- TV9 Kannada Kannada News Photos Cricket Photos IPL 2027: T Natarajan Traded to SRH From Delhi Capitals
ಐಪಿಎಲ್ ಮಿನಿ ಹರಾಜಿಗೂ ಮುನ್ನ ಬಿಗ್ ಡೀಲ್!
ಇಂಡಿಯನ್ ಪ್ರೀಮಿಯರ್ ಲೀಗ್ 2027ರ ಮಿನಿ ಹರಾಜಿಗೂ ಮುನ್ನ ಕೆಲ ಫ್ರಾಂಚೈಸಿಗಳು ಆಟಗಾರರ ಟ್ರೇಡಿಂಗ್ ಪ್ರಕ್ರಿಯೆಗೆ ಕೈ ಹಾಕಿವೆ. ಇದರ ಭಾಗವಾಗಿ, ಸನ್ರೈಸರ್ಸ್ ಹೈದರಾಬಾದ್ ಫ್ರಾಂಚೈಸಿಯು ಡೆಲ್ಲಿ ಕ್ಯಾಪಿಟಲ್ಸ್ ಜೊತೆ ಬಿಗ್ ಡೀಲ್ ಕುದುರಿಸಿದೆ. ಈ ರಣತಂತ್ರದ ಒಪ್ಪಂದದ ಮೂಲಕ ಯಾರ್ಕರ್ ಸ್ಪೆಷಲಿಸ್ಟ್ ಟಿ. ನಟರಾಜನ್ ಮತ್ತೆ ಎಸ್ಆರ್ಹೆಚ್ ತಂಡಕ್ಕೆ ಹಿಂತಿರುಗಿದ್ದಾರೆ.
Updated on:Oct 15, 2026 | 9:39 AM

ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-20ರ ಮಿನಿ ಹರಾಜಿಗೂ ಮುನ್ನ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಸನ್ರೈಸರ್ಸ್ ಹೈದರಾಬಾದ್ ನಡುವೆ ಬಿಗ್ ಸ್ವಾಪ್ ಡೀಲ್ ಟ್ರೇಡ್ ನಡೆದಿದೆ. ಈ ಟ್ರೇಡ್ ಮೂಲಕ, ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿದ್ದ ಟಿ. ನಟರಾಜನ್ ಮತ್ತೆ ತಮ್ಮ ಹಳೆಯ ತಂಡವಾದ ಎಸ್ಆರ್ಹೆಚ್ಗೆ ಹಿಂತಿರುಗಿದ್ದಾರೆ. (PC: IPL)

ಐಪಿಎಲ್ 2025ರ ಮೆಗಾ ಹರಾಜಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಎಡಗೈ ವೇಗಿ ಟಿ. ನಟರಾಜನ್ ಅವರನ್ನು ಬರೋಬ್ಬರಿ ₹10.75 ಕೋಟಿ ನೀಡಿ ಖರೀದಿಸಿತ್ತು. ಅದಕ್ಕೂ ಮುನ್ನ, ಅಂದರೆ 2020 ರಿಂದ 2024 ರವರೆಗೆ ನಟರಾಜನ್ ಸನ್ರೈಸರ್ಸ್ ಹೈದರಾಬಾದ್ ತಂಡದ ಪ್ರಮುಖ ಬೌಲರ್ ಆಗಿದ್ದರು. ಇದೀಗ ಎರಡು ಸೀಸನ್ಗಳ ಬಳಿಕ ಎಸ್ಆರ್ಹೆಚ್ ಫ್ರಾಂಚೈಸಿಯು ಟ್ರೇಡಿಂಗ್ ಮೂಲಕ ನಟರಾಜನ್ ಅವರನ್ನು ಮತ್ತೆ ತನ್ನ ತಂಡಕ್ಕೆ ಸೇರಿಸಿಕೊಂಡಿರುವುದು ವಿಶೇಷ. (PC: IPL)

