AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Chris Gayle: ಬರೋಬ್ಬರಿ 18 ಸಿಕ್ಸ್​: ವಿಶ್ವ ದಾಖಲೆ ಬರೆದಿದ್ದ ಯೂನಿವರ್ಸ್ ಬಾಸ್ ಕ್ರಿಸ್ ಗೇಲ್

Chris Gayle World Record: ಇಂಗ್ಲೆಂಡ್‌ನ ಗ್ರಹಾಂ ನೇಪಿಯರ್, ಶ್ರೀಲಂಕಾದ ದಸುನ್ ಶಂಕಾ ಮತ್ತು ಅಫ್ಘಾನಿಸ್ತಾನದ ಹಝತುಲ್ಲಾ ಝಜೈ ಅವರು ಟಿ20 ಇನ್ನಿಂಗ್ಸ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಬ್ಯಾಟರುಗಳ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದ್ದಾರೆ.

TV9 Web
| Edited By: |

Updated on: Dec 12, 2021 | 2:50 PM

Share
 ಕ್ರಿಕೆಟ್ ಅಂಗಳದ ಯೂನಿವರ್ಸ್ ಬಾಸ್ ಕ್ರಿಸ್ ಗೇಲ್ ಅನೇಕ ದಾಖಲೆಗಳನ್ನು ಬರೆದಿದ್ದಾರೆ. ಅದರಲ್ಲೊಂದು ಸಿಕ್ಸರ್​ಗಳ ಸುರಿಮಳೆ ದಾಖಲೆ. ಹೌದು, ಇನಿಂಗ್ಸ್​ವೊಂದರಲ್ಲಿ ಅತೀ ಹೆಚ್ಚು ಸಿಕ್ಸ್​ ಸಿಡಿಸಿದ ವಿಶ್ವ ದಾಖಲೆ ಕ್ರಿಸ್ ಗೇಲ್ ಹೆಸರಿನಲ್ಲಿದೆ. ಈ ದಾಖಲೆಯನ್ನು ಗೇಲ್ ನಿರ್ಮಿಸಿರುವುದು ತಮ್ಮದೇ ದಾಖಲೆಯನ್ನು ಅಳಿಸಿ ಹಾಕುವ ಮೂಲಕ ಎಂಬುದು ವಿಶೇಷ.

1 / 6
 2013 ರ ಐಪಿಎಲ್ ಸೀಸನ್​ನಲ್ಲಿ ಕ್ರಿಸ್ ಗೇಲ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡಿದ್ದರು. ಈ ವೇಳೆ ಪುಣೆ ವಾರಿಯರ್ಸ್ ವಿರುದ್ಧದ ಪಂದ್ಯದಲ್ಲಿ ಗೇಲ್ 66 ಎಸೆತಗಳಲ್ಲಿ ಅಜೇಯ 175 ರನ್ ಬಾರಿಸಿದ್ದರು. ಈ ಸ್ಪೋಟಕ ಬ್ಯಾಟಿಂಗ್ ವೇಳೆ ಗೇಲ್​ ಬ್ಯಾಟ್​ನಿಂದ ಸಿಡಿದದ್ದು ಬರೋಬ್ಬರಿ 17 ಸಿಕ್ಸರ್​ಗಳು. ಇದು ಬ್ಯಾಟರ್​ರೊಬ್ಬರು ಇನಿಂಗ್ಸ್​ವೊಂದರಲ್ಲಿ ಅತೀ ಹೆಚ್ಚು ಸಿಕ್ಸ್​ ದಾಖಲೆಯನ್ನು ಬರೆಯಿತು.

