IPL 2025: ಮೆಗಾ ಹರಾಜು ನಿಯಮದಲ್ಲಿ ಬದಲಾವಣೆ: ಸ್ಟಾರ್ ಆಟಗಾರರಿಗೆ ಕೋಟಿಗಳ ಸುರಿಮಳೆ ಪಕ್ಕಾ

IPL 2025: ಐಪಿಎಲ್ ಮೆಗಾ ಹರಾಜಿಗೂ ಮುನ್ನ ಸನ್​ರೈಸರ್ಸ್ ಹೈದರಾಬಾದ್ ಫ್ರಾಂಚೈಸಿಯು ಹೆನ್ರಿಕ್ ಕ್ಲಾಸೆನ್​ಗೆ ಬರೋಬ್ಬರಿ 23 ಕೋಟಿ ರೂ. ನೀಡಲು ಮುಂದಾಗಿದೆ. ಹೀಗಾಗಿ ಉಳಿದ ತಂಡಗಳಲ್ಲಿರುವ ಆಟಗಾರರು ಕೂಡ ರಿಟೈನ್​ಗಾಗಿ ಬೃಹತ್ ಮೊತ್ತದ ಬೇಡಿಕೆಯಿಡುವುದರಲ್ಲಿ ಅನುಮಾನವೇ ಬೇಡ.

ಝಾಹಿರ್ ಯೂಸುಫ್
|

Updated on: Oct 21, 2024 | 10:10 AM

IPL 2025: ಐಪಿಎಲ್ ಮೆಗಾ ಹರಾಜಿನ ಧಾರಣ ನಿಯಮದಲ್ಲಿ ಪ್ರಮುಖ ಬದಲಾವಣೆಯಾಗಿದೆ. ಈ ಬದಲಾವಣೆಯಿಂದಾಗಿ ಮೆಗಾ ಆಕ್ಷನ್​ಗೂ ಮುನ್ನ ಸ್ಟಾರ್ ಆಟಗಾರರು ಕೋಟ್ಯಾಧಿಪತಿಗಳಾಗುವುದು ಪಕ್ಕಾ. ಏಕೆಂದರೆ ಹೊಸ ನಿಯಮದ ಪ್ರಕಾರ, ಆಟಗಾರರಿಗೆ ನೀಡಲಾಗುವ ಸಂಭಾವನೆಗೆ ಯಾವುದೇ ಮಿತಿ ನಿಗದಿ ಮಾಡಲಾಗಿಲ್ಲ.

1 / 6
ಈ ಹಿಂದೆ ಮೆಗಾ ಹರಾಜಿಗೂ ಮುನ್ನ ಆಟಗಾರರನ್ನು ಉಳಿಸಿಕೊಳ್ಳಲು ನಿರ್ದಿಷ್ಟ ಮೊತ್ತವನ್ನು ನೀಡಬೇಕಾಗುತ್ತದೆ ಎಂದು ತಿಳಿಸಲಾಗಿತ್ತು. ಇಲ್ಲಿ ಮೊದಲ ಆಟಗಾರನಿಗೆ 18 ಕೋಟಿ, ಎರಡನೇ ಆಟಗಾರನಿಗೆ 14 ಕೋಟಿ, ಮೂರನೇ ಆಟಗಾರನಿಗೆ 11 ಕೋಟಿ, ನಾಲ್ಕನೇ ಆಟಗಾರನಿಗೆ 18 ಕೋಟಿ, ಐದನೇ ಆಟಗಾರನಿಗೆ 14 ಕೋಟಿ ರೂ. ಹಾಗೂ ಅನ್​ಕ್ಯಾಪ್ಡ್ ಆಟಗಾರನನ್ನು ಉಳಿಸಿಕೊಂಡರೆ ಅವರಿಗೆ ಕೇವಲ 4 ಕೋಟಿ ರೂ. ನೀಡಬೇಕಾಗುತ್ತದೆ ಎಂದು ತಿಳಿಸಲಾಗಿತ್ತು.