ಟಿ. ನಟರಾಜನ್ ಅವರ ಟ್ರೇಡಿಂಗ್ಗಾಗಿ ಸನ್ರೈಸರ್ಸ್ ಹೈದರಾಬಾದ್ ಫ್ರಾಂಚೈಸಿಯು ಯುವ ಲೆಗ್ ಸ್ಪಿನ್ನರ್ ಝೀಶನ್ ಅನ್ಸಾರಿ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಗೆ ಬಿಟ್ಟುಕೊಟ್ಟಿದೆ. ಕಳೆದ ಎರಡು ವರ್ಷಗಳಿಂದ ಎಸ್ಆರ್ಹೆಚ್ ತಂಡದ ಭಾಗವಾಗಿದ್ದ ಅನ್ಸಾರಿ, ಮುಂಬರುವ ಸೀಸನ್ನಲ್ಲಿ ಡೆಲ್ಲಿ ಪರ ಕಣಕ್ಕಿಳಿಯಲಿದ್ದಾರೆ. (PC: IPL)

ಇತ್ತ 2024ರ ಐಪಿಎಲ್ನಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡ ಫೈನಲ್ ತಲುಪುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಟಿ. ನಟರಾಜನ್ ಅವರ ಪುನರಾಗಮನವು ಎಸ್ಆರ್ಹೆಚ್ ತಂಡದ ಬೌಲಿಂಗ್ ಬಲವನ್ನು ಮತ್ತಷ್ಟು ಹೆಚ್ಚಿಸಿದೆ. ಅದರಲ್ಲೂ ಸನ್ರೈಸರ್ಸ್ ತಂಡದ ಪಾಲಿಗೆ ದೊಡ್ಡ ತಲೆನೋವಾಗಿದ್ದ ಡೆತ್ ಓವರ್ಗಳ ಸಮಸ್ಯೆಗೆ ನಟರಾಜನ್ ಅವರ ಯಾರ್ಕರ್ಗಳು ಹೊಸ ಪರಿಹಾರ ನೀಡಲಿವೆ. ಹೀಗಾಗಿ ಮುಂದಿನ ಸೀಸನ್ನಲ್ಲಿ ಸನ್ರೈಸರ್ಸ್ ಹೈದರಾಬಾದ್ ಕಡೆಯಿಂದ ಪ್ರಚಂಡ ಪ್ರದರ್ಶನವನ್ನು ನಿರೀಕ್ಷಿಸಬಹುದು. (PC: IPL)

ಸನ್ರೈಸರ್ಸ್ ಹೈದರಾಬಾದ್ ತಂಡ: ಪ್ಯಾಟ್ ಕಮ್ಮಿನ್ಸ್ (ನಾಯಕ), ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ, ಅನಿಕೇತ್ ವರ್ಮಾ, ಸ್ಮರಣ್ ರವಿಚಂದ್ರನ್, ಇಶಾನ್ ಕಿಶನ್, ಹೆನ್ರಿಕ್ ಕ್ಲಾಸೆನ್, ನಿತೀಶ್ ಕುಮಾರ್ ರೆಡ್ಡಿ, ಹರ್ಷ್ ದುಬೆ, ಕಮಿಂದು ಮೆಂಡಿಸ್, ಹರ್ಷಲ್ ಪಟೇಲ್, ಬ್ರೈಡನ್ ಕಾರ್ಸ್, ಜಯದೇವ್ ಉನದ್ಕತ್, ಎಶಾನ್ ಮಾಲಿಂಗ, ಶಿವಾಂಗ್ ಕುಮಾರ್, ಸಲೀಲ್ ಅರೋರ, ಸಾಕಿಬ್ ಹುಸೈನ್, ಓಂಕಾರ್ ತರ್ಮಲೆ, ಅಮಿತ್ ಕುಮಾರ್, ಪ್ರಫುಲ್ ಹಿಂಗೆ, ಕ್ರೇನ್ಸ್ ಫುಲೆಟ್ರಾ, ಲಿಯಾಮ್ ಲಿವಿಂಗ್ಸ್ಟೋನ್ಸ್, ಶಿವಂ ಮಾವಿ, ಜ್ಯಾಕ್ ಎಡ್ವರ್ಡ್ಸ್, ಟಿ. ನಟರಾಜನ್. (PC: IPL)
Published On - 9:37 am, Thu, 15 October 26

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.
Read More



