ಸೋತು ಸುಣ್ಣವಾಗಿರುವ LSG ತಂಡಕ್ಕೆ ಪ್ಲೇಆಫ್​ಗೇರಲು ಇನ್ನೂ ಇದೆ ಚಾನ್ಸ್​!

Updated on: May 05, 2026 | 2:22 PM

IPL 2026: LSG Playoffs Scenario: ಈ ಬಾರಿಯ ಐಪಿಎಲ್​ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡವು ಈವರೆಗೆ 9 ಪಂದ್ಯಗಳನ್ನಾಡಿದೆ. ಈ 9 ಪಂದ್ಯಗಳಲ್ಲಿ ಗೆದ್ದಿರುವುದು ಕೇವಲ 2 ಮ್ಯಾಚ್​ಗಳಲ್ಲಿ ಮಾತ್ರ. ಇನ್ನುಳಿದ 7 ಪಂದ್ಯಗಳಲ್ಲಿ ಸೋಲನುಭವಿಸಿದೆ. ಈ ಸೋಲುಗಳ ಹೊರತಾಗಿಯೂ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಮುಂದಿನ ಪಂದ್ಯಗಳ ಮೂಲಕ ಪ್ಲೇಆಫ್​ಗೇರಬಹುದು.

1 / 5
IPL 2026: ಇಂಡಿಯನ್ ಪ್ರೀಮಿಯರ್ ಲೀಗ್​​ನಲ್ಲಿ ಸತತ ಸೋಲುಗಳಿಂದ ಕಂಗೆಟ್ಟಿರುವ  ಲಕ್ನೋ ಸೂಪರ್ ಜೈಂಟ್ಸ್ (LSG) ಇದೀಗ ಅಂಕ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಇತ್ತ ಪಾಯಿಂಟ್ಸ್​ ಟೇಬಲ್​ನಲ್ಲಿ ಕೊನೆಯ ಸ್ಥಾನದಲ್ಲಿದ್ದರೂ ಎಲ್​ಎಸ್​ಜಿ ಪಡೆ ಪ್ಲೇಆಫ್ ರೇಸ್​ನಿಂದ ಹೊರಬಿದ್ದಿಲ್ಲ ಎಂಬುದು ವಿಶೇಷ.

2 / 5
ಏಕೆಂದರೆ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಇನ್ನೂ 5 ಪಪಂದ್ಯಗಳು ಬಾಕಿ ಇದೆ. ಈ ಐದು ಪಂದ್ಯಗಳು ಎಲ್​​ಎಸ್​ಜಿ ಪಾಲಿಗೆ ನಿರ್ಣಾಯಕ. ಅಂದರೆ ಈ ಐದು ಮ್ಯಾಚ್​​ಗಳಲ್ಲಿ ಜಯ ಸಾಧಿಸುವುದು ಅನಿವಾರ್ಯ. ಆದರೆ ಈ ಗೆಲುವುಗಳು ಮಾತ್ರ ಲಕ್ನೋ ಸೂಪರ್ ಜೈಂಟ್ಸ್​ ತಂಡದ ಪ್ಲೇಆಫ್ ಸ್ಥಾನ ನಿರ್ಧರಿಸುವುದಿಲ್ಲ. ಬದಲಾಗಿ ಉಳಿದ ತಂಡಗಳ ಫಲಿತಾಂಶಗಳು ಕೂಡ ಇಲ್ಲಿ ಗಣನೆಗೆ ಬರಲಿದೆ. ಅದರಂತೆ ಲಕ್ನೋ ಸೂಪರ್ ಜೈಂಟ್ಸ್ ಹೇಗೆ ಪ್ಲೇಆಫ್​​ಗೇರಬಹುದು ಎಂದು ನೋಡುವುದಾದರೆ...

3 / 5
ಎಲ್ಲಾ ಪಂದ್ಯಗಳಲ್ಲೂ ಗೆಲುವು: ಲಕ್ನೋ ಸೂಪರ್ ಜೈಂಟ್ಸ್​ ತಂಡವು ಮುಂದಿನ 5 ಪಂದ್ಯಗಳಲ್ಲೂ ಗೆಲುವು ದಾಖಲಿಸಬೇಕು. ಈ ಐದು ಪಂದ್ಯಗಳ ಗೆಲುವಿನೊಂದಿಗೆ ಎಲ್​​ಎಸ್​​ಜಿ ತಂಡದ ಒಟ್ಟು ಅಂಕ 14ಕ್ಕೆ ಏರುತ್ತದೆ. ಅತ್ತ ಲೀಗ್ ಪಂದ್ಯಗಳ ಮುಕ್ತಾಯದ ವೇಳೆಗೆ ಅಂಕ ಪಟ್ಟಿಯಲ್ಲಿ 3ನೇ ಅಥವಾ 4ನೇ ಸ್ಥಾನ ಪಡೆಯುವ ತಂಡಗಳು 14 ಅಂಕಗಳನ್ನು ಪಡೆದಿದ್ದರೆ ಲಕ್ನೋ ಸೂಪರ್ ಜೈಂಟ್ಸ್​​ ತಂಡಕ್ಕೆ ಪ್ಲೇಆಫ್​​ಗೇರಲು ಅವಕಾಶ ದೊರೆಯಲಿದೆ.

