IPL 2026: ಕೇವಲ 31 OP ಸ್ಲಾಟ್: ಹರಾಜಿನಲ್ಲಿ ಎಷ್ಟು ಆಟಗಾರರಿಗೆ ಸಿಗಲಿದೆ ಚಾನ್ಸ್?
IPL 2026 Mini Auction: ಇಂಡಿಯನ್ ಪ್ರೀಮಿಯರ್ ಲೀಗ್ನ 19ನೇ ಆವೃತ್ತಿಗಾಗಿ ಡಿಸೆಂಬರ್ 16 ರಂದು ಮಿನಿ ಹರಾಜು ನಡೆಯಲಿದೆ. ಅಬುಧಾಬಿಯಲ್ಲಿ ನಡೆಯಲಿರುವ ಈ ಹರಾಜಿನ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಆರು ಭಾರತೀಯ ಹಾಗೂ ಇಬ್ಬರು ವಿದೇಶಿ ಆಟಗಾರರನ್ನು ಖರೀದಿಸಬಹುದು.
Updated on: Nov 17, 2025 | 4:03 PM

IPL 2026: ಇಂಡಿಯನ್ ಪ್ರೀಮಿಯರ್ ಲೀಗ್ 2026ರ ರಿಟೆನ್ಷನ್ ಪ್ರಿಕ್ರಿಯೆ ಮುಗಿದಿದೆ. ಈ ರಿಟೆನ್ಷನ್ ಪ್ರಕ್ರಿಯೆಯಲ್ಲಿ ಅತೀ ಹೆಚ್ಚು ಆಟಗಾರರನ್ನು ರಿಟೈನ್ ಮಾಡಿಕೊಂಡ ಫ್ರಾಂಚೈಸಿ ಪಂಜಾಬ್ ಕಿಂಗ್ಸ್. ಪಂಜಾಬ್ ಕಿಂಗ್ಸ್ 21 ಆಟಗಾರರನ್ನು ಉಳಿಸಿಕೊಂಡರೆ, ಮುಂಬೈ ಇಂಡಿಯನ್ಸ್ ಹಾಗೂ ಗುಜರಾತ್ ಟೈಟಾನ್ಸ್ ತಲಾ 20 ಆಟಗಾರರನ್ನು ರಿಟೈನ್ ಮಾಡಿಕೊಂಡಿದೆ.

ಇನ್ನು 10 ಫ್ರಾಂಚೈಸಿಗಳು ರಿಟೈನ್ ಮಾಡಿಕೊಂಡಿರುವ ಒಟ್ಟು ಆಟಗಾರರ ಸಂಖ್ಯೆ ಬರೋಬ್ಬರಿ 173 ಪ್ಲೇಯರ್ಸ್. ಈ 173 ಆಟಗಾರರಲ್ಲಿ 49 ವಿದೇಶಿ ಆಟಗಾರರಿದ್ದಾರೆ. ಅಂದರೆ ಮಿನಿ ಹರಾಜಿನಲ್ಲಿ ಕೇವಲ 31 ಓವರ್ಸಿಸ್ ಪ್ಲೇಯರ್ಸ್ಗೆ ಮಾತ್ರ ಅವಕಾಶ ದೊರೆಯಲಿದೆ.

ಐಪಿಎಲ್ ನಿಯಮ ಪ್ರಕಾರ ಒಂದು ಫ್ರಾಂಚೈಸಿಯು ಕನಿಷ್ಠ 18 ಆಟಗಾರರನ್ನು ಹೊಂದಿರಲೇಬೇಕು. ಹಾಗೆಯೇ ಗರಿಷ್ಠ 25 ಆಟಗಾರರನ್ನು ಹೊಂದಬಹುದು. ಇದೀಗ 10 ಫ್ರಾಂಚೈಸಿಗಳು 173 ಪ್ಲೇಯರ್ಸ್ಗಳನ್ನು ರಿಟೈನ್ ಮಾಡಿಕೊಂಡಿರುವ ಕಾರಣ ಹರಾಜಿನ ಮೂಲಕ ಕೆಲವೇ ಕೆಲವು ಆಟಗಾರರಿಗೆ ಮಾತ್ರ ಅವಕಾಶ ದೊರೆಯಲಿದೆ.

ಇಲ್ಲಿ ಎಲ್ಲಾ ಫ್ರಾಂಚೈಸಿಗಳು ಗರಿಷ್ಠ 25 ಆಟಗಾರರನ್ನು ಆಯ್ಕೆ ಮಾಡಲು ಮುಂದಾದರೆ ಹರಾಜಿನ ಮೂಲಕ 77 ಪ್ಲೇಯರ್ಸ್ಗೆ ಅವಕಾಶ ಸಿಗಲಿದೆ. ಅದರಂತೆ ಈ ಬಾರಿಯ ಹರಾಜಿನ ಮೂಲಕ ಗರಿಷ್ಠ 77 ಆಟಗಾರರು ಮಾತ್ರ ಆಯ್ಕೆಯಾಗಲಿದ್ದಾರೆ. ಇದರಲ್ಲಿ 31 ವಿದೇಶಿ ಆಟಗಾರರಿಗೆ ಚಾನ್ಸ್ ಸಿಗಬಹುದು.

ಅಂದರೆ ಮಿನಿ ಹರಾಜಿನ ಮೂಲಕ 10 ತಂಡಗಳು 46 ಭಾರತೀಯರು ಹಾಗೂ 31 ವಿದೇಶಿ ಆಟಗಾರರನ್ನು ಖರೀದಿಸಬಹುದು. ಅದರಂತೆ ಡಿಸೆಂಬರ್ 16 ರಂದು ಅಬುಧಾಬಿಯಲ್ಲಿ ನಡೆಯಲಿರುವ ಮಿನಿ ಆಕ್ಷನ್ ಮೂಲಕ ಯಾವ ಆಟಗಾರ ಯಾವ ತಂಡಕ್ಕೆ ಸೇರ್ಪಡೆಯಾಗಲಿದ್ದಾರೆ? ಎಂಬುದನ್ನು ಕಾದು ಬೋಡಬೇಕಿದೆ.
