IPL 2026: ಹೀನಾಯ ಸೋಲಿನ ನಡುವೆಯೂ ದಾಖಲೆ ಬರೆದ ಇಶಾನ್ ಕಿಶನ್

Updated on: Mar 29, 2026 | 4:55 PM

Ishan Kishan IPL 3000 Runs: ಆರ್‌ಸಿಬಿ ವಿರುದ್ಧ 80 ರನ್ ಗಳಿಸಿ ಮಿಂಚಿದ ಇಶಾನ್ ಕಿಶನ್ ಐಪಿಎಲ್‌ನಲ್ಲಿ 3000 ರನ್ ಪೂರೈಸಿದ್ದಾರೆ. ಕೇವಲ 2180 ಎಸೆತಗಳಲ್ಲಿ ಈ ಮೈಲಿಗಲ್ಲು ತಲುಪಿದ ಕಿಶನ್, ಕೆಎಲ್ ರಾಹುಲ್‌ರನ್ನು ಹಿಂದಿಕ್ಕಿ ಆರನೇ ಭಾರತೀಯ ಹಾಗೂ ನಾಲ್ಕನೇ ವಿಕೆಟ್‌ಕೀಪರ್ ಎನಿಸಿದ್ದಾರೆ. ಅದ್ಭುತ ಫಾರ್ಮ್ ಮುಂದುವರಿಸಿದ ಕಿಶನ್, ತಮ್ಮ ಬ್ಯಾಟಿಂಗ್ ಮೂಲಕ ಐಪಿಎಲ್‌ನಲ್ಲಿ ಪ್ರಮುಖ ದಾಖಲೆ ಬರೆದಿದ್ದಾರೆ.

1 / 6
ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡ ಹೀನಾಯ ಸೋಲು ಕಂಡಿರಬಹುದು. ನಾಯಕನಾಗಿ ಇಶಾನ್ ಕಿಶನ್​ಗೆ ಗೆಲುವಿನ ಆರಂಭವೂ ಸಿಗದಿರಬಹುದು. ಆದರೆ ಆಟಗಾರನಾಗಿ ಇಶಾನ್ ಕಿಶನ್ ತಮ್ಮ ಅದ್ಭುತ ಫಾರ್ಮ್​ ಅನ್ನು ಐಪಿಎಲ್​ನಲ್ಲೂ ಮುಂದುವರೆಸಿದ್ದಾರೆ.

ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡ ಹೀನಾಯ ಸೋಲು ಕಂಡಿರಬಹುದು. ನಾಯಕನಾಗಿ ಇಶಾನ್ ಕಿಶನ್​ಗೆ ಗೆಲುವಿನ ಆರಂಭವೂ ಸಿಗದಿರಬಹುದು. ಆದರೆ ಆಟಗಾರನಾಗಿ ಇಶಾನ್ ಕಿಶನ್ ತಮ್ಮ ಅದ್ಭುತ ಫಾರ್ಮ್​ ಅನ್ನು ಐಪಿಎಲ್​ನಲ್ಲೂ ಮುಂದುವರೆಸಿದ್ದಾರೆ.

2 / 6

ಈ ಹಿಂದೆ ನಡೆದಿದ್ದ ಟಿ20 ವಿಶ್ವಕಪ್​ನಲ್ಲಿ ಟೀಂ ಇಂಡಿಯಾ ಪರ ಸ್ಥಿರ ಪ್ರದರ್ಶನ ನೀಡಿದ್ದ ಇಶಾನ್ ಕಿಶನ್ ಇದೀಗ ಆರಂಭವಾಗಿರುವ ಐಪಿಎಲ್​ನಲ್ಲೂ ಮುಂದುವರೆಸಿದ್ದಾರೆ. ಆಡಿದ ಮೊದಲ ಪಂದ್ಯದಲ್ಲೇ ಒತ್ತಡದ ನಡುವೆಯೂ ತನ್ನ ನೈಜ ಆಟವನ್ನಾಡಿದ ಕಿಶನ್, ಕೇವಲ 38 ಎಸೆತಗಳಲ್ಲಿ 80 ರನ್ ಬಾರಿಸಿದರು. ಈ ಮೂಲಕ ಕಿಶನ್ ಅಪರೂಪದ ದಾಖಲೆಯನ್ನು ನಿರ್ಮಿಸಿದರು.

