AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs ZIM: ಶತಕ ವಂಚಿತರಾದರೂ ಕಿಂಗ್ ಕೊಹ್ಲಿಯ ದಾಖಲೆ ಮುರಿದ ಇಶಾನ್ ಕಿಶನ್

Ishan Kishan's Stellar 81: ಜಿಂಬಾಬ್ವೆ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಇಶಾನ್ ಕಿಶನ್ ಕೇವಲ 44 ಎಸೆತಗಳಲ್ಲಿ 81 ರನ್ ಗಳಿಸಿ ಶತಕ ವಂಚಿತರಾದರು. ಈ ಅದ್ಭುತ ಇನ್ನಿಂಗ್ಸ್ ಮೂಲಕ ಕಿಶನ್, ಒಂದೇ ವರ್ಷದಲ್ಲಿ ಅತಿ ಹೆಚ್ಚು ಅಂತರರಾಷ್ಟ್ರೀಯ ಟಿ20 ರನ್ ಗಳಿಸಿದವರ ಪಟ್ಟಿಯಲ್ಲಿ ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿ ಹೊಸ ದಾಖಲೆ ಬರೆದಿದ್ದಾರೆ.

ಪೃಥ್ವಿಶಂಕರ
|

Updated on: Jul 25, 2026 | 9:32 PM

Share
ಹರಾರೆಯಲ್ಲಿ ನಡೆದ ಜಿಂಬಾಬ್ವೆ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಇಶಾನ್ ಕಿಶನ್ 81 ರನ್​ಗಳ ಇನ್ನಿಂಗ್ಸ್ ಆಡಿದರು. ಕೇವಲ 44 ಎಸೆತಗಳಲ್ಲಿ 8 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ ಈ ಅರ್ಧಶತಕದ ಇನ್ನಿಂಗ್ಸ್ ಆಡಿದ ಕಿಶನ್ ಕೇವಲ 19 ರನ್​ಗಳ ಅಂತರದಿಂದ ಶತಕ ವಂಚಿತರಾದರು. ಆದಾಗ್ಯೂ ಕಿಶನ್ ಈ ಅರ್ಧಶತಕದ ಇನ್ನಿಂಗ್ಸ್ ಮೂಲಕ ಕಿಂಗ್ ಕೊಹ್ಲಿಯ ದಾಖಲೆಯನ್ನು ಮುರಿದರು(PC-PTI).

1 / 6
ಈ ಪಂದ್ಯದಲ್ಲಿ ಟೀಂ ಇಂಡಿಯಾಕ್ಕೆ ಉತ್ತಮ ಆರಂಭ ಸಿಗಲಿಲ್ಲ. ತಂಡ ಕೇವಲ 29 ರನ್​ಗಳಿಗೆ ಆರಂಭಿಕರಿಬ್ಬರನ್ನು ಕಳೆದುಕೊಂಡಿತು. ಈ ಹಂತದಲ್ಲಿ ತಂಡದ ಇನ್ನಿಂಗ್ಸ್ ನಿಭಾಯಿಸಿದ ಕಿಶನ್ ಅದ್ಭುತ ಇನ್ನಿಂಗ್ಸ್ ಆಡಿದರು. 31 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಕಿಶನ್ 44 ಎಸೆತಗಳಲ್ಲಿ 81 ರನ್‌ ಬಾರಿಸಿ ಔಟಾದರು(PC-PTI).

2 / 6
ಈ 81 ರನ್​ಗಳ ಇನ್ನಿಂಗ್ಸ್ ಮೂಲಕ ಕಿಶನ್ ಅಂತರರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಒಂದೇ ವರ್ಷದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿದ್ದಾರೆ. ಪಾಕಿಸ್ತಾನದ ಬ್ಯಾಟ್ಸ್‌ಮನ್ ಮೊಹಮ್ಮದ್ ರಿಜ್ವಾನ್ ಒಂದೇ ವರ್ಷದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಟಾಪ್ -10 ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ(PC-PTI).

3 / 6
ಇಶಾನ್ ಕಿಶನ್ 2026 ರಲ್ಲಿ ಇದುವರೆಗೆ ಅಂತರರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಒಟ್ಟು 783 ರನ್ ಗಳಿಸಿದ್ದಾರೆ. ಈ ಮೂಲಕ ಈ ಸ್ವರೂಪದಲ್ಲಿ ಒಂದೇ ವರ್ಷದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿ ಎಂಟನೇ ಸ್ಥಾನಕ್ಕೇರಿದ್ದಾರೆ. ಕೊಹ್ಲಿ 2022 ರಲ್ಲಿ ಒಟ್ಟು 781 ರನ್ ಗಳಿಸಿದ್ದರು. ಪಾಕಿಸ್ತಾನದ ಬ್ಯಾಟ್ಸ್‌ಮನ್ ಮೊಹಮ್ಮದ್ ರಿಜ್ವಾನ್ 2021 ರಲ್ಲಿ 1,326 ರನ್‌ ಬಾರಿಸುವ ಮೂಲಕ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ(PC-PTI).

