ಐಪಿಎಲ್‌ನಲ್ಲಿ ಸಾರ್ವಕಾಲಿಕ ಶ್ರೇಷ್ಠ ದಾಖಲೆ ಮುರಿಯುವ ಸನಿಹದಲ್ಲಿ ಭುವನೇಶ್ವರ್ ಕುಮಾರ್

Updated on: May 18, 2026 | 8:28 PM

Bhuvneshwar Kumar: ಐಪಿಎಲ್ 2026 ರಲ್ಲಿ ಆರ್​ಸಿಬಿ ಪ್ಲೇಆಫ್ ತಲುಪಿದೆ. ಈ ಯಶಸ್ಸಿನಲ್ಲಿ ಭುವನೇಶ್ವರ್ ಕುಮಾರ್ ಅವರ ಕೊಡುಗೆ ಮಹತ್ವದ್ದು. 13 ಪಂದ್ಯಗಳಲ್ಲಿ 24 ವಿಕೆಟ್ ಪಡೆದು ಪರ್ಪಲ್ ಕ್ಯಾಪ್ ರೇಸ್‌ನಲ್ಲಿ ಮುಂಚೂಣಿಯಲ್ಲಿರುವ ಭುವಿ, ಡ್ವೇನ್ ಬ್ರಾವೋ ಮತ್ತು ಹರ್ಷಲ್ ಪಟೇಲ್ ಅವರ 32 ವಿಕೆಟ್‌ಗಳ ಐಪಿಎಲ್ ಸೀಸನ್ ದಾಖಲೆ ಮುರಿಯುವ ಸನಿಹದಲ್ಲಿದ್ದಾರೆ. ಪ್ಲೇಆಫ್ ಪ್ರವೇಶದಿಂದ ಈ ದಾಖಲೆ ಮುರಿಯುವ ಅವರ ಅವಕಾಶ ಹೆಚ್ಚಾಗಿದೆ.

1 / 6
2026 ರ ಐಪಿಎಲ್‌ನಲ್ಲಿ ತನ್ನ ಅದ್ಭುತ ಪ್ರದರ್ಶನದೊಂದಿಗೆ ಹಾಲಿ ಚಾಂಪಿಯನ್ ಆರ್​ಸಿಬಿ, ಮೊದಲ ತಂಡವಾಗಿ ಪ್ಲೇಆಫ್‌ಗೆ ಅರ್ಹತೆ ಪಡೆದುಕೊಂಡಿದೆ. ತಂಡದ ಈ ಯಶಸ್ಸಿನಲ್ಲಿ ಅನುಭವಿ ವೇಗಿ ಭುವನೇಶ್ವರ್ ಕುಮಾರ್ ಅವರ ಪಾತ್ರ ಅಪಾರವಾಗಿದೆ. ಪ್ರತಿಯೊಂದು ಪಂದ್ಯದಲ್ಲೂ ತಂಡದ ಗೆಲುವಿಗೆ ಪ್ರಮುಖ ಕೊಡುಗೆ ನೀಡುತ್ತಿರುವ ಭುವಿ ಪರ್ಪಲ್ ಕ್ಯಾಪ್ ರೇಸ್​ನಲ್ಲೂ ಆಗ್ರಸ್ಥಾನದಲ್ಲಿದ್ದಾರೆ (PC-RCB X).

2 / 6
ಈ ಆವೃತ್ತಿಯಲ್ಲಿ ಇದುವರೆಗೆ 13 ಪಂದ್ಯಗಳನ್ನಾಡಿರುವ ಭುವನೇಶ್ವರ್ ಕುಮಾರ್ ಕೇವಲ7.71 ರ ಎಕಾನಮಿಯಲ್ಲಿ 24 ವಿಕೆಟ್‌ಗಳನ್ನು ಕಬಳಿಸಿದ್ದು, ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್​ಗಳ ಪಟ್ಟಿಯಲ್ಲಿ ಪ್ರಸ್ತುತ ಅಗ್ರಸ್ಥಾನದಲ್ಲಿದ್ದಾರೆ. ಭುವನೇಶ್ವರ್ ಕುಮಾರ್ ಇದೇ ಪ್ರದರ್ಶನವನ್ನು ಉಳಿದ ಪಂದ್ಯಗಳಲ್ಲೂ ಮುಂದುವರೆಸಿದರೆ, ಐಪಿಎಲ್‌ನಲ್ಲಿ ಹೊಸ ಇತಿಹಾಸ ನಿರ್ಮಿಸಲಿದ್ದಾರೆ (PC-RCB X).

