AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Joe Root: ಕ್ಯಾಚ್ ಹಿಡಿದೇ ವಿಶ್ವ ದಾಖಲೆ ನಿರ್ಮಿಸಿದ ಜೋ ರೂಟ್

Joe Root Record: ಟೆಸ್ಟ್ ಕ್ರಿಕೆಟ್​ನಲ್ಲಿ 200 ಕ್ಯಾಚ್​ಗಳನ್ನು ಹಿಡಿದ 4ನೇ ಫೀಲ್ಡರ್ ಎಂಬ ವಿಶ್ವ ದಾಖಲೆಯನ್ನು ಜೋ ರೂಟ್ ನಿರ್ಮಿಸಿದ್ದಾರೆ. ಇದಕ್ಕೂ ಮುನ್ನ ಭಾರತದ ರಾಹುಲ್ ದ್ರಾವಿಡ್, ಸೌತ್ ಆಫ್ರಿಕಾದ ಜಾಕ್ಸ್ ಕಾಲಿಸ್ ಹಾಗೂ ಶ್ರೀಲಂಕಾದ ಮಹೇಲ ಜಯವರ್ಧನೆ ಈ ಸಾಧನೆ ಮಾಡಿದ್ದರು. ಇದೀಗ ಈ ಪಟ್ಟಿಗೆ ಜೋ ರೂಟ್ ಎಂಟ್ರಿ ಕೊಟ್ಟಿದ್ದಾರೆ.

ಝಾಹಿರ್ ಯೂಸುಫ್
|

Updated on: Sep 01, 2024 | 10:29 AM

Share
ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ 200+ ಕ್ಯಾಚ್​ಗಳನ್ನು ಹಿಡಿದಿರುವುದು ಕೇವಲ 4 ಆಟಗಾರರು ಮಾತ್ರ. ಈ ಪಟ್ಟಿಗೆ ಹೊಸ ಸೇರ್ಪಡೆ ಇಂಗ್ಲೆಂಡ್​ನ ಜೋ ರೂಟ್ (Joe Root). ಲಾರ್ಡ್ಸ್​ ಮೈದಾನದಲ್ಲಿ ನಡೆಯುತ್ತಿರುವ ಶ್ರೀಲಂಕಾ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಎರಡು ಕ್ಯಾಚ್ ಹಿಡಿಯುವುದರೊಂದಿಗೆ ರೂಟ್ ಟೆಸ್ಟ್​ನಲ್ಲಿ 200 ಕ್ಯಾಚ್​ಗಳ ಸಾಧನೆ ಮಾಡಿದ್ದಾರೆ.

1 / 6
ಈ ಮೂಲಕ ಈ ಸಾಧನೆ ಮಾಡಿದ ವಿಶ್ವದ 4ನೇ ಫೀಲ್ಡರ್ ಎನಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಭಾರತದ ರಾಹುಲ್ ದ್ರಾವಿಡ್, ಶ್ರೀಲಂಕಾದ ಮಹೇಲ ಜಯವರ್ಧನೆ ಹಾಗೂ ಸೌತ್ ಆಫ್ರಿಕಾದ ಜಾಕ್ಸ್ ಕಾಲಿಸ್ ಈ ಸಾಧನೆ ಮಾಡಿದ್ದರು. ಇದೀಗ ಕೇವಲ 145 ಪಂದ್ಯಗಳ ಮೂಲಕ ರೂಟ್ ಈ ಸಾಧಕರ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ.

2 / 6
ಟೆಸ್ಟ್ ಕ್ರಿಕೆಟ್​ನಲ್ಲಿ ಅತ್ಯಧಿಕ ಕ್ಯಾಚ್​ಗಳನ್ನು ಹಿಡಿದಿರುವ ವಿಶ್ವ ದಾಖಲೆ ಟೀಮ್ ಇಂಡಿಯಾದ ಮಾಜಿ ನಾಯಕ ರಾಹುಲ್ ದ್ರಾವಿಡ್ ಹೆಸರಿನಲ್ಲಿದೆ. 301 ಟೆಸ್ಟ್ ಇನಿಂಗ್ಸ್​ಗಳ ಮೂಲಕ ದ್ರಾವಿಡ್ ಒಟ್ಟು 210 ಕ್ಯಾಚ್​ಗಳನ್ನು ಹಿಡಿದಿದ್ದಾರೆ.

3 / 6
ಇನ್ನು ಈ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿರುವುದು ಶ್ರೀಲಂಕಾ ತಂಡದ ಮಾಜಿ ನಾಯಕ ಮಹೇಲ ಜಯವರ್ಧನೆ. 270 ಇನಿಂಗ್ಸ್​ಗಳಲ್ಲಿ ಜಯವರ್ಧನೆ ಒಟ್ಟು 205 ಕ್ಯಾಚ್​ಗಳನ್ನು ಹಿಡಿದು ಈ ದಾಖಲೆ ಬರೆದಿದ್ದಾರೆ.

