IND vs AFG: W,W,W,W,W.. ಕನ್ನಡಿಗ ಪ್ರಸಿದ್ಧ್ ಕೃಷ್ಣಗೆ ಮೊದಲ 5 ವಿಕೆಟ್​ಗಳ ಗೊಂಚಲು..!

Updated on: Jun 20, 2026 | 6:27 PM

Prasidh Krishna's Historic Five-Wicket Haul: ಪ್ರಸಿದ್ಧ್ ಕೃಷ್ಣ ಅಫ್ಘಾನಿಸ್ತಾನ ವಿರುದ್ಧ ತಮ್ಮ ಮೊದಲ ಐದು ವಿಕೆಟ್‌ಗಳ ಗೊಂಚಲು ಪಡೆದು ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ ಇತಿಹಾಸ ಸೃಷ್ಟಿಸಿದ್ದಾರೆ. 23 ರನ್‌ ನೀಡಿ 5 ವಿಕೆಟ್‌ ಕಬಳಿಸಿದ ಇದು ಅವರ ವೃತ್ತಿಜೀವನದ ಅತ್ಯುತ್ತಮ ಪ್ರದರ್ಶನವಾಗಿದೆ. ಅಫ್ಘಾನಿಸ್ತಾನದ ಅಗ್ರ ಕ್ರಮಾಂಕವನ್ನು ಪತನಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಈ ಯುವ ವೇಗಿ ಭಾರತ ತಂಡಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ.

1 / 5
ಭಾರತದ ಯುವ ವೇಗಿ ಪ್ರಸಿದ್ಧ್ ಕೃಷ್ಣ ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಅಫ್ಘಾನಿಸ್ತಾನ ವಿರುದ್ಧ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ತಮ್ಮ ವೃತ್ತಿಜೀವನದ ಅತ್ಯುತ್ತಮ ಬೌಲಿಂಗ್‌ ಪ್ರದರ್ಶನದೊಂದಿಗೆ ಮೊದಲ ಬಾರಿಗೆ ಐದು ವಿಕೆಟ್‌ಗಳ ಗೊಂಚಲು ಪಡೆದಿದ್ದಾರೆ. ಪ್ರಸಿದ್ಧ್ ಅವರ ಈ ಮಾರಕ ದಾಳಿಗೆ ನಲುಗಿದ ಅಫ್ಘಾನಿಸ್ತಾನ 218 ರನ್‌ಗಳಿಗೆ ಆಲೌಟ್ ಆಯಿತು (PC-PTI).

2 / 5
ಈ ಪಂದ್ಯದಲ್ಲಿ ವೇಗದ ಬೌಲಿಂಗ್ ವಿಭಾಗದ ಜವಾಬ್ದಾರಿ ಹೊತ್ತಿದ್ದ ಪ್ರಸಿದ್ಧ್ ಕೃಷ್ಣ ತಾವು ದಾಳಿಗಿಳಿದ ಮೊದಲ ಓವರ್​ನಿಂದಲೇ ವಿಕೆಟ್​ಗಳ ಭೇಟೆ ಶುರು ಮಾಡಿ ಪವರ್‌ಪ್ಲೇನಲ್ಲಿ 5 ಓವರ್​ಗಳನ್ನು ಬೌಲ್ ಮಾಡಿ ಪ್ರಮುಖ 4 ವಿಕೆಟ್‌ಗಳನ್ನು ಕಬಳಿಸಿದರು. ಈ ವೇಳೆ ಪ್ರಸಿದ್ಧ್ ನೀಡಿದ್ದು ಕೇವಲ 6 ರನ್. ಹೀಗಾಗಿ ಪ್ರಸಿದ್ಧ್ ದಾಳಿಗೆ ನಲುಗಿದ ಅಫ್ಘಾನಿಸ್ತಾನ ಪವರ್‌ಪ್ಲೇನಲ್ಲಿ ಕೇವಲ 36 ರನ್ ಕಲೆಹಾಕಿ ಪ್ರಮುಖ 4 ವಿಕೆಟ್‌ಗಳನ್ನು ಕಳೆದುಕೊಂಡಿತು (PC-PTI).

