IPL 2026: ಸ್ಕ್ಯಾನಿಂಗ್​ಗೆ ಒಳಗಾಗಲಿರುವ ರೋಹಿತ್; ಮುಂದಿನ ಪಂದ್ಯಕ್ಕೆ ಡೌಟ್

Updated on: Apr 13, 2026 | 5:26 PM

Rohit Sharma Injury Scare: ಐಪಿಎಲ್ 2026ರಲ್ಲಿ ಮುಂಬೈ ಇಂಡಿಯನ್ಸ್ ಗೆಲುವಿಗಾಗಿ ಹೋರಾಡುತ್ತಿರುವಾಗಲೇ ಸ್ಟಾರ್ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಗಾಯಗೊಂಡಿರುವುದು ತಂಡಕ್ಕೆ ಮತ್ತಷ್ಟು ಹಿನ್ನಡೆಯಾಗಿದೆ. RCB ವಿರುದ್ಧದ ಪಂದ್ಯದಲ್ಲಿ ಬ್ಯಾಟಿಂಗ್ ವೇಳೆ ಗಾಯಗೊಂಡ ರೋಹಿತ್, ಸ್ಕ್ಯಾನಿಂಗ್‌ಗೆ ಒಳಗಾಗಲಿದ್ದಾರೆ. ಅವರ ಹ್ಯಾಮ್‌ಸ್ಟ್ರಿಂಗ್ ಗಾಯದ ಬಗ್ಗೆ ಆತಂಕವಿದ್ದು, ಮುಂದಿನ ಪಂದ್ಯಗಳಲ್ಲಿ ಅವರ ಲಭ್ಯತೆ ಮುಂಬೈ ತಂಡದ ಭವಿಷ್ಯದ ಮೇಲೆ ದೊಡ್ಡ ಪರಿಣಾಮ ಬೀರಲಿದೆ.

1 / 6
2026 ರ ಐಪಿಎಲ್‌ನಲ್ಲಿ 13 ವರ್ಷಗಳ ನಂತರ ತನ್ನ ಮೊದಲ ಪಂದ್ಯವನ್ನು ಗೆಲ್ಲುವ ಮೂಲಕ ಲೀಗ್ ಆರಂಭಿಸಿದ್ದ ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡ ಮತ್ತೊಂದು ಗೆಲುವಿಗಾಗಿ ಕಾಯಬೇಕಾಗಿ ಬಂದಿದೆ. ಮೊದಲ ಗೆಲುವಿನ ಬಳಿಕ ಆಡಿರುವ ಮೂರು ಪಂದ್ಯಗಳಲ್ಲಿ ಮುಂಬೈಗೆ ಗೆಲುವು ಧಕ್ಕಿಲ್ಲ. ಇದು ತಂಡವನ್ನು ಚಿಂತೆಗೀಡುಮಾಡಿದೆ.

2 / 6
ಇದೆಲ್ಲದರ ನಡುವೆ ಮುಂಬೈ ತಂಡಕ್ಕೆ ಮತ್ತೊಂದು ಸಂಕಷ್ಟ ಎದುರಾಗಿದೆ. ಅದೆನೆಂದರೆ ತಂಡದ ಮಾಜಿ ನಾಯಕ ಮತ್ತು ಸ್ಟಾರ್ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಇಂಜುರಿಗೆ ತುತ್ತಾಗಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಬ್ಯಾಟಿಂಗ್‌ ಮಾಡುವ ವೇಳೆ ಗಾಯಗೊಂಡ ರೋಹಿತ್ ಅರ್ಧದಲ್ಲೇ ಬ್ಯಾಟಿಂಗ್ ನಿಲ್ಲಿಸಿ ಡಗೌಟ್​ಗೆ ಮರಳಿದ್ದರು.

3 / 6
ತಂಡ ಸೋಲಿನ ಅಂಚಿನಲ್ಲಿದ್ದಾಗಲೂ ರೋಹಿತ್​ ಬ್ಯಾಟಿಂಗ್​ಗೆ ಬರಲಿಲ್ಲ. ಇದು ಅಭಿಮಾನಿಗಳನ್ನು ಆತಂಕಕ್ಕೀಡುಮಾಡಿದೆ. ರೋಹಿತ್ ಅವರ ಗಂಭೀರವಾಗಿರಬಹುದು ಎಂಬುದು ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದೆ. ಇದೆಲ್ಲದರ ನಡುವೆ ರೋಹಿತ್ ಇಂಜುರಿಗೆ ಸಂಬಂಧಿಸಿದಂತೆ ಮಾಹಿತಿ ಹೊರಬಿದ್ದಿದ್ದು, ರೋಹಿತ್ ಸ್ಕ್ಯಾನಿಂಗ್​ಗೆ ಒಳಗಾಗಲಿದ್ದಾರೆ ಎಂದು ವರದಿಯಾಗಿದೆ.

