AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2025: ಹೀಗೆ ಮಾಡಿದ್ರೆ CSK ಅಂಕ ಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆಯಲ್ಲ..!

IPL 2025 CSK: ಈ ಬಾರಿಯ ಐಪಿಎಲ್​ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಈವರೆಗೆ 13 ಪಂದ್ಯಗಳನ್ನಾಡಿದೆ. ಈ ವೇಳೆ ಗೆದ್ದಿರುವುದು ಕೇವಲ ಮೂರು ಮ್ಯಾಚ್​ಗಳಲ್ಲಿ ಮಾತ್ರ. ಇನ್ನುಳಿದ 10 ಪಂದ್ಯಗಳಲ್ಲೂ ಚೆನ್ನೈ ಸೂಪರ್ ಕಿಂಗ್ಸ್ ತಂಡ ಸೋಲನುಭವಿಸಿದೆ. ಪ್ರಸ್ತುತ ಅಂಕ ಪಟ್ಟಿಯಲ್ಲಿ 10ನೇ ಸ್ಥಾನದಲ್ಲಿರುವ ಸಿಎಸ್​ಕೆ ತಂಡವು ಮುಂದಿನ ಪಂದ್ಯದಲ್ಲಿ ಅಮೋಘ ಗೆಲುವು ದಾಖಲಿಸಿದರೆ, ಅಂಕ ಪಟ್ಟಿಯಲ್ಲಿ ಮೇಲೇರಬಹುದು.

ಝಾಹಿರ್ ಯೂಸುಫ್
|

Updated on: May 21, 2025 | 7:55 AM

Share
IPL 2025: ಇಂಡಿಯನ್ ಪ್ರೀಮಿಯರ್ ಲೀಗ್​ನ ಮೊದಲ ಸುತ್ತಿನ ಪಂದ್ಯಗಳು ಮುಕ್ತಾಯದ ಹಂತಕ್ಕೆ ಬಂದು ನಿಂತಿದೆ. ಈಗಾಗಲೇ ಬಹುತೇಕ ತಂಡಗಳು 12 ಪಂದ್ಯಗಳನ್ನಾಡಿದ್ದು, ಲೀಗ್​ ಹಂತದಲ್ಲಿ ಇನ್ನುಳಿದಿರುವುದು ಕೇವಲ 8 ಮ್ಯಾಚ್​ಗಳು ಮಾತ್ರ. ಈ ಎಂಟು ಪಂದ್ಯಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡ ಕೂಡ ಒಂದು ಪಂದ್ಯವಾಡಲಿದೆ.

1 / 5
ಪ್ರಸ್ತುತ ಅಂಕ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಮುಂದಿನ ಪಂದ್ಯದಲ್ಲಿ ಗೆದ್ದರೆ ಒಟ್ಟು 8 ಅಂಕಗಳನ್ನು ಪಡೆಯಲಿದೆ. ಇದಾಗ್ಯೂ 9ನೇ ಸ್ಥಾನದಲ್ಲಿರುವ ರಾಜಸ್ಥಾನ್ ರಾಯಲ್ಸ್ ತಂಡವನ್ನು ಹಿಂದಿಕ್ಕಲು ಸಾಧ್ಯವಾಗುವುದಿಲ್ಲ. ಅಂದರೆ ಪಾಯಿಂಟ್ಸ್ ಟೇಬಲ್​ನಲ್ಲಿ ಕೊನೆಯ ಸ್ಥಾನ ತಪ್ಪಿಸಿಕೊಳ್ಳಲು ಸಿಎಸ್​ಕೆ ಅಮೋಘ ಗೆಲುವು ದಾಖಲಿಸಲೇಬೇಕು.

2 / 5
ಚೆನ್ನೈ ಸೂಪರ್ ಕಿಂಗ್ಸ್ ತಂಡವು ತನ್ನ ಮುಂದಿನ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಎದುರಿಸಲಿದೆ. ಮೇ 25 ರಂದು ಅಮಹಾಬಾದ್​​ನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಸಿಎಸ್​ಕೆ ತಂಡವು ಭರ್ಜರಿ ಜಯ ಸಾಧಿಸಿದರೆ ಮಾತ್ರ 9ನೇ ಸ್ಥಾನಕ್ಕೇರಬಹುದು. ಅಂದರೆ ಇಲ್ಲಿ ಸಿಎಸ್​ಕೆ ಮೊದಲು ಬ್ಯಾಟಿಂಗ್ ಮಾಡಿ 200 ರನ್ ಕಲೆಹಾಕಿದರೆ, ಕನಿಷ್ಠ 107 ರನ್​ಗಳ ಅಂತರದಿಂದ ಗೆಲ್ಲಬೇಕಾಗುತ್ತದೆ.

