IPL 2026: ಆರ್​​ಸಿಬಿ ವಿರುದ್ಧದ ಪಂದ್ಯಕ್ಕೂ ಮುನ್ನ ಲಕ್ನೋ ತಂಡಕ್ಕೆ ಡೇಂಜರಸ್ ಬ್ಯಾಟರ್​​ ಆಗಮನ

Updated on: May 01, 2026 | 8:04 PM

LSG IPL 2026: ಐಪಿಎಲ್ 2026ರಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಕಳಪೆ ಪ್ರದರ್ಶನದಿಂದ ಪ್ಲೇಆಫ್ ಕನಸು ಮಸುಕಾಗಿದೆ. ಈ ಸಂದರ್ಭದಲ್ಲಿ ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟ್ಸ್‌ಮನ್ ಜೋಶ್ ಇಂಗ್ಲಿಸ್ ತಂಡ ಸೇರಿಕೊಂಡಿದ್ದಾರೆ. 8.60 ಕೋಟಿಗೆ ಖರೀದಿಸಲ್ಪಟ್ಟ ಇಂಗ್ಲಿಸ್, ಮೇ 4 ರಂದು ಮುಂಬೈ ಇಂಡಿಯನ್ಸ್ ವಿರುದ್ಧ ಕಣಕ್ಕಿಳಿಯಲಿದ್ದಾರೆ. ಇವರ ಆಗಮನ ತಂಡಕ್ಕೆ ಹೊಸ ಹುರುಪು ನೀಡಿ, ಉಳಿದ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಲು ಸಹಕಾರಿಯಾಗಲಿದೆಯೇ ಎಂದು ಕಾದುನೋಡಬೇಕಿದೆ.

1 / 5
2026 ರ ಐಪಿಎಲ್‌ನಲ್ಲಿ ಲಕ್ನೋ ತಂಡದ ಪ್ರದರ್ಶನ ಅತ್ಯಂತ ಕಳಪೆಯಾಗಿದೆ. ಆಡಿರುವ 8 ಪಂದ್ಯಗಳಲ್ಲಿ ಕೇವಲ 2 ಪಂದ್ಯಗಳನ್ನು ಗೆದ್ದು 6 ಪಂದ್ಯಗಳಲ್ಲಿ ಸೋತಿದೆ. ಈ ಮೂಲಕ ಪಾಯಿಂಟ್ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಪ್ರಸ್ತುತ ಲಕ್ನೋ ತಂಡದ ಪ್ರದರ್ಶನ ನೋಡಿದರೆ ಅದು ಪ್ಲೇಆಫ್​ಗೆ ತಲುಪುವುದು ಕಷ್ಟಕರವಾಗಿದೆ. ಈ ನಡುವೆ ಲಕ್ನೋ ತಂಡಕ್ಕೆ ಸ್ಫೋಟಕ ದಾಂಡಿಗನ ಆಗಮನವಾಗಿದೆ.

2026 ರ ಐಪಿಎಲ್‌ನಲ್ಲಿ ಲಕ್ನೋ ತಂಡದ ಪ್ರದರ್ಶನ ಅತ್ಯಂತ ಕಳಪೆಯಾಗಿದೆ. ಆಡಿರುವ 8 ಪಂದ್ಯಗಳಲ್ಲಿ ಕೇವಲ 2 ಪಂದ್ಯಗಳನ್ನು ಗೆದ್ದು 6 ಪಂದ್ಯಗಳಲ್ಲಿ ಸೋತಿದೆ. ಈ ಮೂಲಕ ಪಾಯಿಂಟ್ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಪ್ರಸ್ತುತ ಲಕ್ನೋ ತಂಡದ ಪ್ರದರ್ಶನ ನೋಡಿದರೆ ಅದು ಪ್ಲೇಆಫ್​ಗೆ ತಲುಪುವುದು ಕಷ್ಟಕರವಾಗಿದೆ. ಈ ನಡುವೆ ಲಕ್ನೋ ತಂಡಕ್ಕೆ ಸ್ಫೋಟಕ ದಾಂಡಿಗನ ಆಗಮನವಾಗಿದೆ.

