Mayank Yadav: ಟೀಮ್ ಇಂಡಿಯಾ ಹಿಟ್​ ಲಿಸ್ಟ್​ನಲ್ಲಿ ಮಯಾಂಕ್ ಯಾದವ್

IPL 2024: ಇಂಡಿಯನ್ ಪ್ರೀಮಿಯರ್ ಲೀಗ್​ನ (ಐಪಿಎಲ್ 2024) ಮೊದಲೆರಡು ಪಂದ್ಯಗಳಲ್ಲೇ ಕರಾರುವಾಕ್ ದಾಳಿ ಸಂಘಟಿಸಿರುವ ಮಯಾಂಕ್ ಯಾದವ್​ಗೆ ಅದೃಷ್ಟ ಖುಲಾಯಿಸುವ ಸಾಧ್ಯತೆಯಿದೆ. ಮೊದಲ ಎರಡು ಪಂದ್ಯಗಳಲ್ಲಿ ನೀಡಿದ ಅದ್ಭುತ ಪ್ರದರ್ಶನವನ್ನು IPL 2024 ರ ಅಂತ್ಯದವರೆಗೆ ಮುಂದುವರೆಸಿದರೆ ಯುವ ವೇಗಿಗೆ ಭಾರತ ತಂಡದಲ್ಲಿ ಚಾನ್ಸ್​ ಸಿಗಲಿದೆ.

| Updated By: ಝಾಹಿರ್ ಯೂಸುಫ್

Updated on: Apr 03, 2024 | 11:52 AM

2 ಪಂದ್ಯ... 8 ಓವರ್​... 41 ರನ್​... 6 ವಿಕೆಟ್​... 145 ರಿಂದ 155 ರ ನಡುವಣ ಸರಾಸರಿ ವೇಗ... ಹೌದು, ಇಂಡಿಯನ್ ಪ್ರೀಮಿಯರ್ ಲೀಗ್ ಮೂಲಕ ಯುವ ವೇಗದ ಬೌಲರ್ ಮಯಾಂಕ್ ಯಾದವ್ (Mayank Yadav) ಸಂಚಲನ ಸೃಷ್ಟಿಸುತ್ತಿದ್ದಾರೆ. ಆಡಿದ ಕೇವಲ 2 ಪಂದ್ಯಗಳಲ್ಲೇ 6 ವಿಕೆಟ್ ಉರುಳಿಸಿ ಇದೀಗ ಎಲ್ಲರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.

1 / 8
ವೇಗದೊಂದಿಗೆ ಅತೀ ವೇಗದಲ್ಲಿ ಚೆಂಡೆಸೆಯುವ ಸಾಮರ್ಥ್ಯ ಹೊಂದಿರುವ ಮಯಾಂಕ್ ಪ್ರಸ್ತುತ ಲೀಗ್​ನಲ್ಲಿ 145 ರಿಂದ 155 kmph ಸರಾಸರಿಯಲ್ಲಿ ಬೌಲಿಂಗ್ ಮಾಡುತ್ತಿದ್ದಾರೆ. ಅದು ಕೂಡ ಅತ್ಯುತ್ತಮ ಲೈನ್ ಅ್ಯಂಡ್ ಲೆಂಗ್ತ್​ನೊಂದಿಗೆ ಎಂಬುದು ವಿಶೇಷ.

2 / 8
ಪಂಜಾಬ್ ಕಿಂಗ್ಸ್ ವಿರುದ್ಧದ ಚೊಚ್ಚಲ ಪಂದ್ಯದಲ್ಲಿ  4 ಓವರ್ ಬೌಲಿಂಗ್ ಮಾಡಿದ್ದ ಮಯಾಂಕ್ ಯಾದವ್ ಕೇವಲ 27 ರನ್ ನೀಡಿ 3 ವಿಕೆಟ್ ಕಬಳಿಸಿದ್ದರು. ಇನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 4 ಓವರ್​ಗಳಲ್ಲಿ ನೀಡಿದ್ದು ಕೇವಲ 14 ರನ್​ ಮಾತ್ರ. ಇನ್ನು 3 ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಗಿದ್ದರು.