2 / 6
ಈ ಮೂಲಕ 79 ಕೋಟಿ ರೂ.ನಲ್ಲಿ ಒಟ್ಟು 6 ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ನೀಡಲಾಗಿತ್ತು. ಆದರೀಗ ಈ ನಿಯಮದಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಅಲ್ಲದೆ ಬದಲಾವಣೆಯೊಂದಿಗೆ ಆಟಗಾರರ ಸಂಭಾವನೆ ಮೊತ್ತವನ್ನು ನಿಗದಿ ಮಾಡುವ ಅಧಿಕಾರ ಫ್ರಾಂಚೈಸಿಗಳಿಗೆ ನೀಡಲಾಗಿದೆ.

3 / 6
ಅಂದರೆ 79 ಕೋಟಿ ರೂ. ರಿಟೈನ್ ಮೊತ್ತದಲ್ಲಿ ಫ್ರಾಂಚೈಸಿಗಳು ತಮಗೆ ಬೇಕಾದ ಆಟಗಾರರಿಗೆ ಎಷ್ಟು ಕೋಟಿ ರೂ. ಬೇಕಿದ್ದರೂ ನೀಡಬಹುದು. ಆದರೆ ಅದು ಒಟ್ಟು ರಿಟೈನ್ ಮೊತ್ತ 79 ಕೋಟಿ ರೂ. ಅನ್ನು ದಾಟುವಂತಿಲ್ಲ ಎಂದು ತಿಳಿಸಲಾಗಿದೆ.

4 / 6
ಉದಾಹರಣೆಗೆ... ಆರ್​ಸಿಬಿ ಮೂವರು ಆಟಗಾರರನ್ನು ಉಳಿಸಿಕೊಳ್ಳಲು ಬಳಿಸಿದರೆ, ವಿರಾಟ್ ಕೊಹ್ಲಿಗೆ 29 ಕೋಟಿ ರೂ. ಮೊಹಮ್ಮದ್ ಸಿರಾಜ್​ಗೆ 25 ಕೋಟಿ ರೂ. ಹಾಗೂ ಫಾಫ್ ಡುಪ್ಲೆಸಿಸ್​ಗೆ 25 ಕೋಟಿ ರೂ. ನೀಡಬಹುದು. ಇಲ್ಲ ವಿರಾಟ್ ಕೊಹ್ಲಿಗೆ 50 ಕೋಟಿ ರೂ. ನೀಡಿ, ಇನ್ನುಳಿದ ಆಟಗಾರರನ್ನು ಉಳಿದ 29 ಕೋಟಿ ರೂ.ನಲ್ಲಿ ರಿಟೈನ್ ಮಾಡಿಕೊಳ್ಳಬಹುದು.

5 / 6
ಈ ಮೂಲಕ 79 ಕೋಟಿ ರೂ. ಅನ್ನು ಹೇಗೆ ಬೇಕಿದ್ದರೂ ಬಳಸಿಕೊಳ್ಳಲು ಅವಕಾಶ ನೀಡಲಾಗಿದೆ. ಇನ್ನು ಐವರು ಆಟಗಾರರನ್ನು ಮಾತ್ರ ಉಳಿಸಿಕೊಳ್ಳಲು ಬಯಸಿದರೆ 75 ಕೋಟಿ ರೂ. ಖರ್ಚು ಮಾಡಬೇಕೆಂದು ತಿಳಿಸಲಾಗಿದೆ. ಹೀಗಾಗಿ ರಿಟೈನ್ ಆಗಲಿರುವ ಆಟಗಾರರು ಈ ಬಾರಿ ಕೋಟಿ ಮೊತ್ತವನ್ನು ಡಿಮ್ಯಾಂಡ್ ಮಾಡುವುದು ಖಚಿತ. ಈ ಬೇಡಿಕೆಯೊಂದಿಗೆ ಈ ಬಾರಿ ಅತ್ಯಧಿಕ ಕೋಟಿ ಪಡೆಯುವ ಆಟಗಾರ ಯಾರು ಎಂಬುದನ್ನು ಕಾದು ನೋಡಬೇಕಿದೆ.

6 / 6
Follow us