Sign In

By signing in or creating an account, you agree with Associated Broadcasting Company's Terms & Conditions and Privacy Policy.

Mayank Agarwal: ಮಯಾಂಕ್ ಡಬಲ್ ಧಮಾಕಾ: ತವರಿನಲ್ಲಿ ದ್ವಿಶತಕ ಸಿಡಿಸಿದ ಕನ್ನಡಿಗ

Mayank Agarwal: ಮೊದಲ ದಿನದಾಟದ ಮುಕ್ತಾಯದ ವೇಳೆಗೆ ಕರ್ನಾಟಕ ತಂಡವು ಪ್ರಥಮ ಇನಿಂಗ್ಸ್​ನಲ್ಲಿ 5 ವಿಕೆಟ್ ಕಳೆದುಕೊಂಡು 229 ರನ್​ ಕಲೆಹಾಕಿತು.

TV9 Web
| Updated By: ಝಾಹಿರ್ ಯೂಸುಫ್

Updated on: Feb 09, 2023 | 6:32 PM

Ranji Trophy 2022-23: ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿಯ 2ನೇ ಸೆಮಿಫೈನಲ್​ ಪಂದ್ಯದಲ್ಲಿ ಸೌರಾಷ್ಟ್ರ ವಿರುದ್ಧ ಕರ್ನಾಟಕ ತಂಡದ ನಾಯಕ ಮಯಾಂಕ್ ಅಗರ್ವಾಲ್ ಭರ್ಜರಿ ದ್ವಿಶತಕ ಸಿಡಿಸಿ ಅಬ್ಬರಿಸಿದ್ದಾರೆ. ಮೊದಲ ದಿನದಾಟದಲ್ಲಿ ಶತಕ ಪೂರೈಸಿದ್ದ ಮಯಾಂಕ್ 2ನೇ ದಿನದಾಟದಲ್ಲಿ ಡಬಲ್ ಸೆಂಚುರಿ ಪೂರೈಸಿ ಮಿಂಚಿದರು.

1 / 7
ಈ ಪಂದ್ಯದಲ್ಲಿ ಟಾಸ್ ಗೆದ್ದ ಸೌರಾಷ್ಟ್ರ ತಂಡವು ಬೌಲಿಂಗ್ ಆಯ್ದುಕೊಂಡಿತು. ಅದರಂತೆ ಇನಿಂಗ್ಸ್ ಆರಂಭಿಸಿದ ಕರ್ನಾಟಕ ತಂಡ ಉತ್ತಮ ಆರಂಭ ಪಡೆದಿರಲಿಲ್ಲ. ಕೇವಲ 3 ರನ್​ಗಳಿಸಿ ರವಿಕುಮಾರ್ ಸಮರ್ಥ್​ ನಿರ್ಗಮಿಸಿದರು. ಆ ಬಳಿಕ ಬಂದ ದೇವದತ್ ಪಡಿಕ್ಕಲ್ ಕೂಡ 9 ರನ್​ಗಳಿಸಿ ಪೆವಿಲಿಯನ್​ಗೆ ಹಿಂತಿರುಗಿದರು. ಇದಾಗ್ಯೂ ನಾಯಕ ಮಯಾಂಕ್ ಅಗರ್ವಾಲ್ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿದರು.

2 / 7
ಎಚ್ಚರಿಕೆಯ ಬ್ಯಾಟಿಂಗ್​ನೊಂದಿಗೆ ರನ್ ಗತಿ ಹೆಚ್ಚಿಸುತ್ತಾ ಸಾಗಿದ ಮಯಾಂಕ್ ಅಗರ್ವಾಲ್ 216 ಎಸೆತಗಳಲ್ಲಿ ಶತಕ ಪೂರೈಸಿದರು. ಆದರೆ ಮತ್ತೊಂದೆಡೆ 18 ರನ್​ಗಳಿಸಿದ ನಿಕಿನ್ ಜೋಸ್, ಮನೀಷ್ ಪಾಂಡೆ (7) ಹಾಗೂ ಶ್ರೇಯಸ್ ಗೋಪಾಲ್ (15) ಹೆಚ್ಚು ಕ್ರೀಸ್​ನಲ್ಲಿ ನಿಲ್ಲಲಿಲ್ಲ.