3 / 5
ಇನ್ನು ಗುಜರಾತ್ ಟೈಟಾನ್ಸ್ ತಂಡವು ಮೊದಲು ಬ್ಯಾಟಿಂಗ್ ಮಾಡಿ 180 ರನ್​ಗಳನ್ನು ಕಲೆಹಾಕಿದರೆ, ಈ ಗುರಿಯನ್ನು ಸಿಎಸ್​ಕೆ ತಂಡವು ಕೇವಲ 8 ಓವರ್​ಗಳಲ್ಲಿ ಚೇಸ್ ಮಾಡಬೇಕು. ಈ ಮೂಲಕ ರಾಜಸ್ಥಾನ್ ರಾಯಲ್ಸ್ ತಂಡವನ್ನು ನೆಟ್ ರನ್ ರೇಟ್​ನಲ್ಲಿ ಹಿಂದಿಕ್ಕಿ ಅಂಕ ಪಟ್ಟಿಯಲ್ಲಿ 9ನೇ ಸ್ಥಾನಕ್ಕೇರಬಹುದು.

4 / 5
ಪ್ರಸ್ತುತ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಫಾರ್ಮ್​ ಗಮನಿಸಿದರೆ, ಇದು ಕಷ್ಟಸಾಧ್ಯ ಎಂದೇ ಹೇಳಬಹುದು. ಹೀಗಾಗಿ ಈ ಬಾರಿಯ ಐಪಿಎಲ್​ನಲ್ಲಿ ಸಿಎಸ್​ಕೆ ಪಡೆಯು ಕೊನೆಯ ಸ್ಥಾನದೊಂದಿಗೆ ಟೂರ್ನಿಯನ್ನು ಅಂತ್ಯಗೊಳಿಸಲಿದೆ. ಅದು ಕೂಡ ಐಪಿಎಲ್ ಇತಿಹಾಸದಲ್ಲಿ ಮೊದಲ ಬಾರಿಗೆ. ಅಂದರೆ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಕಳೆದ 15 ಸೀಸನ್​ಗಳಲ್ಲಿ ಒಮ್ಮೆಯೂ ಅಂಕ ಪಟ್ಟಿಯಲ್ಲಿ ಕೊನೆಯ ಸ್ಥಾನ ಅಲಂಕರಿಸಿಲ್ಲ. ಆದರೆ ಈ ಬಾರಿ ಅಂತಿಮ ಸ್ಥಾನದೊಂದಿಗೆ ಹೊಸ ಇತಿಹಾಸ ಬರೆಯುವ ನಿರೀಕ್ಷೆಯಿದೆ.

5 / 5
ಸುರ್ಜೇವಾಲಾ ಕರೆದು ಮಾತಾಡಿದರೆ ಅದರಲ್ಲಿ ತಪ್ಪೇನಿಲ್ಲ: ಜಾರಕಿಹೊಳಿ

ಸರೋಜಾದೇವಿ ಎಲ್ಲರೊಂದಿಗೆ ಪ್ರೀತಿಯಿಂದ ಮಾತಾಡುತ್ತಿದ್ದರು: ಸಿದ್ದರಾಮಯ್ಯ

ಹಾಲ್​ನಲ್ಲಿ ಪತಿಯೊಂದಿಗೆ ಸರೋಜಾ ದೇವಿ ಮತ್ತು ತಂದೆ-ತಾಯಿಯವರ ಫೋಟೋ!

W,W,W: ಟೆಸ್ಟ್​ನಲ್ಲಿ ಹ್ಯಾಟ್ರಿಕ್... ಹೊಸ ಇತಿಹಾಸ ಬರೆದ ಬೋಲ್ಯಾಂಡ್

ತಾಯಿಯ ಸಮಾಧಿ ಪಕ್ಕದಲ್ಲೇ ಸರೋಜಾದೇವಿ ಪಾರ್ಥೀವ ಶರೀರ ದಫನ

‘ಲವ್ ಮಾಕ್ಟೇಲ್ 3’ ಚಿತ್ರಕ್ಕೆ ಶೂಟಿಂಗ್ ಶುರು ಮಾಡಿದ ಡಾರ್ಲಿಂಗ್​ ಕೃಷ್ಣ

ಬಿಬಿಎಂಪಿ ಕಚೇರಿ ಎದುರೇ ನಾಯಿಗಳಿಗೆ ಶಾಲು ಹೊದೆಸಿ ಸನ್ಮಾನಿಸಿದ ವಾಟಾಳ್!

ಧರ್ಮಶಾಲಾ: ಪ್ಯಾರಾಗ್ಲೈಡಿಂಗ್ ವೇಳೆ ಅಪಘಾತ, ವ್ಯಕ್ತಿ ಸಾವು

ಚಂದ್ರ ಕುಂಭ ರಾಶಿಯಲ್ಲಿ ಸಂಚಾರ: ಇಂದಿನ ದಿನ ಭವಿಷ್ಯ ಇಲ್ಲಿದೆ

ಚನ್ನಪಟ್ಟಣದ ದಶವಾರ ಗ್ರಾಮದಲ್ಲಿ ಬಿ. ಸರೋಜಾದೇವಿ ಅಂತ್ಯಕ್ರಿಯೆಗೆ ಸಿದ್ಧತೆ