4 / 6
ಹಾಗೆಯೇ ಸೌತ್ ಆಫ್ರಿಕಾ ಪರ 315 ಇನಿಂಗ್ಸ್​ಗಳಲ್ಲಿ ಫೀಲ್ಡಿಂಗ್ ಮಾಡಿರುವ ಜಾಕ್ಸ್ ಕಾಲಿಸ್ ಒಟ್ಟು 200 ಕ್ಯಾಚ್​ಗಳನ್ನು ಹಿಡಿದಿದ್ದಾರೆ. ಇದೀಗ ಕಾಲಿಸ್ ಅವರ ದಾಖಲೆಯನ್ನು ಸರಿಗಟ್ಟುವಲ್ಲಿ ಜೋ ರೂಟ್ ಯಶಸ್ವಿಯಾಗಿದ್ದಾರೆ.

5 / 6
ಇಂಗ್ಲೆಂಡ್ ಪರ 275 ಇನಿಂಗ್ಸ್​ಗಳಲ್ಲಿ ಫೀಲ್ಡಿಂಗ್ ಮಾಡಿರುವ ಜೋ ರೂಟ್ 200 ಕ್ಯಾಚ್​ಗಳನ್ನು ಹಿಡಿದಿದ್ದಾರೆ. ಅಲ್ಲದೆ ಮುಂಬರುವ ಪಂದ್ಯಗಳ ಮೂಲಕ 11 ಕ್ಯಾಚ್​ಗಳನ್ನು ಹಿಡಿದರೆ, ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಅತ್ಯಧಿಕ ಕ್ಯಾಚ್ ಹಿಡಿದ ವಿಶ್ವ ದಾಖಲೆ ಜೋ ರೂಟ್ ಪಾಲಾಗಲಿದೆ.

6 / 6
Follow Us
2 ನಿಮಿಷ ತಡವಾಗಿ ಬಂದ ಬಾಲಕನಿಗೆ 2 ಗಂಟೆ ಬಿಸಿಲಲ್ಲಿ ನಿಲ್ಲಿಸಿ ಶಿಕ್ಷೆ!

ಯುಗಾದಿ- ರಂಜಾನ್ ಹಬ್ಬಕ್ಕೂ ಮುನ್ನವೇ ಅಡುಗೆ ಎಣ್ಣೆ ಬೆಲೆ ಭಾರೀ ಏರಿಕೆ

ಶಿಲ್ಲಾಂಗ್-ಸಿಲ್ಚಾರ್ ಕಾರಿಡಾರ್​​ಗೆ ಪ್ರಧಾನಿ ಮೋದಿ ಶಿಲಾನ್ಯಾಸ

ನಟ ಗುರು ನಂದನ್ ವಿಲ್ಲಾ ತೋಟಕ್ಕೆ ನುಗ್ಗಿದ ಆನೆ; ಮುಂದೇನಾಯ್ತು?

ಎಲ್​ಪಿಜಿ ಗ್ಯಾಸ್ ಹಾಹಾಕಾರ;ವೀಕೆಂಡ್​ನಲ್ಲಿಯೂ ಬಂದ್ ಆದ ಹೋಟೆಲ್ಸ್ !

ಗಂಡು ಮಕ್ಕಳಿಲ್ಲದಿದ್ದರೇನು? ಅಂತ್ಯಕ್ರಿಯೆ ನಡೆಸಿದ ಇಬ್ಬರು ಹೆಣ್ಣು ಮಕ್ಕಳು!

1700 ರೂ. ಬೆಲೆಯ ಸಿಲಿಂಡರ್ 5000 ರೂ. ಗೆ ಮಾರಾಟ!

ಶ್ರೀ ಗಂಧದ ಗುಡಿ ಧಾರಾವಾಹಿ ಬಿಟ್ಟಿದ್ದೇಕೆ? ವಿಡಿಯೋ ಮೂಲಕ ವಿವರಿಸಿದ ಸಂಜನಾ

ಸಿಕ್ಕಸಿಕ್ಕ ವಾಹನಗಳಿಗೆ ಡಿಕ್ಕಿ ಹೊಡೆದ ಯುವಕರಿಗೆ ಹಿಗ್ಗಾಮುಗ್ಗಾ ಥಳಿಸಿದ ಜನ

ಒಂದು ನಿಮಿಷದಲ್ಲಿ 15 ಕೋಟಿ ರೂ. ಮೌಲ್ಯದ ಆಭರಣಗಳ ಕದ್ದ ದರೋಡೆಕೋರರು