3 / 7
ಈ ಹಂತದಲ್ಲಿ ಜೊತೆಗೂಡಿದ ಮಯಾಂಕ್ ಅಗರ್ವಾಲ್ - ಶ್ರೀನಿವಾಸ್ ಶರತ್ ಶತಕದ ಜೊತೆಯಾಟವಾಡಿದರು. ಪರಿಣಾಮ ಮೊದಲ ದಿನಾದಾಟದ ಮೂರನೇ ಸೆಷನ್​ನಲ್ಲಿ ಕರ್ನಾಟಕ ತಂಡದ ಮೊತ್ತವು 200 ರ ಗಡಿದಾಟಿತು. ಇದರ ನಡುವೆ ಶ್ರೀನಿವಾಸ್ ಶರತ್ ಅರ್ಧಶತಕ ಪೂರೈಸಿದರು.

4 / 7
ಅದರಂತೆ ಮೊದಲ ದಿನದಾಟದ ಮುಕ್ತಾಯದ ವೇಳೆಗೆ ಕರ್ನಾಟಕ ತಂಡವು ಮೊದಲ ಇನಿಂಗ್ಸ್​ನಲ್ಲಿ 5 ವಿಕೆಟ್ ಕಳೆದುಕೊಂಡು 229 ರನ್​ ಕಲೆಹಾಕಿತು. 110 ರನ್ ಬಾರಿಸಿರುವ ಮಯಾಂಕ್ ಅಗರ್ವಾಲ್ ಹಾಗೂ ಶ್ರೀನಿವಾಸ್ ಶರತ್ (58) 2ನೇ ದಿನದಾಟಕ್ಕೆ ಬ್ಯಾಟಿಂಗ್ ಮುಂದುವರೆಸಿದರು.

5 / 7
ಆದರೆ ವೈಯುಕ್ತಿಕ ಮೊತ್ತಕ್ಕೆ 8 ರನ್​ ಸೇರಿಸುವಷ್ಟರಲ್ಲಿ ಶ್ರೀನಿವಾಸ್ ಶರತ್ (66) ವಿಕೆಟ್ ಒಪ್ಪಿಸಿದರು. ಈ ಹಂತದಲ್ಲಿ ಬೌಲರ್​ಗಳೊಂದಿಗೆ ಇನಿಂಗ್ಸ್​ ಕಟ್ಟಿದ ಮಯಾಂಕ್ ಬಿರುಸಿನ ಬ್ಯಾಟಿಂಗ್​ಗೆ ಒತ್ತು ನೀಡಿದರು. ಪರಿಣಾಮ 367 ಎಸೆತಗಳಲ್ಲಿ ಭರ್ಜರಿ ದ್ವಿಶತಕ ಪೂರೈಸಿದರು. ಈ ಮೂಲಕ ತವರು ಮೈದಾನದಲ್ಲಿ ದ್ವಿಶತಕದ ಸಾಧನೆ ಮಾಡಿದರು. ಅಷ್ಟೇ ಅಲ್ಲದೆ ತಂಡದ ಮೊತ್ತವನ್ನು 350 ರ ಗಡಿದಾಟಿಸಿದರು.