4 / 5
ನೆಟ್ ರನ್ ರೇಟ್ ಲೆಕ್ಕಾಚಾರ: ಲಕ್ನೋ ಸೂಪರ್ ಜೈಂಟ್ಸ್​​ ತಂಡದ ರನ್ ರೇಟ್ ಸದ್ಯ ಲೀಗ್‌ನಲ್ಲಿಯೇ ಅತ್ಯಂತ ಕಳಪೆಯಾಗಿದೆ (-1.076). ಹೀಗಾಗಿ, ಮುಂದಿನ ಪಂದ್ಯಗಳನ್ನು ಕೇವಲ ಗೆದ್ದರೆ ಸಾಲದು, ದೊಡ್ಡ ಅಂತರದಿಂದ ಗೆಲ್ಲುವ ಮೂಲಕ ರನ್ ರೇಟ್ ಅನ್ನು ಧನಾತ್ಮಕವಾಗಿಸಿಕೊಳ್ಳಬೇಕಿದೆ. ಅದರಂತೆ ಅಂಕ ಪಟ್ಟಿಯಲ್ಲಿ 3ನೇ ಅಥವಾ 4ನೇ ಸ್ಥಾನ ಪಡೆಯುವ ತಂಡಗಳು 14 ಅಂಕಗಳನ್ನು ಹೊಂದಿದ್ದರೆ, ಉತ್ತಮ ನೆಟ್ ರನ್​ ರೇಟ್​ + 14 ಅಂಕಗಳೊಂದಿಗೆ ಲಕ್ನೋ ಸೂಪರ್ ಜೈಂಟ್ಸ್​ ಪ್ಲೇಆಫ್​ಗೇರಬಹುದು.

5 / 5
ಇತರ ತಂಡಗಳ ಫಲಿತಾಂಶದ ಮೇಲೆ ಅವಲಂಬನೆ:  ಮೇಲೆ ಹೇಳಿದಂತೆ ಲಕ್ನೋ ಸೂಪರ್ ಜೈಂಟ್ಸ್​ ತಂಡವು 14 ಅಂಕಗಳನ್ನು ಪಡೆದರೆ ನೇರವಾಗಿ ಪ್ಲೇ-ಆಫ್ ಪ್ರವೇಶಿಸುವುದಿಲ್ಲ. ಬದಲಾಗಿ ಅಂಕ ಪಟ್ಟಿಯಲ್ಲಿ ಟಾಪ್​-4 ನಲ್ಲಿರುವ ತಂಡಗಳಲ್ಲಿ ಕನಿಷ್ಠ ಒಂದು ತಂಡ 14 ಕ್ಕಿಂತ ಹೆಚ್ಚಿನ ಅಂಕಗಳನ್ನು ಪಡೆಯಬಾರದು ಎಂಬುದನ್ನು ಎದುರು ನೋಡಬೇಕು. ಪ್ರಸ್ತುತ ಅಂಕ ಪಟ್ಟಿಯಲ್ಲಿ ಟಾಪ್-4 ನಲ್ಲಿರುವ ಪಂಜಾಬ್ ಕಿಂಗ್ಸ್, ಆರ್​ಸಿಬಿ, ಎಸ್​ಆರ್​​ಹೆಚ್​ ಅಥವಾ ಆರ್​​ಆರ್​ ತಂಡಗಳಲ್ಲಿ ಒಂದು ತಂಡವು ಮುಂದಿನ ಪಂದ್ಯಗಳಲ್ಲಿ ಸತತವಾಗಿ ಸೋಲುವುದು ಕೂಡ ಲಕ್ನೋ ಸೂಪರ್ ಜೈಂಟ್ಸ್​ ಪಾಲಿಗೆ ಅನಿವಾರ್ಯ. ಹೀಗಾದಲ್ಲಿ ಮಾತ್ರ ಲಕ್ನೋ ಸೂಪರ್ ಜೈಂಟ್ಸ್​ ಪ್ಲೇಆಫ್​ಗೇರಬಹುದು.

Follow Us