2 / 6
ಆದರೆ ಈ 17 ಸಿಕ್ಸ್​ಗಳ ದಾಖಲೆಯನ್ನು ಆ ಬಳಿಕ ಕ್ರಿಸ್ ಗೇಲ್ ಅವರೇ ಮುರಿದಿರುವುದು ವಿಶೇಷ. ಡಿಸೆಂಬರ್ 12, 2017 ರಲ್ಲಿ ಬಾಂಗ್ಲಾದೇಶ್ ಪ್ರೀಮಿಯರ್ ಲೀಗ್​ನಲ್ಲಿ  ರಂಗ್​ಪುರ್ ರೈಡರ್ಸ್​ ಪರ ಆಡಿದ್ದರು. ಈ ವೇಳೆ ಡೈನಾಮೈಟ್ಸ್​ ವಿರುದ್ದದ ಪಂದ್ಯದಲ್ಲಿ ಕೇವಲ 69 ಎಸೆತಗಳಲ್ಲಿ 146 ರನ್ ಬಾರಿಸಿದ್ದರು. ಈ ಇನಿಂಗ್ಸ್​ನಲ್ಲಿ ಕ್ರಿಸ್ ಗೇಲ್ ಸಿಡಿಸಿರುವುದು ಬರೋಬ್ಬರಿ 18 ಸಿಕ್ಸ್​ಗಳು.

3 / 6
ಇದರೊಂದಿಗೆ ತಮ್ಮದೇ ಹೆಸರಿನಲ್ಲಿದ್ದ 17 ಸಿಕ್ಸ್​ಗಳ ದಾಖಲೆಯನ್ನು ಅಳಿಸಿ ಹಾಕಿ ಕ್ರಿಸ್ ಗೇಲ್ ಹೊಸ ವಿಶ್ವ ದಾಖಲೆ ಬರೆದಿದ್ದರು. ಇದೀಗ ಈ ವಿಶ್ವದಾಖಲೆಗೆ ಬರೋಬ್ಬರಿ 4 ವರ್ಷಗಳಾಗಿವೆ. ಇದಾಗ್ಯೂ ವರ್ಲ್ಡ್​ ರೆಕಾರ್ಡ್​ ಅನ್ನು ಇದುವರೆಗೆ ಯಾವುದೇ ಬ್ಯಾಟರ್​ಗೆ ಅಳಿಸಿ ಹಾಕಲು ಸಾಧ್ಯವಾಗಿಲ್ಲ ಎಂಬುದು ವಿಶೇಷ.

4 / 6
ಇನ್ನು  ಟಿ20 ಇನ್ನಿಂಗ್ಸ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ಆಟಗಾರರ ಪಟ್ಟಿಯಲ್ಲಿ 2ನೇ ಸ್ಥಾನವನ್ನು  ಭಾರತದ ಆಟಗಾರ ಪುನೀತ್ ಬಿಶ್ತ್  ಪಡೆದುಕೊಂಡಿದ್ದಾರೆ. ಮೇಘಾಲಯ ಪರ ಆಡುತ್ತಿರುವ ಬಿಶ್ತ್ ಈ ವರ್ಷದ ಜನವರಿಯಲ್ಲಿ ಮಿಜೋರಾಂ ವಿರುದ್ಧ 51 ಎಸೆತಗಳಲ್ಲಿ 146 ರನ್​ ಬಾರಿಸಿದ್ದರು. ಈ ಇನಿಂಗ್ಸ್​ನಲ್ಲಿ ಬರೋಬ್ಬರಿ 17 ಸಿಕ್ಸ್​ ಸಿಡಿಸಿ ಈ ಸಾಧನೆ ಮಾಡಿದ್ದರು.

5 / 6
ಹಾಗೆಯೇ ಇಂಗ್ಲೆಂಡ್‌ನ ಗ್ರಹಾಂ ನೇಪಿಯರ್, ಶ್ರೀಲಂಕಾದ ದಸುನ್ ಶಂಕಾ ಮತ್ತು ಅಫ್ಘಾನಿಸ್ತಾನದ ಹಝತುಲ್ಲಾ ಝಜೈ ಅವರು ಟಿ20 ಇನ್ನಿಂಗ್ಸ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಬ್ಯಾಟರುಗಳ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದ್ದಾರೆ. ಈ ಮೂವರು  ಟಿ20ಯ ಇನ್ನಿಂಗ್ಸ್‌ನಲ್ಲಿ ತಲಾ 16 ಸಿಕ್ಸರ್​ಗಳನ್ನು ಬಾರಿಸಿ ದಾಖಲೆ ಬರೆದಿದ್ದಾರೆ.

6 / 6
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ

ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ

ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್

ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ

ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!

ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ

ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ

ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌

ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?

ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