ಪ್ರತಿ ಬಾರಿಯ ಐಪಿಎಲ್ ಆರಂಭವಾದಗಲೂ ಪ್ರಶಸ್ತಿಯ ಪ್ರಬಲ ಸ್ಪರ್ಧಿಯಾಗಿ ಅಖಾಡಕ್ಕೆ ಎಂಟ್ರಿಕೊಡುವ ಆರ್ಸಿಬಿ ತಂಡ ಪ್ರತಿ ಬಾರಿಯೂ ನಿರ್ಣಾಯಕ ಪಂದ್ಯಗಳಲ್ಲಿ ಸೋತು ಟೂರ್ನಿಯಿಂದ ಖಾಲಿ ಕೈಯಲ್ಲಿ ವಾಪಸ್ಸಾಗುತ್ತಿದೆ. ಇದು ಕಳೆದ 15 ಸೀಸನ್ಗಳಲ್ಲೂ ನಡೆದಿದೆ.
ಪ್ರತಿ ಬಾರಿ ತಂಡ ಬರಿಗೈಯಲ್ಲಿ ಟೂರ್ನಿಯಿಂದ ಹೊರಬಿದ್ದಗಲೆಲ್ಲ, ತಂಡದ ಬಗ್ಗೆ ಕೇಳಿಬರುವ ಆರೋಪವೆನೆಂದರೆ, ತಂಡದಲ್ಲಿ ಬಲಿಷ್ಠ ಬೌಲಿಂಗ್ ಲೈನ್ಅಪ್ ಇಲ್ಲ ಎಂಬುದು. ಬ್ಯಾಟಿಂಗ್ ವಿಭಾಗದಲ್ಲಿ ಸ್ಟಾರ್ ಕ್ರಿಕೆಟಿಗರ ದಂಡನ್ನೇ ಹೊಂದಿರುವ ಆರ್ಸಿಬಿಯ ಬೌಲಿಂಗ್ ವಿಭಾಗ ಮಾತ್ರ ಇಲ್ಲಿಯವರೆಗೆ ಕೊಂಚ ದುರ್ಬಲವಾಗಿಯೇ ಬಿಂಬಿತವಾಗಿದೆ.
ಆದರೆ ಈ ಬಾರಿಯ ಐಪಿಎಲ್ ಆರಂಭಕ್ಕೂ ಮುನ್ನ ನಡೆದ ಮಿನಿ ಹರಾಜಿನಲ್ಲಿ ವೇಗಿಗಳ ಮೇಲೆ ಗುರಿ ಇಟ್ಟ ಆರ್ಸಿಬಿ ಉತ್ತಮ ಬೌಲಿಂಗ್ ಅಟ್ಯಾಕ್ ಸಿದ್ದಪಡಿಸಿಕೊಂಡಿದೆ. ಇದಕ್ಕೆ ಪೂರಕವಾಗಿ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗರು ಕೂಡ ಆರ್ಸಿಬಿಯ ಬೌಲಿಂಗ್ ವಿಭಾಗದ ಬಗ್ಗೆ ಮೆಚ್ಚುಗೆಯ ಮಾತನಾಡಿದ್ದಾರೆ.
ಐಪಿಎಲ್ ಆರಂಭಕ್ಕೂ ಮುನ್ನ ಈ ಬಗ್ಗೆ ಮಾತನಾಡಿರುವ ಟೀಂ ಇಂಡಿಯಾದ ಮಾಜಿ ಆಟಗಾರ ಸಂಜಯ್ ಮಂಜ್ರೇಕರ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಬಾರಿ ಅತ್ಯುತ್ತಮ ಬೌಲಿಂಗ್ ದಾಳಿಯನ್ನು ಹೊಂದಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಮುಂದುವರೆದು ಮಾತನಾಡಿರುವ ಸಂಜಯ್, ಆರ್ಸಿಬಿ ವೇಗದ ಬೌಲಿಂಗ್‌ನಲ್ಲಿ ಡೆಪ್ತ್ ಇದೆ. (ಜೋಶ್) ಹೇಜಲ್‌ವುಡ್ ಫಿಟ್ ಆಗದಿದ್ದರೂ, ಅವರ ಬದಲಿಗೆ ರೀಸ್ ಟಾಪ್ಲಿ ಇದ್ದಾರೆ. ಸ್ಪಿನ್‌ನಲ್ಲಿ ವನಿಂದು ಹಸರಂಗ ಇದ್ದಾರೆ. ಮೊಹಮ್ಮದ್ ಸಿರಾಜ್ ಮತ್ತು ಹರ್ಷಲ್ ಪಟೇಲ್ ಈಗಾಗಲೇ ತಂಡದಲ್ಲಿದ್ದಾರೆ. ಹೀಗಾಗಿ ಆರ್ಸಿಬಿಯ ಬೌಲಿಂಗ್ ಪರಿಪೂರ್ಣವಾಗಿದೆ. ಇದರೊಂದಿಗೆ ಮ್ಯಾಕ್ಸ್‌ವೆಲ್ ಕೂಡ ಬೌಲಿಂಗ್ ಮಾಡಬಲ್ಲರು. ಹೀಗಾಗಿ ಈ ಐಪಿಎಲ್‌ನಲ್ಲಿ, ನನ್ನ ಪ್ರಕಾರ, ಅತ್ಯುತ್ತಮ ಬೌಲಿಂಗ್ ದಾಳಿ ಹೊಂದಿರುವ ತಂಡವೆಂದರೆ ಅದು ಆರ್ಸಿಬಿ, ಇದು ಆ ತಂಡದ ಎಕ್ಸ್-ಫ್ಯಾಕ್ಟರ್ ಎಂದು ಮಾಂಜ್ರೇಕರ್ ಸ್ಟಾರ್ ಸ್ಪೋರ್ಟ್ಸ್‌ನೊಂದಿಗೆ ಮಾತನಾಡುತ್ತಾ ಹೇಳಿದ್ದಾರೆ.
ವಾಸ್ತವವಾಗಿ ಆರ್ಸಿಬಿ ಬೌಲಿಂಗ್ ವಿಭಾಗ ಹೇಗಿದೆ ಎಂಬುದನ್ನು ನೋಡುವುದಾದರೆ, ವೇಗದ ಬೌಲಿಂಗ್ ವಿಭಾಗದಲ್ಲಿ ಹರ್ಷಲ್ ಪಟೇಲ್, ಡೇವಿಡ್ ವಿಲ್ಲಿ, ಮೊಹಮ್ಮದ್ ಸಿರಾಜ್, ಜೋಶ್ ಹ್ಯಾಜಲ್‌ವುಡ್, ಸಿದ್ದಾರ್ಥ್ ಕೌಲ್ ಮತ್ತು ಟೋಪ್ಲಿಯಂತಹ ಸ್ಟಾರ್ ಆಟಗಾರರಾಗಿದ್ದಾರೆ.
Published On - 4:37 pm, Mon, 27 March 23