IPL 2026: RCB ತಂಡಕ್ಕೆ ಇಂಗ್ಲೆಂಡ್ ವೇಗಿ ಎಂಟ್ರಿ

Updated on: May 21, 2026 | 2:07 PM

Richard Gleeson: 38 ವರ್ಷದ ರಿಚರ್ಡ್ ಗ್ಲೀಸನ್ ಇಂಗ್ಲೆಂಡ್ ಪರ 6 ಟಿ20 ಪಂದ್ಯಗಳನ್ನಾಡಿದ್ದಾರೆ. ಈ ವೇಳೆ 9 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಹಾಗೆಯೇ ಈವರೆಗೆ 141 ಟಿ20 ಪಂದ್ಯಗಳನ್ನಾಡಿರುವ ಗ್ಲೀಸನ್ ಪಡೆದಿರುವುದು ಬರೋಬ್ಬರಿ 170 ವಿಕೆಟ್​ಗಳು. ಅಲ್ಲದೆ ಟಿ20 ಕ್ರಿಕೆಟ್​ನಲ್ಲಿ ಈವರೆಗೆ 2867 ಎಸೆತಗಳನ್ನು ಎಸೆದಿರುವ ಅವರು ಕೇವಲ 3909 ರನ್ ಮಾತ್ರ ನೀಡಿದ್ದಾರೆ.

1 / 8
IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ ಮೊದಲ ಸುತ್ತಿನ ಪಂದ್ಯಗಳು ಮುಕ್ತಾಯದ ಹಂತಕ್ಕೆ ಬಂದು ನಿಂತಿದೆ. ಈಗಾಗಲೇ 13 ಪಂದ್ಯಗಳನ್ನಾಡಿರುವ ರಾಯಲ್ ಚಾಲೆಂಜರ್ಸ್ ಬೆಂಳೂರು ತಂಡಕ್ಕೆ ಇನ್ನುಳಿದಿರುವುದು ಒಂದು ಲೀಗ್ ಮ್ಯಾಚ್ ಮಾತ್ರ. ಈ ಪಂದ್ಯಕ್ಕೂ ಮುನ್ನ ಆರ್​ಸಿಬಿ ಪಡೆಗೆ ಇಂಗ್ಲೆಂಡ್ ವೇಗಿ ಎಂಟ್ರಿ ಕೊಟ್ಟಿದ್ದಾರೆ. (PC: IPL)

2 / 8
ಇಂಗ್ಲೆಂಡ್ ತಂಡದ 38 ವರ್ಷದ ಅನುಭವಿ ವೇಗಿ ರಿಚರ್ಡ್ ಗ್ಲೀಸನ್ ಅವರನ್ನು ಇತ್ತೀಚೆಗೆ ಆರ್​ಸಿಬಿ ತಂಡಕ್ಕೆ ಆಯ್ಕೆ ಮಾಡಲಾಗಿತ್ತು. ಆರ್​ಸಿಬಿ ತಂಡದಲ್ಲಿದ್ದ ಶ್ರೀಲಂಕಾ ವೇಗಿ ನುವಾನ್ ತುಷಾರ ಗಾಯದ ಕಾರಣ ಹೊರಗುಳಿದಿದ್ದು, ಅವರ ಬದಲಿಗೆ ಗ್ಲೀಸನ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿತ್ತು. (PC: IPL)

3 / 8
ಅದರಂತೆ ಇದೀಗ ರಿಚರ್ಡ್ ಗ್ಲೀಸನ್ ಆರ್​ಸಿಬಿ ತಂಡವನ್ನು ಕೂಡಿಕೊಂಡಿದ್ದಾರೆ. ಅಲ್ಲದೆ ಜೇಕಬ್ ಡಫಿ ಜೊತೆಗೂಡಿ ಬೌಲಿಂಗ್ ಅಭ್ಯಾಸದಲ್ಲೂ ನಿರತರಾಗಿದ್ದಾರೆ. ಇದಾಗ್ಯೂ ಸನ್​ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಗ್ಲೀಸನ್​ಗೆ ಚಾನ್ಸ್ ಸಿಗುವ ಸಾಧ್ಯತೆಯಿಲ್ಲ.  (PC: IPL)

4 / 8
ಏಕೆಂದರೆ ಜೇಕಬ್ ಬೆಥೆಲ್, ಟಿಮ್ ಡೇವಿಡ್, ರೊಮಾರಿಯೊ ಶೆಫರ್ಡ್ ಹಾಗೂ ಜೋಶ್ ಹೇಝಲ್​ವುಡ್ ಕಣಕ್ಕಿಳಿಯುತ್ತಿರುವ ಕಾರಣ ಕಿವೀಸ್ ವೇಗಿ ಜೇಕಬ್ ಡಫಿ ಬೆಂಚ್ ಕಾಯುತ್ತಿದ್ದಾರೆ. ಒಂದು ವೇಳೆ ಆಡುವ ಬಳಗದಲ್ಲಿ ಬದಲಾವಣೆ ಮಾಡಿದರೆ, ಡಫಿಗೆ ಚಾನ್ಸ್​ ಸಿಗುವ ಸಾಧ್ಯತೆ ಹೆಚ್ಚು.  (PC: IPL)