3 / 5
ಈ ಪಂದ್ಯದಲ್ಲಿ 8.2 ಓವರ್​ಗಳನ್ನು ಬೌಲ್ ಮಾಡಿದ ಪ್ರಸಿದ್ಧ್ ಕೃಷ್ಣ ಕೇವಲ 23 ರನ್​ಗಳನ್ನು ಬೌಲ್ ಮಾಡಿ 5 ವಿಕೆಟ್‌ಗಳನ್ನು ಕಬಳಿಸಿದರು. ಇದರಲ್ಲಿ 2 ಮೇಡನ್ ಓವರ್​ಗಳು ಸೇರಿದ್ದವು. ಪ್ರಸಿದ್ಧ್ ತೆಗೆದ 5 ವಿಕೆಟ್​ಗಳು ಕೂಡ ಅಫ್ಘಾನಿಸ್ತಾನದ ಅಗ್ರಕ್ರಮಾಂಕದ ಬ್ಯಾಟ್ಸ್‌ಮನ್​ಗಳದ್ದಾಗಿದ್ದು, ಇದರಲ್ಲಿ ಶತಕದ ಇನ್ನಿಂಗ್ಸ್ ಆಡಿದ ಹಶ್ಮತುಲ್ಲಾ ಶಾಹಿದಿ ಅವರ ವಿಕೆಟ್ ಕೂಡ ಸೇರಿತ್ತು (PC-PTI).

4 / 5
ಈ ಪಂದ್ಯಕ್ಕೂ ಮೊದಲು ಪ್ರಸಿದ್ಧ್ ಕೃಷ್ಣ ಅವರ ಅತ್ಯುತ್ತಮ ಬೌಲಿಂಗ್ ಪ್ರದರ್ಶನ 2022 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಬಂದಿತ್ತು. ಅಹಮದಾಬಾದ್‌ನಲ್ಲಿ ನಡೆದಿದ್ದ ಏಕದಿನ ಪಂದ್ಯದಲ್ಲಿ ಪ್ರಸಿದ್ಧ್ 12 ರನ್​ಗಳಿಗೆ 4 ವಿಕೆಟ್ ಕಬಳಿಸಿದ್ದರು. ಈ ಬೌಲಿಂಗ್ ಪ್ರದರ್ಶನಕ್ಕೆ ಪ್ರಸಿದ್ಧ್​ಗೆ ಪಂದ್ಯ ಶ್ರೇಷ್ಠ ಪ್ರಶಸ್ತಿಯೂ ಲಭಿಸಿತ್ತು. ಇದೀಗ ಪ್ರಸಿದ್ಧ್ ಮೊಟ್ಟ ಮೊದಲ 5 ವಿಕೆಟ್​ಗಳ ಗೊಂಚಲು ಪಡೆದಿದ್ದಾರೆ (PC-PTI).

5 / 5
2021 ರಲ್ಲಿ ಇಂಗ್ಲೆಂಡ್‌ ವಿರುದ್ಧ ಏಕದಿನ ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿದ ಪ್ರಸಿದ್ಧ್ ಕೃಷ್ಣ ಇದುವರೆಗೆ ಟೀಂ ಇಂಡಿಯಾ ಪರ 25 ಏಕದಿನ ಪಂದ್ಯಗಳನ್ನಾಡಿದ್ದಾರೆ. ಇದರಲ್ಲಿ 5.91 ರ ಎಕಾನಮಿ ದರದಲ್ಲಿ 45 ವಿಕೆಟ್‌ಗಳನ್ನು ಸಹ ಪಡೆದಿದ್ದಾರೆ. ಮೂರು ಮಾದರಿಯ ಕ್ರಿಕೆಟ್​ನಲ್ಲಿ 37 ಪಂದ್ಯಗಳನ್ನಾಡಿರುವ ಪ್ರಸಿದ್ಧ್ 78 ವಿಕೆಟ್‌ಗಳನ್ನು ಕಬಳಿಸಿದ್ದಾರೆ (PC-PTI).

Follow Us