3 / 6
ವಾಸ್ತವವಾಗಿ ಒಂದೇ ಐಪಿಎಲ್ ಆವೃತ್ತಿಯತಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ದಾಖಲೆಯನ್ನು ಮುರಿಯುವ ಸಮೀಪದಲ್ಲಿ ಭುವನೇಶ್ವರ್ ಕುಮಾರ್ ಇದ್ದಾರೆ. ಪ್ರಸ್ತುತ ಐಪಿಎಲ್‌ನ ಒಂದೇ ಆವೃತ್ತಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ದಾಖಲೆ ಡ್ವೇನ್ ಬ್ರಾವೋ ಅವರ ಹೆಸರಿನಲ್ಲಿದೆ. 2013 ರ ಐಪಿಎಲ್​ನಲ್ಲಿ ಸಿಎಸ್‌ಕೆ ಪರ ಬ್ರಾವೋ 32 ವಿಕೆಟ್​ಗಳನ್ನು ಕಬಳಿಸಿದ್ದರು (PC-KKR X).

4 / 6
ಇದಾದ ನಂತರ 2021 ರ ಐಪಿಎಲ್​ನಲ್ಲಿ ಆರ್‌ಸಿಬಿ ಪರ ಆಡಿದ್ದ ಹರ್ಷಲ್ ಪಟೇಲ್, ಬ್ರಾವೋ ಅವರ ದಾಖಲೆಯನ್ನು ಏಕೈಕ ವಿಕೆಟ್​​ನ ಕೊರತೆಯಿಂದ ಮುರಿಯುವಲ್ಲಿ ವಿಫಲರಾಗಿದ್ದರು. ಆ ಆವೃತ್ತಿಯಲ್ಲಿ ಹರ್ಷಲ್ ಪಟೇಲ್ ಕೂಡ 32 ವಿಕೆಟ್‌ಗಳನ್ನು ಉರುಳಿಸಿದ್ದರು. ಹರ್ಷಲ್ ಇನ್ನೊಂದು ವಿಕೆಟ್ ಪಡೆದಿದ್ದರೆ, ಬ್ರಾವೋ ದಾಖಲೆ ಮುರಿಯುತ್ತಿದ್ದರು (PC-RCB X).

5 / 6
ಇದೀಗ ಬ್ರಾವೋ ಮತ್ತು ಹರ್ಷಲ್ ಪಟೇಲ್ ಅವರ ಹೆಸರಿನಲ್ಲಿರುವ ಜಂಟಿ ದಾಖಲೆಯನ್ನು ಭುವನೇಶ್ವರ್ ಕುಮಾರ್ ಮುರಿಯುವ ಸನಿಹದಲ್ಲಿದ್ದಾರೆ. ಇದಕ್ಕೆ ಪೂರಕವಾಗಿ ಆರ್‌ಸಿಬಿ ಕೂಡ ಪ್ಲೇಆಫ್‌ಗೆ ತಲುಪಿದೆ. ಇದರರ್ಥ ಭುವಿಯ ಅವಕಾಶಗಳು ಹೆಚ್ಚಿವೆ (PC-RCB X).

6 / 6
ಮೇಲೆ ಹೇಳಿದಂತೆ ಐಪಿಎಲ್ 2026 ರಲ್ಲಿ ಇದುವರೆಗೆ ಆಡಿರುವ 13 ಪಂದ್ಯಗಳಲ್ಲಿ ಭುವನೇಶ್ವರ್ ಕುಮಾರ್ 24 ವಿಕೆಟ್‌ಗಳನ್ನು ಕಬಳಿಸಿದ್ದಾರೆ ಮತ್ತು ಪರ್ಪಲ್ ಕ್ಯಾಪ್‌ ಸ್ಪರ್ಧೆಯಲ್ಲಿ ಮುಂಚೂಣಿಯಲ್ಲಿದ್ದಾರೆ. 32 ವಿಕೆಟ್‌ಗಳ ಗಡಿಯನ್ನು ತಲುಪಲು ಭುವಿಗೆ ಇನ್ನು 9 ವಿಕೆಟ್​ಗಳ ಅಗತ್ಯವಿದೆ. ಒಂದು ವೇಳೆ ಆರ್‌ಸಿಬಿ ಫೈನಲ್ ತಲುಪಿದರೆ ಭುವಿಗೆ ನಾಲ್ಕು ಪಂದ್ಯಗಳು ಸಿಗಲಿವೆ. ಈ ನಾಲ್ಕು ಪಂದ್ಯಗಳಲ್ಲಿ ಭುವಿ 9 ವಿಕೆಟ್ ಪಡೆದರೆ, ಬಹು ವರ್ಷಗಳ ದಾಖಲೆಯೊಂದು ಭುವಿ ಖಾತೆಗೆ ಸೇರಲಿದೆ (PC-RCB X).

Follow Us