- Kannada News Photo gallery Cricket photos Jitesh Sharma IPL 2025 Auction RCB buys the indian player for the auction price of 11 cr Rupees, details in kannada
Jitesh Sharma IPL Auction 2025: 2ನೇ ವಿಕೆಟ್ ಕೀಪರ್ ಆಗಿ ಆರ್ಸಿಬಿ ಸೇರಿದ ಜಿತೇಶ್ ಶರ್ಮಾ
Jitesh Sharma Auction Price: 2022ರ ಮೆಗಾ ಹರಾಜಿನಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಸೇರಿಕೊಂಡಿದ್ದ ಜಿತೇಶ್ಗೆ ಅದೇ ಚೊಚ್ಚಲ ಆವೃತ್ತಿಯಾಗಿತ್ತು. ಕಳೆದ ಎರಡು ಆವೃತ್ತಿಗಳಲ್ಲಿ ತಂಡದ ಪರ ಗಮನಾರ್ಹ ಪ್ರದರ್ಶನ ನೀಡಿದ್ದ ಜಿತೇಶ್ರನ್ನು ಆರ್ಸಿಬಿ 11 ಕೋಟಿ ನೀಡಿ ಖರೀದಿಸಿದೆ.
Updated on:Nov 24, 2024 | 9:21 PM

2025 ರ ಮೆಗಾ ಹರಾಜಿಗೆ 1 ಕೋಟಿ ಮೂಲ ಬೆಲೆಯೊಂದಿಗೆ ತನ್ನ ಹೆಸರನ್ನು ನೋಂದಾಯಿಸಿಕೊಂಡಿದ್ದ ಟೀಂ ಇಂಡಿಯಾದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಜಿತೇಶ್ ಶರ್ಮಾ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸೇರಿಕೊಂಡಿದ್ದಾರೆ.

2022ರ ಮೆಗಾ ಹರಾಜಿನಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಸೇರಿಕೊಂಡಿದ್ದ ಜಿತೇಶ್ಗೆ ಅದೇ ಚೊಚ್ಚಲ ಆವೃತ್ತಿಯಾಗಿತ್ತು. ಕಳೆದ ಎರಡು ಆವೃತ್ತಿಗಳಲ್ಲಿ ತಂಡದ ಪರ ಗಮನಾರ್ಹ ಪ್ರದರ್ಶನ ನೀಡಿದ್ದ ಜಿತೇಶ್ರನ್ನು ಆರ್ಸಿಬಿ 11 ಕೋಟಿ ನೀಡಿ ಖರೀದಿಸಿದೆ.

ತಮ್ಮ ಆಕ್ರಮಣಕಾರಿ ಬ್ಯಾಟಿಂಗ್‌ನಿಂದ ಎಲ್ಲರ ಗಮನ ಸೆಳೆದಿದ್ದ ಜಿತೇಶ್, ತಮ್ಮ ಚೊಚ್ಚಲ ಆವೃತ್ತಿಯಲ್ಲಿ ಆಡಿದ್ದ 12 ಪಂದ್ಯಗಳಲ್ಲಿ 164 ರ ಸ್ಟ್ರೈಕ್ ರೇಟ್‌ನಲ್ಲಿ 234 ರನ್ ಕಲೆಹಾಕಿದ್ದರು. ಹಾಗೆಯೇ 2023 ರ ಐಪಿಎಲ್ನಲ್ಲಿ ಪಂಜಾಬ್ ಕಿಂಗ್ಸ್ ಪರ ಎಲ್ಲಾ 14 ಪಂದ್ಯಗಳನ್ನು ಆಡಿದ್ದ ಅವರು 155 ಕ್ಕಿಂತ ಹೆಚ್ಚಿನ ಸ್ಟ್ರೈಕ್ ರೇಟ್‌ನಲ್ಲಿ 309 ರನ್ ಗಳಿಸಿದ್ದರು.

ಐಪಿಎಲ್‌ನಲ್ಲಿನಲ್ಲಿ ಆಡಿದ್ದ ಎರಡು ಆವೃತ್ತಿಗಳಲ್ಲೂ ಉತ್ತಮ ಪ್ರದರ್ಶನ ನೀಡಿದ್ದ ಜಿತೇಶ್ಗೆ 2023ರಲ್ಲಿ ಟೀಂ ಇಂಡಿಯಾ ಪರ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ಗೆ ಪದಾರ್ಪಣೆ ಮಾಡುವ ಅವಕಾಶ ಸಿಕ್ಕಿತು. ಇದುವರೆಗೆ ಜಿತೇಶ್ ಟೀಂ ಇಂಡಿಯಾ ಪರ 9 ಪಂದ್ಯಗಳನ್ನು ಆಡಿದ್ದಾರೆ.

ಇನ್ನು ಈ ಬಾರಿಯ ಮೆಗಾ ಹರಾಜಿನಲ್ಲಿ ಜಿತೇಶ್ ಶರ್ಮಾ ಅವರನ್ನು ಖರೀದಿಸಲು ಲಕ್ನೋ, ಸಿಎಸ್ಕೆ, ಡೆಲ್ಲಿ ಕ್ಯಾಪಿಟಲ್ಸ್ ಸೇರಿದಂತೆ ಇತರ ಫ್ರಾಂಚೈಸಿಗಳು ಮುಗಿಬಿದ್ದಿದ್ದವು. ಆದರೆ ಅಂತಿಮವಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಜಿತೇಶ್ ಶರ್ಮಾ ಅವರನ್ನು 11 ಕೋಟಿಗೆ ಖರೀದಿಸಿತು.
Published On - 8:42 pm, Sun, 24 November 24