4 / 6
ಪಂದ್ಯದ ನಂತರ ರೋಹಿತ್ ಅವರ ಫಿಟ್ನೆಸ್ ಬಗ್ಗೆ ಮುಂಬೈ ಇಂಡಿಯನ್ಸ್ ಯಾವುದೇ ಮಾಹಿತಿ ನೀಡಲಿಲ್ಲ, ಆದರೆ ಅವರಿಗೆ ಮಂಡಿರಜ್ಜು ಗಾಯವಾಗಿದ್ದು, ಬ್ಯಾಟಿಂಗ್ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ತಿಳಿದುಬಂದಿದೆ. ಕ್ರಿಕ್‌ಬಜ್ ವರದಿಯ ಪ್ರಕಾರ, ಆಸ್ಪತ್ರೆಗೆ ದಾಖಲಾಗಲಿರುವ ರೋಹಿತ್ ಮಂಡಿರಜ್ಜು ಸ್ಕ್ಯಾನ್ನಿಂಗ್​ಗೆ ಒಳಗಾಗಲಿದ್ದಾರೆ. ಸ್ಕ್ಯಾನಿಂಗ್ ವರದಿ ಬಂದ ಬಳಿಕವಷ್ಟೆ ರೋಹಿತ್ ಮುಂದಿನ ಪಂದ್ಯದಲ್ಲಿ ಆಡುವ ಬಗ್ಗೆ ಮಾಹಿತಿ ಹೊರಬೀಳಲಿದೆ.

5 / 6
ಮುಂಬೈ ತಮ್ಮ ಮುಂದಿನ ಪಂದ್ಯವನ್ನು ಏಪ್ರಿಲ್ 16 ರಂದು ಪಂಜಾಬ್ ಕಿಂಗ್ಸ್ ವಿರುದ್ಧ ಆಡಲಿದೆ. ಹೀಗಾಗಿ ಆ ಪಂದ್ಯಕ್ಕೂ ಮೊದಲು ರೋಹಿತ್ ಫಿಟ್ ಆಗಲಿ ಎಂಬುದು ಅಭಿಮಾನಿಗಳ ಆಶಯವಾಗಿದೆ. ಇನ್ನು ಗಾಯಗೊಳ್ಳುವ ಮೊದಲು ಉತ್ತಮವಾಗಿ ಬ್ಯಾಟ್ ಬೀಸುತ್ತಿದ್ದ ರೋಹಿತ್ ಶರ್ಮಾ 13 ಎಸೆತಗಳಲ್ಲಿ 19 ರನ್ ಗಳಿಸಿದ್ದರು.

6 / 6
ಪ್ರಸ್ತುತ ಆವೃತ್ತಿಯಲ್ಲಿ ಲಯದಲ್ಲಿ ಕಾಣಿಸಿಕೊಂಡಿರುವ ರೋಹಿತ್ ಮೊದಲ ಪಂದ್ಯದಲ್ಲಿ 83 ರನ್‌ಗಳ ಇನ್ನಿಂಗ್ಸ್ ಆಡುವ ಮೂಲಕ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ಆದಾಗ್ಯೂ, ಮುಂದಿನ ಎರಡು ಪಂದ್ಯಗಳಲ್ಲಿ ಈ ಪ್ರದರ್ಶನವನ್ನು ಪುನರಾವರ್ತಿಸಲು ಅವರು ವಿಫಲರಾದರು. ಇಲ್ಲಿಯವರೆಗೆ ನಾಲ್ಕು ಇನ್ನಿಂಗ್ಸ್‌ಗಳನ್ನಾಡಿರುವ ರೋಹಿತ್ ಒಂದು ಅರ್ಧಶತಕ ಸೇರಿದಂತೆ 137 ರನ್ ಗಳಿಸಿದ್ದಾರೆ.

Follow Us