2 / 5

ವಾಸ್ತವವಾಗಿ ಆಸ್ಟ್ರೇಲಿಯಾದ ಸ್ಫೋಟಕ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಜೋಶ್ ಇಂಗ್ಲಿಸ್ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಸೇರಿಕೊಂಡಿದ್ದಾರೆ. ವಾಸ್ತವವಾಗಿ ಇಂಗ್ಲಿಸ್ ಐಪಿಎಲ್ ಹರಾಜಿಗೂ ಮುನ್ನ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದರು. ಹೀಗಾಗಿ ಅವರು ಐಪಿಎಲ್​ಗೆ ತಮ್ಮ ಲಭ್ಯತೆಯ ಬಗ್ಗೆ ಮೊದಲೇ ತಿಳಿಸಿದ್ದರು. ಅದರಂತೆ ಇಂಗ್ಲಿಸ್ ಈಗ ಲಕ್ನೋ ತಂಡವನ್ನು ಸೇರಿಕೊಂಡಿದ್ದು, ಮೇ 4 ರಂದು ಮುಂಬೈ ಇಂಡಿಯನ್ಸ್ ವಿರುದ್ಧ ನಡೆಯಲಿರುವ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದಾರೆ.

3 / 5

ವಾಸ್ತವವಾಗಿ ಹರಾಜಿಗೂ ಮುನ್ನ ಜೋಶ್ ಇಂಗ್ಲಿಸ್ ಅವರನ್ನು ಪಂಜಾಬ್ ಕಿಂಗ್ಸ್ ಫ್ರಾಂಚೈಸಿ ತಂಡದಿಂದ ಬಿಡುಗಡೆ ಮಾಡಿತ್ತು. ಇದಾದ ನಂತರ ಹರಾಜಿನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಬರೋಬ್ಬರಿ 8.60 ಕೋಟಿ ನೀಡಿ ಅವರನ್ನು ಖರೀದಿ ಮಾಡಿತ್ತು. ಇದೀಗ ಉಳಿದಿರುವ ಪಂದ್ಯಗಳಲ್ಲಿ ಇಂಗ್ಲಿಸ್‌ ಲಕ್ನೋ ತಂಡಕ್ಕೆ ಯಾವ ರೀತಿಯ ಸಹಕಾರಿಯಾಗಲಿದ್ದಾರೆ ಎಂಬುದನ್ನು ಕಾದುನೋಡಬೇಕಿದೆ.

4 / 5

ಪಂಜಾಬ್ ಕಿಂಗ್ಸ್ ಪರ ಇಂಗ್ಲಿಸ್ 11 ಇನ್ನಿಂಗ್ಸ್‌ಗಳಲ್ಲಿ 30.88 ಸರಾಸರಿ ಮತ್ತು 162.57 ಸ್ಟ್ರೈಕ್-ರೇಟ್‌ನಲ್ಲಿ 278 ರನ್ ಗಳಿಸಿದ್ದಾರೆ. ಇಂಗ್ಲಿಸ್ ಈಗಾಗಲೇ ಲಕ್ನೋ ಸೂಪರ್ ಜೈಂಟ್ಸ್ ತಂಡದೊಂದಿಗೆ ತರಬೇತಿಯನ್ನು ಪ್ರಾರಂಭಿಸಿದ್ದಾರೆ. ಹೀಗಾಗಿ ಅವರು ಸೋಮವಾರ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿರುವ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಆಡುವುದು ಖಚಿತ.

5 / 5

ಈ ಆವೃತ್ತಿಯಲ್ಲಿ ಎರಡೂ ತಂಡಗಳ ಒಂಬತ್ತನೇ ಪಂದ್ಯ ಇದಾಗಿದೆ. ಈ ಪಂದ್ಯವು ಪಾಯಿಂಟ್ ಟೇಬಲ್‌ನಲ್ಲಿ ಕೊನೆಯ ಸ್ಥಾನದಲ್ಲಿರುವ ಎರಡೂ ತಂಡಗಳ ನಡುವೆ ನಡೆಯಲಿದೆ. ಈ ಪಂದ್ಯದಲ್ಲಿ ನಿಕೋಲಸ್ ಪೂರನ್ ಬದಲಿಗೆ ಇಂಗ್ಲಿಸ್ ಆಡಬಹುದು. ಮುಂಬೈ ವಿರುದ್ಧದ ಪಂದ್ಯದ ಬಳಿಕ ಲಕ್ನೋ, ಆರ್​ಸಿಬಿ ವಿರುದ್ಧ ಪಂದ್ಯವನ್ನಾಡಲಿದೆ.

Loading...
Unable to load recommendations.
Follow Us