IPL 2023: KKR ತಂಡಕ್ಕೆ ವೆಸ್ಟ್ ಇಂಡೀಸ್​ನ ಸ್ಪೋಟಕ ದಾಂಡಿಗ ಎಂಟ್ರಿ

| Updated By: ಝಾಹಿರ್ ಯೂಸುಫ್

Updated on: May 04, 2023 | 3:21 PM

IPL 2023 Kannada: KKR ತಂಡ: ರಹಮಾನುಲ್ಲಾ ಗುರ್ಬಾಝ್ (ವಿಕೆಟ್ ಕೀಪರ್) , ನಿತೀಶ್ ರಾಣಾ (ನಾಯಕ) , ಎನ್ ಜಗದೀಸನ್ , ವೆಂಕಟೇಶ್ ಅಯ್ಯರ್ , ರಿಂಕು ಸಿಂಗ್ , ಆಂಡ್ರೆ ರಸೆಲ್ , ಡೇವಿಡ್ ವೀಸ್ಸಾ, ಸುನಿಲ್ ನರೈನ್ , ಶಾರ್ದೂಲ್ ಠಾಕೂರ್ , ಹರ್ಷಿತ್ ರಾಣಾ , ವರುಣ್ ಚಕ್ರವರ್ತಿ , ಜೇಸನ್ ರಾಯ್.

1 / 6
IPL 2023: ಸತತ ಸೋಲುಗಳಿಂದ ಕಂಗೆಟ್ಟಿರುವ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು ಇದೀಗ ವೆಸ್ಟ್ ಇಂಡೀಸ್​ನ ಸ್ಪೋಟಕ ದಾಂಡಿಗನ ಜಾನ್ಸನ್ ಚಾರ್ಲ್ಸ್​ ಅನ್ನು ತಂಡಕ್ಕೆ ಸೇರಿಸಿಕೊಂಡಿದೆ. ಕೆಕೆಆರ್ ತಂಡದಲ್ಲಿದ್ದ ಬಾಂಗ್ಲಾದೇಶ್ ಆಟಗಾರ ಲಿಟ್ಟನ್ ದಾಸ್ ಅವರ ಬದಲಿ ಆಟಗಾರನಾಗಿ ಚಾರ್ಲ್ಸ್​ರನ್ನು ಆಯ್ಕೆ ಮಾಡಲಾಗಿದೆ.

2 / 6
ಈ ಬಾರಿಯ ಐಪಿಎಲ್​ನಲ್ಲಿ ಲಿಟ್ಟನ್ ದಾಸ್ ಅವರನ್ನು ಕೆಕೆಆರ್ 50 ಲಕ್ಷ ರೂ.ಗೆ ಖರೀದಿಸಿತ್ತು. ಆದರೆ ಕೆಕೆಆರ್ ಪರ ಒಂದು ಪಂದ್ಯವಾಡಿದ್ದ ದಾಸ್ ವೈಯುಕ್ತಿಕ ಕಾರಣಗಳಿಂದಾಗಿ ಅರ್ಧದಲ್ಲೇ ಐಪಿಎಲ್ ತೊರೆದಿದ್ದಾರೆ.

3 / 6
ಇದೀಗ ಅವರ ಬದಲಿ ಆಟಗಾರನಾಗಿ ವಿಂಡೀಸ್ ಆಟಗಾರ ಜಾನ್ಸನ್ ಚಾರ್ಲ್ಸ್​ ಅವರಿಗೆ ಕೆಕೆಆರ್ ಅವಕಾಶ ನೀಡಿದೆ. ವೆಸ್ಟ್ ಇಂಡೀಸ್ ತಂಡದ ವಿಕೆಟ್ ಕೀಪರ್ ಬ್ಯಾಟರ್ ಆಗಿರುವ ಚಾರ್ಲ್ಸ್ ಇದುವರೆಗೆ 41 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ್ದಾರೆ. ಈ ವೇಳೆ ಒಟ್ಟು 971 ರನ್​ಗಳಿಸಿದ್ದಾರೆ. ಅಲ್ಲದೆ 2012 ಮತ್ತು 2016 ಐಸಿಸಿ ವಿಶ್ವ ಟಿ20 ವಿಶ್ವಕಪ್​ ಗೆದ್ದ ವೆಸ್ಟ್ ಇಂಡೀಸ್​ ತಂಡದ ಭಾಗವಾಗಿದ್ದರು.