6 / 7
ಡಬಲ್ ಸೆಂಚುರಿ ಬಳಿಕ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಮಯಾಂಕ್ ಸೌರಾಷ್ಟ್ರ ಬೌಲರ್​ಗಳ ಬೆಂಡೆತ್ತಿದರು. ಅದರಂತೆ 6 ಭರ್ಜರಿ ಸಿಕ್ಸ್ ಹಾಗೂ 28 ಫೋರ್​ಗಳನ್ನು ಬಾರಿಸಿ ತಂಡದ ಮೊತ್ತವನ್ನು 400 ರ ಗಡಿಯನ್ನು ದಾಟಿಸುವಲ್ಲಿ ಪ್ರಮುಖ ಪಾತ್ರವಹಿಸಿದರು. ಆದರೆ ಈ ಹಂತದಲ್ಲಿ ಸ್ಟ್ರೈಕ್ ಪಡೆಯುವ ಯತ್ನಕ್ಕಾಗಿ ರನ್ ಓಡಿದ ಮಯಾಂಕ್ ಅಗರ್ವಾಲ್ (249) ರನೌಟ್ ಆದರು. ಇದರೊಂದಿಗೆ ಕರ್ನಾಟಕ ತಂಡದ ಮೊದಲ ಇನಿಂಗ್ಸ್ 407 ರನ್​ಗಳಿಗೆ ಅಂತ್ಯವಾಯ್ತು. ಸದ್ಯ ಸೌರಾಷ್ಟ್ರ ತಂಡ ಮೊದಲ ಇನಿಂಗ್ಸ್ ಆರಂಭಿಸಿದೆ.

7 / 7
Follow us
ಚಹಲ್​ ಚಮತ್ಕಾರ: 3 ಓವರ್​ಗಳಲ್ಲಿ ಇಡೀ ಪಂದ್ಯದ ಚಿತ್ರಣ ಬದಲಿಸಿದ ಯುಝಿ

ಕನಸಿನಲ್ಲಿ ಪದೇ ಪದೇ ಇಷ್ಟ ದೇವತೆಗಳು ಕಾಣಿಸಿಕೊಂಡರೆ ಏನರ್ಥ?

Daily Horoscope: ಈ ರಾಶಿಯವರಿಗೆ ಹಣಕಾಸಿನ ಸಮಸ್ಯೆ ಎದುರಾಗಬಹುದು

Video: ‘ಗುಡ್ ಬ್ಯಾಡ್ ಅಗ್ಲಿ’ ಸಿನಿಮಾ ನೋಡುವಾಗ ಫ್ಯಾನ್ಸ್ ಹೊಡೆದಾಟ

ಜಾತಿಗಣತಿ ವರದಿ ಜಾರಿ ವಿಚಾರ: ಸ್ವಪಕ್ಷದ ವಿರುದ್ಧ ಶಾಮನೂರು ವಾಗ್ದಾಳಿ

28 ಸೆಕೆಂಡಲ್ಲಿ 20 ಹೊಡೆತ; ಉತ್ತರಾಖಂಡದ ಮೆಡಿಕಲ್ ಶಾಪ್ ಮಾಲೀಕರ ಮೇಲೆ ಹಲ್ಲೆ

ಕಾಮಿಡಿ ಶೋಗಳಲ್ಲಿ ಅಡಲ್ಟ್ ಭಾಷೆ ಯಾಕೆ? ಸಮರ್ಥನೆ ನೀಡಿದ ನಿರೂಪ್, ಶ್ರವಣ್

ಲೋಕಾಯುಕ್ತ ಬಿ ರಿಪೋರ್ಟ್ ಸಲ್ಲಿಕೆ ಪ್ರಶ್ನಿಸಿ ದೂರುದಾರರಿಂದ ತಕರಾರು ಅರ್ಜಿ

ಗೃಹಲಕ್ಷ್ಮಿ ಹಣದಿಂದ ತೋಟದಲ್ಲಿ ಬೋರ್​ವೆಲ್ ಕೊರೆಸಿದ ದಂಪತಿ

ಸಿದ್ದರಾಮಯ್ಯ ದಲಿತರ ಕೈ ಬಿಟ್ಟು ಮುಸಲ್ಮಾನರ ಕೈ ಹಿಡಿದಿದ್ದಾರೆ: ಅಶೋಕ