3 / 8
ಬೆಂಗಳೂರಿನ ಬ್ಯಾಟಿಂಗ್​ನ ಪಿಚ್​ನಲ್ಲೂ ಕರಾರುವಾಕ್ ದಾಳಿ ಸಂಘಟಿಸುವಲ್ಲಿ ಯಶಸ್ವಿಯಾಗಿರುವ 21 ವರ್ಷದ ಯುವ ವೇಗಿ ಮೇಲೆ ಇದೀಗ ಬಿಸಿಸಿಐ ಆಯ್ಕೆ ಸಮಿತಿ ಕಣ್ಣಿಟ್ಟಿದೆ. ಅದು ಕೂಡ ಮುಂಬರುವ ಟಿ20 ವಿಶ್ವಕಪ್​ಗಾಗಿ ಎಂಬುದು ವಿಶೇಷ.

4 / 8
ಏಕೆಂದರೆ ಮುಂಬರುವ ಟಿ20 ವಿಶ್ವಕಪ್​ಗೆ ಭಾರತ ತಂಡದ ಪ್ರಮುಖ ವೇಗಿ ಮೊಹಮ್ಮದ್ ಶಮಿ ಅಲಭ್ಯರಾಗಿದ್ದಾರೆ. ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಅವರು ಆಯ್ಕೆಗೆ ಲಭ್ಯರಿಲ್ಲ. ಇತ್ತ ಜಸ್​ಪ್ರೀತ್ ಬುಮ್ರಾಗೆ ಸಾಥ್ ನೀಡುವಂತಹ ಉತ್ತಮ ಬೌಲರ್​ನ ಅವಶ್ಯಕತೆಯಿದೆ. ಮತ್ತೊಂದೆಡೆ ಈ ಬಾರಿಯ ಐಪಿಎಲ್​ನಲ್ಲಿ ಭಾರತೀಯ ಬೌಲರ್​ಗಳಿಂದ ನಿರೀಕ್ಷಿತ ಪ್ರದರ್ಶನ ಕೂಡ ಮೂಡಿಬರುತ್ತಿಲ್ಲ.

5 / 8
ಇದರ ನಡುವೆ ಮಯಾಂಕ್ ಯಾದವ್ ವೇಗದೊಂದಿಗೆ ಸಂಚಲನ ಸೃಷ್ಟಿಸುತ್ತಿದ್ದಾರೆ. ಅತ್ತ ಟಿ20 ವಿಶ್ವಕಪ್ ನಡೆಯಲಿರುವುದು ವೆಸ್ಟ್ ಇಂಡೀಸ್ ಹಾಗೂ ಯುಎಸ್​ಎನಲ್ಲಿ. ವಿಂಡೀಸ್​ನ ಪಿಚ್​ಗಳು ವೇಗದ ಬೌಲರ್​ಗಳಿಗೆ ಸಹಕಾರಿ. ಹೀಗಾಗಿ ಮಯಾಂಕ್ ಯಾದವ್​ ಮೇಲೆ ಬಿಸಿಸಿಐ ಆಯ್ಕೆ ಸಮಿತಿ ವಿಶೇಷ ಕಣ್ಣಿಟ್ಟಿದೆ ಎಂದು ವರದಿಯಾಗಿದೆ.

6 / 8
ಮೊದಲೆರಡು ಪಂದ್ಯಗಳಲ್ಲಿ ಕೇವಲ 5.12 ಸರಾಸರಿಯಲ್ಲಿ ಮಾತ್ರ ರನ್ ನೀಡಿರುವ ಮಯಾಂಕ್ ಯಾದವ್ ಇದೇ ಭರ್ಜರಿ ಪ್ರದರ್ಶನ ಮುಂದುವರೆಸಿದರೆ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯುವುದು ಖಚಿತ ಎಂಬುದು ಕ್ರಿಕೆಟ್ ಪಂಡಿತರ ಅಭಿಪ್ರಾಯ. ಏಕೆಂದರೆ ಕೆರಿಬಿಯನ್ ದ್ವೀಪಗಳ ಪಿಚ್​ನಲ್ಲಿ ವೇಗದ ಬೌಲರ್​ಗಳು ಹೆಚ್ಚು ಯಶಸ್ವಿಯಾಗುತ್ತಾರೆ.

