IPL 2023: ಭರ್ಜರಿ ಬೌಲಿಂಗ್ ಮೂಲಕ ದಾಖಲೆ ಬರೆದ ಮೊಹಮ್ಮದ್ ಸಿರಾಜ್

| Updated By: ಝಾಹಿರ್ ಯೂಸುಫ್

Updated on: Apr 02, 2023 | 11:03 PM

IPL 2023 Kannada: ಮೊಹಮ್ಮದ್ ಸಿರಾಜ್ ಮೊದಲ ಓವರ್​ನಲ್ಲಿ ನೀಡಿದ್ದು ಕೇವಲ 2 ರನ್ ಮಾತ್ರ. ಇನ್ನು 2ನೇ ಓವರ್​ನಲ್ಲಿ ರೀಸ್ ಟೋಪ್ಲಿ 9 ರನ್ ಬಿಟ್ಟು ಕೊಟ್ಟಿದ್ದರು.

1 / 6
IPL 2023 RCB vs MI: ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಬೆಂಕಿ ಬೌಲಿಂಗ್ ಪ್ರದರ್ಶನ ನೀಡುವ ಮೂಲಕ ಆರ್​ಸಿಬಿ ವೇಗಿ ಮೊಹಮ್ಮದ್ ಸಿರಾಜ್ ಭರ್ಜರಿ ದಾಖಲೆ ನಿರ್ಮಿಸಿದ್ದಾರೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಆರ್​ಸಿಬಿ ತಂಡವು ಬೌಲಿಂಗ್ ಆಯ್ದುಕೊಂಡಿತ್ತು.

2 / 6
ಅದರಂತೆ ದಾಳಿಗಿಳಿದ ಮೊಹಮ್ಮದ್ ಸಿರಾಜ್ ಮೊದಲ ಓವರ್​ನಲ್ಲಿ ನೀಡಿದ್ದು ಕೇವಲ 2 ರನ್ ಮಾತ್ರ. ಇನ್ನು 2ನೇ ಓವರ್​ನಲ್ಲಿ ರೀಸ್ ಟೋಪ್ಲಿ 9 ರನ್ ಬಿಟ್ಟು ಕೊಟ್ಟಿದ್ದರು. 3ನೇ ಓವರ್​ನಲ್ಲಿ ಮತ್ತೆ ದಾಳಿಗಿಳಿದ ಸಿರಾಜ್ ಕೇವಲ 1 ರನ್ ಮಾತ್ರ ನೀಡಿದರು. ಅಷ್ಟೇ ಅಲ್ಲದೆ ಇಶಾನ್ ಕಿಶನ್ ಅವರ ವಿಕೆಟ್ ಪಡೆದರು.

3 / 6
ಈ ವಿಕೆಟ್​ನೊಂದಿಗೆ ಮೊಹಮ್ಮದ್ ಸಿರಾಜ್ ಆರ್​ಸಿಬಿ ಪರ 50 ವಿಕೆಟ್​ಗಳನ್ನು ಪೂರೈಸಿದರು. ಅಷ್ಟೇ ಅಲ್ಲದೆ ಈ ಸಾಧನೆ ಮಾಡಿದ ಆರ್​ಸಿಬಿಯ 6ನೇ ಬೌಲರ್​ ಎನಿಸಿಕೊಂಡರು.

4 / 6
ಇದಕ್ಕೂ ಮುನ್ನ ಯುಜ್ವೇಂದ್ರ ಚಹಾಲ್, ಹರ್ಷಲ್ ಪಟೇಲ್, ವಿನಯ್ ಕುಮಾರ್, ಅನಿಲ್ ಕುಂಬ್ಳೆ ಹಾಗೂ ಎಸ್ ಅರವಿಂದ್ ಈ ಸಾಧನೆ ಮಾಡಿದ್ದರು. ಇದೀಗ ಆರ್​ಸಿಬಿ ಪರ 50 ವಿಕೆಟ್​ಗಳನ್ನು 6ನೇ ಬೌಲರ್​ ಆಗಿ ಮೊಹಮ್ಮದ್ ಸಿರಾಜ್ ಹೊರಹೊಮ್ಮಿದ್ದಾರೆ.

5 / 6
ಇನ್ನು ಆರ್​ಸಿಬಿ ಪರ ಅತ್ಯಧಿಕ ವಿಕೆಟ್ ಪಡೆದ ಬೌಲರ್​ಗಳ ಪಟ್ಟಿಯಲ್ಲಿ ಯುಜ್ವೇಂದ್ರ ಚಹಾಲ್ ಅಗ್ರಸ್ಥಾನದಲ್ಲಿದ್ದಾರೆ. 2014 ರಿಂದ 2021 ರವರೆಗೆ ಆರ್​ಸಿಬಿ ಪರ 113 ಪಂದ್ಯಗಳನ್ನಾಡಿದ್ದ ಚಹಾಲ್ ಒಟ್ಟು 139 ವಿಕೆಟ್ ಕಬಳಿಸಿ ದಾಖಲೆ ನಿರ್ಮಿಸಿದ್ದಾರೆ.

6 / 6
ಇನ್ನು ಈ ಪಂದ್ಯದಲ್ಲಿ ಮೊದಲ 3 ಓವರ್​ಗಳಲ್ಲಿ ಸಿರಾಜ್ ಕೇವಲ 5 ರನ್ ನೀಡಿ 1 ವಿಕೆಟ್ ಕಬಳಿಸಿದ್ದರು. ಆದರೆ ತಮ್ಮ ಕೊನೆಯ ಓವರ್​ನಲ್ಲಿ 16 ರನ್​ ಬಿಟ್ಟು ಕೊಟ್ಟರು. ಇದಾಗ್ಯೂ 21 ರನ್​ ನೀಡಿ 1 ವಿಕೆಟ್ ಕಬಳಿಸುವ ಮೂಲಕ 4 ಓವರ್​ಗಳನ್ನು ಅಂತ್ಯಗೊಳಿಸಿದರು.