4 / 6
ಇದಲ್ಲದೆ, ವಿವಿಧ ಲೀಗ್​ಗಳು ಸೇರಿ ಒಟ್ಟು 224 ಟಿ20 ಪಂದ್ಯಗಳನ್ನಾಡಿರುವ ಚಾನ್ಸನ್ ಚಾರ್ಲ್ಸ್​ ಒಟ್ಟು  5600 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಇದೀಗ ಅನುಭವಿ ದಾಂಡಿಗನಿಗೆ ಮಣೆಹಾಕಿರುವ ಕೆಕೆಆರ್ ಮುಂದಿನ ಪಂದ್ಯಗಳಲ್ಲಿ ಚಾರ್ಲ್ಸ್​ಗೆ ಅವಕಾಶ ನೀಡಲಿದೆಯಾ ಕಾದು ನೋಡಬೇಕಿದೆ.

5 / 6
ಸದ್ಯ ಕೆಕೆಆರ್ ತಂಡವು 9 ಪಂದ್ಯಗಳನ್ನು ಆಡಿದ್ದು, ಇದರಲ್ಲಿ ಕೇವಲ ಮೂರು ಪಂದ್ಯಗಳನ್ನು ಮಾತ್ರ ಗೆದ್ದುಕೊಂಡಿದೆ. ಅಲ್ಲದೆ ಗುರುವಾರ SRH ವಿರುದ್ಧ ತನ್ನ 10ನೇ ಪಂದ್ಯವನ್ನು ಆಡಲಿದೆ. ಈ ಪಂದ್ಯದಲ್ಲಿ ಗೆಲ್ಲುವ ಮೂಲಕ ಗೆಲುವಿನ ಲಯಕ್ಕೆ ಮರಳುವ ಇರಾದೆಯಲ್ಲಿದೆ ಕೆಕೆಆರ್.

6 / 6
KKR ತಂಡ: ರಹಮಾನುಲ್ಲಾ ಗುರ್ಬಾಝ್ (ವಿಕೆಟ್ ಕೀಪರ್) , ನಿತೀಶ್ ರಾಣಾ (ನಾಯಕ) , ಎನ್ ಜಗದೀಸನ್ , ವೆಂಕಟೇಶ್ ಅಯ್ಯರ್ , ರಿಂಕು ಸಿಂಗ್ , ಆಂಡ್ರೆ ರಸೆಲ್ , ಡೇವಿಡ್ ವೀಸ್ಸಾ, ಸುನಿಲ್ ನರೈನ್ , ಶಾರ್ದೂಲ್ ಠಾಕೂರ್ , ಹರ್ಷಿತ್ ರಾಣಾ , ವರುಣ್ ಚಕ್ರವರ್ತಿ , ಜೇಸನ್ ರಾಯ್, ಸುಯಶ್ ಸಿಂಗ್ ಶರ್ಮಾ , ಟಿಮ್ ಸೌಥಿ , ಉಮೇಶ್ ಯಾದವ್ , ಲಾಕಿ ಫರ್ಗುಸನ್ , ಕುಲ್ವಂತ್ ಖೆಜ್ರೋಲಿಯಾ , ವೈಭವ್ ಅರೋರಾ , ​​ಆರ್ಯ ದೇಸಾಯಿ, ಜಾನ್ಸನ್ ಚಾರ್ಲ್ಸ್​.