7 / 8
ಇದೀಗ ಟೀಮ್ ಇಂಡಿಯಾದಲ್ಲಿ ಜಸ್​ಪ್ರೀತ್ ಬುಮ್ರಾ ಅವರನ್ನು ಹೊರತುಪಡಿಸಿದರೆ, ಅತ್ಯುತ್ತಮವಾಗಿ ದಾಳಿ ಸಂಘಟಿಸಬಲ್ಲ ಮತ್ತೋರ್ವ ವೇಗಿ ಇಲ್ಲ. ಈ ಕೊರತೆಯನ್ನು ನೀಗಿಸುವ ಹೊಸ ಆಶಾಭಾವನೆ ಹುಟ್ಟುಹಾಕಿದ್ದಾರೆ ಮಯಾಂಕ್ ಯಾದವ್. ಹೀಗಾಗಿ ಈ ಬಾರಿಯ ಐಪಿಎಲ್​ನಲ್ಲಿ ತಮ್ಮ ಕರಾರುವಾಕ್ ದಾಳಿಯೊಂದಿಗೆ ಮಯಾಂಕ್ ಮಿಂಚಿದರೆ ಟೀಮ್ ಇಂಡಿಯಾದ ಬಾಗಿಲು ತೆರೆದುಕೊಳ್ಳಲಿದೆ.

8 / 8
Follow us
ಅರಮನೆ ಮುಂದೆ ಕಣ್ಮನ ಸೆಳೆದ ಪೊಲೀಸ್ ಬ್ಯಾಂಡ್ ವೀಕ್ಷಿಸಿದ ರಾಜವಂಶಸ್ಥರು

ಸುಪ್ರೀಂ ಕೋರ್ಟ್ ಒಳಗೆ ನುಗ್ಗಿ ವಕೀಲರ ಬ್ಯಾಗ್, ಊಟದ ಬಾಕ್ಸ್ ಕದ್ದ ಕೋತಿ

PM Modi Speech Live: ಹರಿಯಾಣ ಗೆದ್ದ ಖುಷಿಯಲ್ಲಿ ಮೋದಿ ಮಾತು

ರಸ್ತೆಬದಿ ಕುಳಿತಿದ್ದ 3 ಮಕ್ಕಳನ್ನು ಎಳೆದೊಯ್ದ ಕಾರು; ವಿಡಿಯೋ ವೈರಲ್

ಹೊಸ ಸಿನಿಮಾ ತಂಡಗಳಿಗೆ ಕಿವಿ ಮಾತು ಹೇಳಿದ ಸತೀಶ್ ನೀನಾಸಂ

ರಾಜ್ಯದಲ್ಲಿ ಈಗ ಚುನಾವಣೆ ನಡೆದರೆ ಬಿಜೆಪಿ ಸುಲಭವಾಗಿ ಗೆಲ್ಲುತ್ತದೆ: ಜಗದೀಶ್

ಚನ್ನಪಟ್ಟಣ ಕ್ಷೇತ್ರಕ್ಕೆ ಅಭ್ಯರ್ಥಿ ಯಾರೆಂದು ಕೇಳಿದರೆ ಡಾ ಮಂಜುನಾಥ್ ಉತ್ತರ!

ನಿಯಮ ಮುರಿದ ಸ್ಪರ್ಧಿಗಳು, ಕಠಿಣ ಶಿಕ್ಷೆ ಕೊಟ್ಟ ಬಿಗ್​ಬಾಸ್

ಸಿದ್ದರಾಮಯ್ಯ ಮತ್ತು ಹರಿಯಾಣ ಸೋಲಿನ ನಡುವೆ ಸಂಬಂಧವಿಲ್ಲ: ಡಿಕೆ ಶಿವಕುಮಾರ್

70ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಲೈವ್​ ನೋಡಿ..