
ಒಟ್ಟಿನಲ್ಲಿ ಅಂಡರ್-16 ಆಟಗಾರರೊಂದಿಗೆ ಸಂವಾದ ನಡೆಸಿರುವ ದಿನೇಶ್ ಕಾರ್ತಿಕ್ ಇದೀಗ ಟ್ರೋಲಿಗರಿಗೆ ಆಹಾರವಾಗಿದ್ದಾರೆ. ಇದಾಗ್ಯೂ ಅವರ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ತಮ್ಮ ಹಳೆಯ ಖದರ್ ತೋರಿಸುವ ಮೂಲಕ ಟ್ರೋಲರ್ಸ್​ಗೆ ಬ್ಯಾಟ್ ಮೂಲಕ ಉತ್ತರ ನೀಡಲಿದ್ದಾರಾ ಕಾದು ನೋಡಬೇಕಿದೆ.

7 / 7
Follow us
ಮಾಜಿ ಪ್ರಧಾನಿಯ ಮಗನಾಗಿ ಸರ್ಕಾರಿ ಜಮೀನು ಒತ್ತುವರಿ ಮಾಡ್ತೀನಾ? ಕುಮಾರಸ್ವಾಮಿ

ಪಂದ್ಯವಾಡು ಫೈನ್ ಕಟ್ಟು: ಬ್ಯಾಕ್ ಟು ಬ್ಯಾಕ್ ದಂಡ ಕಟ್ಟಿದ ದಿಗ್ವೇಶ್ ರಾಠಿ

ಪೊಲೀಸರನ್ನು ಸ್ವತಂತ್ರವಾಗಿ ಕೆಲಸ ಮಾಡಲು ಬಿಡಿ: ಪ್ರತಾಪ್ ಸಿಂಹ

‘ಗ್ಲೋಬಲ್ ಕನ್ನಡಿ’ಗನಿಗೆ ಯೂಟ್ಯೂಬ್​ನಿಂದ ಬರ್ತಿರೋದೆಷ್ಟು?

ಹಾರ್ದಿಕ್ ಪಾಂಡ್ಯ ನಿರ್ಧಾರಕ್ಕೆ ಅಸಮಾಧಾನ ಹೊರಹಾಕಿದ ಸೂರ್ಯಕುಮಾರ್ ಯಾದವ್

ಪೊಲೀಸರಿಗೆ ದೂರು ನೀಡುವುದು ಸಹ ಗೊತ್ತಿರದ ಮಹಿಳೆಯ ಕುಟುಂಬ

ನಿವೇದಿತಾ ಕಥೆ ಕೇಳಿ ಗಟ್ಟಿ ಮನಸ್ಸಿನ ವ್ಯಕ್ತಿಗಳ ಕಣ್ಣಲ್ಲೂ ಬಂತು ನೀರು

ಶಿವನಿಗೆ ಪೂಜಾ ಸಮಯದಲ್ಲಿ ಇಡಬಾರದ ವಸ್ತು ಯಾವುದು ಗೊತ್ತಾ?

Daily Horoscope: ಸೂರ್ಯ ಮೀನ ರಾಶಿಗೆ, ಚಂದ್ರ ಮಿಥುನ ರಾಶಿಯಲ್ಲಿ ಸಂಚಾರ

ಕಾರ್ ಮಂಚದ ಮೇಲೆ ಮಲಗಿ ಯುವಕನ ಸವಾರಿ; ಇದೆಂಥಾ ಶೋಕಿ ಎಂದ ನೆಟ್ಟಿಗರು