
IPL 2026: ಐಪಿಎಲ್ 2026ರ ಪ್ಲೇ-ಆಫ್ಸ್ ಸನಿಹದಲ್ಲಿರುವಾಗಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡಕ್ಕೆ ಸಣ್ಣ ಆಘಾತ ಎದುರಾಗಿದೆ. ಆರ್ಸಿಬಿ ತಂಡದ ಆರಂಭಿಕ ದಾಂಡಿಗ ಗಾಯಕ್ಕೆ ತುತ್ತಾಗಿದ್ದು, ಹೀಗಾಗಿ ಮುಂದಿನ ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ ಎಂದು ತಿಳಿದು ಬಂದಿದೆ. (PC: IPL)

ಹೌದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಯುವ ಎಡಗೈ ದಾಂಡಿಗ ಜೇಕಬ್ ಬೆಥೆಲ್ ಅವರ ಬೆರಳಿಗೆ ಗಾಯವಾಗಿದೆ. ಈ ಗಾಯದ ಕಾರಣ ಅವರು ಅವರು ಮೇ 22 ರಂದು ಸನ್‌ರೈಸರ್ಸ್ ಹೈದರಾಬಾದ್ (SRH) ವಿರುದ್ಧದ ಪಂದ್ಯದಿಂದ ಹೊರಗುಳಿದಿದ್ದರು. (PC: IPL)

ಇದೀಗ ಈ ಗಾಯದ ಕುರಿತಾಗಿ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಜೇಕಬ್ ಬೆಥೆಲ್ ಕಡೆಯಿಂದ ಮಾಹಿತಿ ಕೇಳಿದ್ದಾರೆ. ಅಲ್ಲದೆ ಗಾಯವು ಗಂಭೀರವಾಗಿದ್ದರೆ ಇಂಗ್ಲೆಂಡ್ಗೆ ಮರಳುವಂತೆ ಸೂಚಿಸಿದ್ದಾರೆ. ಹೀಗಾಗಿ ಆರ್ಸಿಬಿ ತಂಡದ ಪ್ಲೇಆಫ್ ಪಂದ್ಯಗಳಿಗೆ ಬೆಥೆಲ್ ಅಲಭ್ಯರಾಗುವುದು ಬಹುತೇಕ ಖಚಿತ. (PC: IPL)

ಇತ್ತ ಜೇಕಬ್ ಬೆಥೆಲ್ ಅನುಪಸ್ಥಿತಿಯಲ್ಲಿ ಎಸ್ಆರ್ಹೆಚ್ ವಿರುದ್ಧ ವೆಂಕಟೇಶ್ ಅಯ್ಯರ್ ಆರಂಭಿಕನಾಗಿ ಕಾಣಿಸಿಕೊಂಡಿದ್ದರು. ಇದಾಗ್ಯೂ ಅವರು ಪ್ಲೇಆಫ್ ಪಂದ್ಯಗಳಲ್ಲಿ ಓಪನರ್ ಆಗಿ ಕಣಕ್ಕಿಳಿಯುವ ಸಾಧ್ಯತೆ ಇಲ್ಲ. ಏಕೆಂದರೆ ಮುಂದಿನ ಪಂದ್ಯಗಳಲ್ಲಿ ಫಿಲ್ ಸಾಲ್ಟ್ ಕಣಕ್ಕಿಳಿಯುವ ಸಾಧ್ಯತೆಯಿದೆ. (PC: IPL)

ಸದ್ಯ ಲೀಗ್ ಪಂದ್ಯಗಳನ್ನು ಮುಗಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಪ್ಲೇಆಫ್ ಹಂತದಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಎದುರಿಸಲಿದೆ. ಮೇ 26 ರಂದು ಧರ್ಮಶಾಲಾದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಆರ್ಸಿಬಿ ಗೆದ್ದರೆ ನೇರವಾಗಿ ಫೈನಲ್ಗೇರಬಹುದು. ಅದರಂತೆ ಕ್ವಾಲಿಫೈಯರ್-1 ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿ ಆರ್ಸಿಬಿ ನೇರವಾಗಿ ಫೈನಲ್ಗೆ ಎಂಟ್ರ ಕೊಡಲಿದೆಯಾ ಕಾದು ನೋಡಬೇಕಿದೆ. (PC: IPL)