
ಐಪಿಎಲ್ 2027 ರ ಮಿನಿ ಹರಾಜು ಕೆಲವೇ ದಿನಗಳಲ್ಲಿ ನಡೆಯಲಿದೆ. ಆದರೆ ಈ ಮಿನಿ ಹರಾಜಿಗೂ ಮೊದಲು ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡದಲ್ಲಿ ಪ್ರಮುಖ ಬದಲಾವಣೆಯಾಗಿದೆ. ತಂಡದ ಮುಖ್ಯ ಕೋಚ್ ಹುದ್ದೆಯಿಂದ ಶ್ರೀಲಂಕಾದ ದಿಗ್ಗಜ ಬ್ಯಾಟರ್ ಮಹೇಲ ಜಯವರ್ಧನೆ ರಾಜೀನಾಮೆ ನೀಡಿದ್ದಾರೆ(PC-PTI).
ಒಂದು ದಶಕದಿಂದ ಮುಂಬೈ ಇಂಡಿಯನ್ಸ್ ತಂಡದಲ್ಲಿದ್ದ ಮಹೇಲ ಜಯವರ್ಧನೆ ನೇತೃತ್ವದಲ್ಲಿ ಮುಂಬೈ ಇಂಡಿಯನ್ಸ್ ತಂಡ ಮೂರು ಬಾರಿ ಚಾಂಪಿಯನ್ ಆಯಿತು. ಜಯವರ್ಧನೆ ತಮ್ಮ ತರಬೇತಿಯಡಿಯಲ್ಲಿ ತಂಡವನ್ನು 2017, 2019 ಮತ್ತು 2020 ರಲ್ಲಿ ಚಾಂಪಿಯನ್ ಮಾಡುವಲ್ಲಿ ಯಶಸ್ವಿಯಾಗಿದ್ದರು(PC-PTI).
2022 ರ ಆವೃತ್ತಿಯವರೆಗೆ ಮುಂಬೈ ಇಂಡಿಯನ್ಸ್ ತಂಡದ ಮುಖ್ಯ ಕೋಚ್ ಆಗಿದ್ದ ಜಯವರ್ಧನೆ ಆ ನಂತರ SA20, ILT20 ಮತ್ತು MLC ಯಂತಹ ವಿದೇಶಿ ಲೀಗ್ಗಳಲ್ಲಿ ಮುಂಬೈ ಇಂಡಿಯನ್ಸ್ ಒಡೆತನದ ತಂಡಗಳಿಗೆ ಜಾಗತಿಕ ಪ್ರದರ್ಶನದ ಮುಖ್ಯಸ್ಥರಾಗಿ ಬಡ್ತಿ ಪಡೆದಿದ್ದರು(PC-PTI).
ಮಾರ್ಕ್ ಬೌಚರ್ ಕೋಚಿಂಗ್ ಅಡಿಯಲ್ಲಿ ಮುಂಬೈ ಇಂಡಿಯನ್ಸ್ ತಂಡ 2024ರಲ್ಲಿ ತೀರ ಕಳಪೆ ಪ್ರದರ್ಶನ ನೀಡಿತು. ಹೀಗಾಗಿ 2025 ರ ಸೀಸನ್ಗೂ ಮೊದಲು ಜಯವರ್ಧನೆಯನ್ನು ಮುಖ್ಯ ಕೋಚ್ ಆಗಿ ನೇಮಿಸಲಾಯಿತು. ಆ ಆವೃತ್ತಿಯಲ್ಲಿ ಮುಂಬೈ ತಂಡ ಕ್ವಾಲಿಫೈಯರ್ ಸುತ್ತನ್ನು ತಲುಪುವಲ್ಲಿ ಯಶಸ್ವಿಯಾಯಿತು. ಆದರೆ ಕಳೆದ ಆವೃತ್ತಿಯಲ್ಲಿ ತಂಡದ ಪ್ರದರ್ಶನ ಮತ್ತೆ ಪಾತಳಕ್ಕೆ ಕುಸಿದಿತ್ತು. ಹೀಗಾಗಿ ಜಯವರ್ಧನೆಯನ್ನು ಈ ಹುದ್ದೆಯಿಂದ ಕೆಳಗಿಳಿಸಿರುವ ಮುಂಬೈ ಹೊಸ ಕೋಚ್ ಹುಡುಕಾಟದಲ್ಲಿದೆ(PC-PTI).
ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತ್ಯಂತ ಯಶಸ್ವಿ ಬ್ಯಾಟ್ಸ್ಮನ್ಗಳಲ್ಲಿ ಒಬ್ಬರಾದ ಜಯವರ್ಧನೆ, ಐಪಿಎಲ್ನ ಮೊದಲ ಆರು ಸೀಸನ್ಗಳಲ್ಲಿ ಪಂಜಾಬ್ ಕಿಂಗ್ಸ್, ಕೊಚ್ಚಿ ಟಸ್ಕರ್ಸ್ ಕೇರಳ ಮತ್ತು ಡೆಲ್ಲಿ ಡೇರ್ಡೆವಿಲ್ಸ್ ಪರ ಆಡಿದ್ದರು. ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ 652 ಪಂದ್ಯಗಳನ್ನಾಡಿರುವ ಜಯವರ್ಧನೆ, 54 ಶತಕಗಳು ಮತ್ತು 136 ಅರ್ಧಶತಕಗಳೊಂದಿಗೆ 25,957 ರನ್ ಗಳಿಸಿದ್ದಾರೆ(PC-PTI).