4 / 6
ಹಾಗೆಯೇ ಭಾರತದ ಮಾಜಿ ಟಿ20 ನಾಯಕ ಸೂರ್ಯಕುಮಾರ್ ಯಾದವ್ 2022 ರಲ್ಲಿ 1,164 ರನ್ ಗಳಿಸುವ ಮೂಲಕ ಒಂದೇ ವರ್ಷದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ರಿಜ್ವಾನ್ 2022 ರಲ್ಲಿ 996 ರನ್ ಗಳಿಸುವ ಮೂಲಕ ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ, 2021 ರಲ್ಲಿ 939 ರನ್‌ಗಳೊಂದಿಗೆ ಬಾಬರ್ ಆಝಂ ನಾಲ್ಕನೇ ಸ್ಥಾನದಲ್ಲಿದ್ದಾರೆ(PC-PTI).

5 / 6
ಉಳಿದಂತೆ ಅಭಿಷೇಕ್ ಶರ್ಮಾ 2025 ರಲ್ಲಿ 859 ರನ್ ಗಳಿಸುವ ಮೂಲಕ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದ್ದರೆ, 2025 ರಲ್ಲಿ 771 ರನ್‌ ಬಾರಿಸಿದ್ದ ಪಾಕಿಸ್ತಾನದ ಬ್ಯಾಟ್ಸ್‌ಮನ್ ಸಾಹಿಬ್‌ಜಾದಾ ಫರ್ಹಾನ್ ಪಟ್ಟಿಯಲ್ಲಿ 10 ನೇ ಸ್ಥಾನದಲ್ಲಿದ್ದಾರೆ. ಆದಾಗ್ಯೂ, ಇಶಾನ್‌ಗೆ ಅನೇಕ ಆಟಗಾರರನ್ನು ಮೀರಿಸಲು ಉತ್ತಮ ಅವಕಾಶವಿದೆ(PC-PTI).

6 / 6
Follow Us
ಇದು ಸರ್ಕಾರಕ್ಕೆ ವಿದ್ಯಾರ್ಥಿಗಳು, ವಿಪಕ್ಷದ ಎಚ್ಚರಿಕೆ; ರಾಹುಲ್ ಗಾಂಧಿ

ಅತ್ತ ಪ್ರಧಾನ್ ರಾಜೀನಾಮೆ: ಇತ್ತ ರಾಜ್ಯದ ಸಂಪುಟ ವಿಸ್ತರಣೆ ಸನ್ನಿಹಿತ

ಸರ್ಕಾರ ಸಿಜೆಪಿಯ ಎಲ್ಲಾ ಬೇಡಿಕೆಗಳನ್ನೂ ಒಪ್ಪಿಕೊಂಡಿದೆ; ಸಚಿವ ಜೆ.ಪಿ ನಡ್ಡಾ

ಬರದ ಬಗ್ಗೆ ಈಗಾಗಲೇ ಪ್ರಧಾನಿ ಮೋದಿ ಸಹ ಎಚ್ಚರಿಕೆ ನೀಡಿದ್ದಾರೆ ಎಂದ ಡಿಕೆಶಿ

ಸಿಜೆಪಿ ಜೊತೆಗಿನ ಕೇಂದ್ರದ ಸಂಧಾನ ಸಕ್ಸಸ್, ಜಿರಳೆ ಪಾರ್ಟಿ ಹೋರಾಟ ವಾಪಸ್!

10 ವರ್ಷ ಜೈಲು, 10 ಕೋಟಿ ರೂ ದಂಡ ಎಂದ ಸಚಿವ ಜೋಶಿ

ದೆಹಲಿಯಲ್ಲಿ ಸಿಜೆಪಿ ವಕ್ತಾರರ ಜೊತೆ ಕೇಂದ್ರ ಸರ್ಕಾರದ 3ನೇ ಸುತ್ತಿನ ಮಾತುಕತೆ

ಪ್ರಧಾನ್ ರಾಜೀನಾಮೆ ಕ್ರೆಡಿಟ್ ಬಗ್ಗೆ ಬಿಕೆ ಹರಿಪ್ರಸಾದ್ ಹೇಳಿದ್ದಿಷ್ಟು

ಪ್ರಧಾನ್ ರಾಜೀನಾಮೆ ನೀಡಿದ್ರೂ ಸಿಜೆಪಿಗಿಲ್ಲ ಸಮಾಧಾನ

ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಹಿನ್ನೆಲೆ CJP ಬೆಂಬಲಿಗರ ಸಂಭ್ರಮಾಚರಣೆ