- Kannada News Photo gallery Cricket photos IPL 2025: Abhishek Sharma, Ishan Kishan Join Sunrisers Hyderabad
IPL 2025: SRH ಪಡೆಯಲ್ಲಿ ಬೆಂಕಿ ಬಿರುಗಾಳಿ..!
IPL 2025 SRH: ಸನ್ರೈಸರ್ಸ್ ಹೈದರಾಬಾದ್ ಹೊಸ ಜೆರ್ಸಿಯನ್ನು ಅನಾವರಣಗೊಳಿಸಿದೆ. ಆದರೆ ಈ ಬಾರಿ ಎಸ್ಆರ್ಹೆಚ್ ತಂಡದ ಜೆರ್ಸಿ ವಿನ್ಯಾಸದಲ್ಲಿ ಯಾವುದೇ ಬದಲಾವಣೆ ಕಂಡು ಬಂದಿಲ್ಲ. ಅಂದರೆ ಕಳೆದ ಸೀಸನ್ನಲ್ಲಿ ಧರಿಸಿದ್ದ ಬ್ಲ್ಯಾಕ್-ಆರೆಂಜ್ ಬಣ್ಣದ ಜೆರ್ಸಿಯಲ್ಲೇ ಈ ಸಲ ಕೂಡ ಸನ್ರೈಸರ್ಸ್ ಹೈದರಾಬಾದ್ ಪಡೆ ಕಣಕ್ಕಿಳಿಯಲಿದೆ.
Updated on: Mar 12, 2025 | 11:03 AM

ಐಪಿಎಲ್ ಸೀಸನ್-18 ಗಾಗಿ ಸನ್ರೈಸರ್ಸ್ ಹೈದರಾಬಾದ್ ಬಲಿಷ್ಠ ಪಡೆಯನ್ನೇ ರೂಪಿಸಿದೆ. ಈ ತಂಡದ ಪರ ಆರಂಭಿಕರಾಗಿ ಕಣಕ್ಕಿಳಿಯಲಿರುವುದು ಸ್ಪೋಟಕ ದಾಂಡಿಗ ಟ್ರಾವಿಸ್ ಹೆಡ್ ಹಾಗೂ ವಿಸ್ಪೋಟಕ ಬ್ಯಾಟರ್ ಅಭಿಷೇಕ್ ಶರ್ಮಾ. ಇನ್ನು ಮೂರನೇ ಕ್ರಮಾಂಕದಲ್ಲಿ ಪಾಕೆಟ್ ಡೈನಾಮೊ ಖ್ಯಾತಿಯ ಇಶಾನ್ ಕಿಶನ್ ಬ್ಯಾಟ್ ಬೀಸುವುದು ಖಚಿತ.

ಇನ್ನು ಮಧ್ಯಮ ಕ್ರಮಾಂಕಗಳಲ್ಲಿ ಹೆನ್ರಿಕ್ ಕ್ಲಾಸೆನ್, ನಿತೀಶ್ ಕುಮಾರ್ ರೆಡ್ಡಿ ಇದ್ದಾರೆ. ಇವರೊಂದಿಗೆ ಕರ್ನಾಟಕದ ಸ್ಪೋಟಕ ದಾಂಡಿಗ ಅಭಿನವ್ ಮನೋಹರ್ ಕೂಡ ಸನ್ರೈಸರ್ಸ್ ಹೈದರಾಬಾದ್ ತಂಡವನ್ನು ಕೂಡಿಕೊಂಡಿದ್ದಾರೆ. ಹೀಗಾಗಿ ಈ ಬಾರಿ ಎಸ್ಆರ್ಹೆಚ್ ಬ್ಯಾಟರ್ಗಳಿಂದ ಬೆಂಕಿ ಬಿರುಗಾಳಿ ಪ್ರದರ್ಶನವನ್ನು ಎದುರು ನೋಡಬಹುದು.

ಸನ್ರೈಸರ್ಸ್ ಹೈದರಾಬಾದ್ ಫ್ರಾಂಚೈಸಿಯು ಈಗಾಗಲೇ ಕ್ಯಾಂಪ್ ಆರಂಭಿಸಿದ್ದು, ಟೀಮ್ ಇಂಡಿಯಾದ ಯುವ ಆಟಗಾರರಾದ ಇಶಾನ್ ಕಿಶನ್, ಅಭಿಷೇಕ್ ಶರ್ಮಾ, ಅಭಿನವ್ ಮನೋಹರ್ ಸೇರಿದಂತೆ ಹಲವರು SRH ಕ್ಯಾಂಪ್ ಸೇರಿಕೊಂಡಿದ್ದಾರೆ. ಇನ್ನುಳಿದ ಆಟಗಾರರು ಇನ್ನೆರಡು ದಿನಗಳಲ್ಲಿ ಹೈದರಾಬಾದ್ಗೆ ಬಂದಿಳಿಯಲಿದ್ದಾರೆ.

ಸನ್ರೈಸರ್ಸ್ ಹೈದರಾಬಾದ್ ತಂಡವು ಮಾರ್ಚ್ 23 ರಂದು ತನ್ನ ಮೊದಲ ಪಂದ್ಯವನ್ನಾಡಲಿದೆ. ಹೈದರಾಬಾದ್ನಲ್ಲಿ ಜರುಗಲಿರುವ ಈ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಎದುರಿಸಲಿದ್ದು, ಈ ಪಂದ್ಯದ ಮೂಲಕ SRH ಪಡೆ ಐಪಿಎಲ್ ಸೀಸನ್-18 ಅಭಿಯಾನ ಆರಂಭಿಸಲಿದೆ. ಇನ್ನು ಮಾರ್ಚ್ 27 ರಂದು ನಡೆಯಲಿರುವ ದ್ವಿತೀಯ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ಮುಖಾಮುಖಿಯಾಗಲಿದೆ. ಹಾಗೆಯೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಸನ್ರೈಸರ್ಸ್ ಹೈದರಾಬಾದ್ ನಡುವಣ ಕದನವು ಮೇ 13 ರಂದು ನಡೆಯಲಿದೆ.

SRH ತಂಡ: ಪ್ಯಾಟ್ ಕಮ್ಮಿನ್ಸ್ (ನಾಯಕ), ಅಭಿಷೇಕ್ ಶರ್ಮಾ, ನಿತೀಶ್ ರೆಡ್ಡಿ, ಹೆನ್ರಿಕ್ ಕ್ಲಾಸೆನ್, ಟ್ರಾವಿಸ್ ಹೆಡ್, ಮೊಹಮ್ಮದ್ ಶಮಿ, ಹರ್ಷಲ್ ಪಟೇಲ್, ಇಶಾನ್ ಕಿಶನ್, ರಾಹುಲ್ ಚಹರ್, ಆ್ಯಡಂ ಝಂಪಾ, ಅಥರ್ವ ಟೈಡೆ, ಅಭಿನವ್ ಮನೋಹರ್, ಸಿಮರ್ಜೀತ್ ಸಿಂಗ್, ಜೀಶನ್ ಅನ್ಸಾರಿ, ಜಯದೇವ್ ಉನದ್ಕತ್, ಕಮಿಂದು ಮೆಂಡಿಸ್, ಸಚಿನ್ ಬೇಬಿ, ವಿಯಾನ್ ಮುಲ್ಡರ್, ಅನಿಕೇತ್ ವರ್ಮಾ, ಇಶಾನ್ ಮಲಿಂಗ.



