3 / 6

ಆರ್‌ಸಿಬಿ ವಿರುದ್ಧ 80 ರನ್ ಇನ್ನಿಂಗ್ಸ್​ ಆಡಿದ ಇಶಾನ್ ಕಿಶನ್ ಈ ಮೂಲಕ ಐಪಿಎಲ್‌ನಲ್ಲಿ 3000 ರನ್ ಪೂರ್ಣಗೊಳಿಸಿದ್ದಾರೆ. ಐಪಿಎಲ್‌ನಲ್ಲಿ ಇದುವರೆಗೆ 120 ಪಂದ್ಯಗಳ 113 ಇನ್ನಿಂಗ್ಸ್‌ಗಳನ್ನಾಡಿರುವ ಕಿಶನ್ 3078 ರನ್ ಗಳಿಸಿದ್ದಾರೆ. ಇದರೊಂದಿಗೆ ಐಪಿಎಲ್‌ನಲ್ಲಿ ಕಡಿಮೆ ಎಸೆತಗಳಲ್ಲಿ 3000 ರನ್ ಗಳಿಸಿದ ಆರನೇ ಭಾರತೀಯ ಮತ್ತು ನಾಲ್ಕನೇ ವಿಕೆಟ್‌ಕೀಪರ್ ಎನಿಸಿಕೊಂಡಿದ್ದಾರೆ.

4 / 6

ಅಂದರೆ ಇಶಾನ್ ಕಿಶನ್ ಐಪಿಎಲ್‌ನಲ್ಲಿ ಇದುವರೆಗೆ 2180 ಎಸೆತಗಳನ್ನು ಎದುರಿಸಿದ್ದು, 3000 ರನ್​ಗಳ ಗಡಿ ದಾಟಿದ್ದಾರೆ. ಈ ಮೂಲಕ, 2203 ಎಸೆತಗಳಲ್ಲಿ 3000 ಐಪಿಎಲ್ ರನ್ ಗಳಿಸಿದ್ದ ಕನ್ನಡಿಗ ಕೆಎಲ್ ರಾಹುಲ್ ಅವರನ್ನು ಏಳನೇ ಸ್ಥಾನಕ್ಕೆ ತಳ್ಳಿದ್ದಾರೆ.

5 / 6

ಪ್ರಸ್ತುತ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ರಿಷಭ್ ಪಂತ್ 2028 ಎಸೆತಗಳಲ್ಲಿ 3000 ರನ್ ಗಳಿಸಿದ್ದಾರೆ. ನಂತರದ ಸ್ಥಾನದಲ್ಲಿರುವ ಯೂಸುಫ್ ಪಠಾಣ್ 2082 ಎಸೆತಗಳಲ್ಲಿ, ಸೂರ್ಯಕುಮಾರ್ ಯಾದವ್ 2130 ಎಸೆತಗಳಲ್ಲಿ, ಸುರೇಶ್ ರೈನಾ 2135 ಎಸೆತಗಳಲ್ಲಿ ಮತ್ತು ಧೋನಿ 2152 ಎಸೆತಗಳಲ್ಲಿ 3000 ರನ್​ಗಳ ಗಡಿ ದಾಟಿದ್ದಾರೆ.

6 / 6

ಇದರೊಂದಿಗೆ ಕಡಿಮೆ ಎಸೆತಗಳಲ್ಲಿ 3000 ಐಪಿಎಲ್ ರನ್ ಗಳಿಸಿದ ಭಾರತದ ವಿಕೆಟ್ ಕೀಪರ್​ಗಳ ಪಟ್ಟಿಯಲ್ಲೂ ಪಂತ್, ಧೋನಿ ಮತ್ತು ಕೆಎಲ್ ರಾಹುಲ್ ನಂತರ ಇಶಾನ್ ಕಿಶನ್ ನಾಲ್ಕನೇ ಸ್ಥಾನದಲ್ಲಿದ್ದಾರೆ.

Loading...
Unable to load recommendations.
Follow Us