
IPL 2026: ಇಂಡಿಯನ್ ಪ್ರೀಮಿಯರ್ ಲೀಗ್ನ 67ನೇ ಪಂದ್ಯದಲ್ಲಿ ಸನ್ರೈರ್ಸ್ ಹೈದರಾಬಾದ್ (SRH) ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಸೋಲನುಭವಿಸಿದೆ. ಈ ಸೋಲಿನೊಂದಿಗೆ ಅತ್ಯಂತ ಹೀನಾಯ ದಾಖಲೆಯೊಂದನ್ನು ಸಹ ತಮ್ಮದಾಗಿಸಿಕೊಂಡಿದ್ದಾರೆ. (PC: IPL)

ಹೈದರಾಬಾದ್ನ ರಾಜೀವ್ ಗಾಂಧಿ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಸನ್ರೈಸರ್ಸ್ ಹೈದರಾಬಾದ್ ತಂಡವು 20 ಓವರ್ಗಳಲ್ಲಿ 255 ರನ್ ಕಲೆಹಾಕಿದ್ದರು. ಈ ಬೃಹತ್ ಮೊತ್ತದೊಂದಿಗೆ ಸನ್ರೈಸರ್ಸ್ ಹೈದರಾಬಾದ್ ಒಂದೇ ತಂಡದ ವಿರುದ್ಧ 2 ಬಾರಿ 250+ ಸ್ಕೋರ್ಗಳಿಸಿದ ವಿಶೇಷ ದಾಖಲೆ ಬರೆಯಿತು. (PC: IPL)

ಅಂದರೆ ಐಪಿಎಲ್ ಇತಿಹಾಸದಲ್ಲಿ ಯಾವುದೇ ತಂಡ ಒಂದೇ ತಂಡದ ವಿರುದ್ಧ 2 ಬಾರಿ 250+ ಸ್ಕೋರ್ ನೀಡಿರಲಿಲ್ಲ. ಆದರೆ ಆರ್ಸಿಬಿ ಬೌಲರ್ಗಳು ಎಸ್ಆರ್ಹೆಚ್ ವಿರುದ್ಧ ದಂಡಿಸಿಕೊಳ್ಳುವ ಮೂಲಕ ಹೀನಾಯ ದಾಖಲೆಯೊಂದನ್ನು ತಮ್ಮದಾಗಿಸಿಕೊಂಡಿದ್ದಾರೆ. (PC: IPL)

ಈ ಮೊದಲು 2024 ರಲ್ಲಿ ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಬಿರುಗಾಳಿ ಬ್ಯಾಟಿಂಗ್ನೊಂದಿಗೆ ನೆರವಿನಿಂದ SRH ತಂಡ ಐಪಿಎಲ್ ಇತಿಹಾಸದ ಸಾರ್ವಕಾಲಿಕ ಗರಿಷ್ಠ ಮೊತ್ತವಾದ 287 ರನ್ ಸಿಡಿಸಿತ್ತು. ಇದೀಗ ಮತ್ತೊಮ್ಮೆ ಆರ್ಸಿಬಿ ವಿರುದ್ಧ ಅಬ್ಬರಿಸುವ ಸನ್ರೈಸರ್ಸ್ ಹೈದರಾಬಾದ್ 255 ರನ್ ಚಚ್ಚಿದ್ದಾರೆ. (PC: IPL)

ಈ ಸ್ಕೋರ್ಗಳೊಂದಿಗೆ ಐಪಿಎಲ್ನಲ್ಲಿ ಒಂದೇ ತಂಡದ ವಿರುದ್ಧ 2 ಬಾರಿ 250+ ಸ್ಕೋರ್ ನೀಡಿದ ಹೀನಾಯ ದಾಖಲೆಯನ್ನು ಆರ್ಸಿಬಿ ತನ್ನಾಗಿಸಿಕೊಂಡಿದೆ. ಅಷ್ಟೇ ಅಲ್ಲದೆ ಐಪಿಎಲ್ ಇತಿಹಾಸದಲ್ಲಿ ಮೂರು ಬಾರಿ 250+ ಸ್ಕೋರ್ ಹೊಡೆಸಿಕೊಂಡ ಅನಗತ್ಯ ದಾಖಲೆ ಪಟ್ಟಿಯಲ್ಲಿ ಆರ್ಸಿಬಿ ಹೆಸರು ಕಾಣಿಸಿಕೊಂಡಿದೆ. (PC: IPL)

ಒಟ್ಟಾರೆಯಾಗಿ ಹೇಳುವುದಾದರೆ ಐಪಿಎಲ್ನ ಬಲಿಷ್ಠ ಬೌಲಿಂಗ್ ಪಡೆಯನ್ನು ಹೊಂದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸನ್ರೈಸರ್ಸ್ ಹೈದರಾಬಾದ್ ಬ್ಯಾಟರ್ಗಳು ಮತ್ತೊಮ್ಮೆ ಧೂಳೀಪಟ ಮಾಡಿದ್ದಾರೆ. ಈ ಮೂಲಕ ಮೊದಲ ಸೋಲಿನ ಸೇಡನ್ನು 55 ರನ್ಗಳ ಭರ್ಜರಿ ಜಯದೊಂದಿಗೆ ತೀರಿಸಿಕೊಂಡಿದ್ದಾರೆ. (PC: IPL)