5 / 8
ಇದಾಗ್ಯೂ ಕೆಲವೇ ಪಂದ್ಯಗಳು ಮಾತ್ರ ಬಾಕಿ ಇರುವಾಗ ಗ್ಲೀಸನ್​ ಅವರನ್ನು ಆಯ್ಕೆ ಮಾಡಿಕೊಂಡಿರುವುದು ಯಾಕೆ ಎಂಬ ಪ್ರಶ್ನೆ ಮೂಡುವುದು ಸಹಜ. ಇದಕ್ಕೆ ಉತ್ತರ ಬ್ಯಾಕಪ್ ಪ್ಲೇಯರ್. ಅಂದರೆ ಜೋಶ್ ಹೇಝಲ್​ವುಡ್ ಫಿಟ್​ನೆಸ್ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಅತ್ತ ಡಫಿ ಕೂಡ ಸಂಪೂರ್ಣ ಫಿಟ್​ ಆಗಿಲ್ಲ ಎಂಬ ಮಾತುಗಳು ಕೂಡ ಕೇಳಿ ಬರುತ್ತಿದೆ. (PC: IPL)

6 / 8
ಒಂದು ವೇಳೆ ಈ ಇಬ್ಬರು ಪ್ರಮುಖ ವೇಗಿಗಳು ಗಾಯಗೊಂಡರೆ ಕಣಕ್ಕಿಳಿಸಲು ಬ್ಯಾಕಪ್ ಆಗಿ ರಿಚರ್ಡ್ ಗ್ಲೀಸನ್ ಅವರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಇಲ್ಲಿ ಗ್ಲೀಸನ್ ಅವರನ್ನೇ ಯಾಕೆ ಆಯ್ಕೆ ಮಾಡಿಕೊಂಡರು? ಎಂಬ ಪ್ರಶ್ನೆಗೆ ಅವರು ಇತ್ತೀಚಿನ ಪಾಕಿಸ್ತಾನ್ ಸೂಪರ್ ಲೀಗ್​ನಲ್ಲಿ ನೀಡಿದ  ಅದ್ಭುತ ಪ್ರದರ್ಶನ ಎಂಬ ಉತ್ತರ ಸಿಗುತ್ತಿದೆ. (PC: IPL)

7 / 8
ಇತ್ತೀಚೆಗೆ ಮುಕ್ತಾಯಗೊಂಡ ಪಿಎಸ್​ಎಲ್​​​ (PSL 2026) ಟೂರ್ನಿಯಲ್ಲಿ ಇಸ್ಲಾಮಾಬಾದ್ ಯುನೈಟೆಡ್ ಪರ ಆಡಿದ್ದ ಗ್ಲೀಸನ್ ಕೇವಲ 7.14 ಎಕಾನಮಿ ರೇಟ್​ನಲ್ಲಿ ಮಾತ್ರ ರನ್ ಬಿಟ್ಟು ಕೊಟ್ಟಿದ್ದರು. ಅಲ್ಲದೆ ಆರ್​ಸಿಬಿ ತಂಡದ ಹೆಡ್ ಕೋಚ್ ಆ್ಯಂಡಿ ಫ್ಲವರ್ ಅವರಿಗೆ ರಿಚರ್ಡ್​ ಗ್ಲೀಸನ್ ಅವರ ಬೌಲಿಂಗ್ ಶೈಲಿಯ ಬಗ್ಗೆ ಚೆನ್ನಾಗಿ ತಿಳಿದಿದೆ. 38ರ ಹರೆಯದಲ್ಲೂ ಗ್ಲೀಸನ್ 140+ ಕಿಮೀ ವೇಗದಲ್ಲಿ ಬೌಲಿಂಗ್ ಮಾಡಬಲ್ಲರು. (PC: PSL)

8 / 8
ಹಠಾತ್ ಬೌನ್ಸ್ ಎಸೆಯಬಲ್ಲ ಸಾಮರ್ಥ್ಯ ಹೊಂದಿರುವ ಗ್ಲೀಸನ್, ಡೆತ್ ಓವರ್‌ಗಳಲ್ಲಿ ನಿಖರವಾದ ಯಾರ್ಕರ್ ಮತ್ತು ಶಾರ್ಪ್ ಬೌನ್ಸರ್‌ಗಳನ್ನು ಎಸೆಯುವ ಕೌಶಲ್ಯ ಹೊಂದಿದ್ದಾರೆ. ಹಾಗೆಯೇ ರಿಚರ್ಡ್​ ಗ್ಲೀಸನ್​ಗೆ ಐಪಿಎಲ್ ವಾತಾವರಣ ಹೊಸದಲ್ಲ. ಅವರು ಈ ಹಿಂದೆ ಚೆನ್ನೈ ಸೂಪರ್ ಕಿಂಗ್ಸ್ (2024) ಮತ್ತು ಮುಂಬೈ ಇಂಡಿಯನ್ಸ್ (2025) ತಂಡಗಳ ಭಾಗವಾಗಿದ್ದರು. ಹೀಗಾಗಿ ಐಪಿಎಲ್ ವಾತಾವರಣಕ್ಕೆ ಅವರು ಬೇಗನೆ ಹೊಂದಿಕೊಳ್ಳಲಿದ್ದಾರೆ. ಈ ಎಲ್ಲಾ ಕಾರಣಗಳಿಂದಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮ್ಯಾನೇಜ್ಮೆಂಟ್ ರಿಚರ್ಡ್ ಗ್ಲೀಸನ್ ಅವರನ್ನು ಆಯ್ಕೆ ಮಾಡಿಕೊಂಡಿದ್ದಾರೆ. (PC: BBL)

Follow Us